RAINFALL NEWS, 20 OCTOBER 2024 : ಶಿವಮೊಗ್ಗ ನಗರದಲ್ಲಿ ಪುನಃ ಮಳೆ ಶುರುವಾಗಿದೆ. ಎಲ್ಲೆಡೆ ದಟ್ಟ ಮೋಡ ಆವರಿಸಿದ್ದು, ಗುಡುಗು ಸಹಿತ ಮಳೆ ಆರಂಭವಾಗಿದೆ.
ಕಳೆದ ರಾತ್ರಿ ಪೂರ್ತಿ ಅಬ್ಬರಿಸಿದ್ದ ಮಳೆ ಬೆಳಗ್ಗೆ 11 ಗಂಟೆ ಹೊತ್ತಿಗೆ ಬಿಡುವು ನೀಡಿತ್ತು. ಮಧ್ಯಾಹ್ನದವರೆಗೆ ನಗರದಲ್ಲಿ ಬಿಸಿಲು ಇತ್ತು. ಈಗ ಪುನಃ ಮೋಡ ಕವಿದಿದ್ದು ಮಳೆ ಅಬ್ಬರಿಸಲು ಆರಂಭವಾಗಿದೆ. ಭಾರಿ ಮಳೆಯಿಂದಾಗಿ ನಗರದಲ್ಲಿ ಸಾಕಷ್ಟು ಹಾನಿಯಾಗಿದೆ. ಪುನಃ ಮಳೆ ಶುರುವಾಗಿರುವುದು ಆತಂಕ ಮೂಡಿಸಿದೆ.

ಇದನ್ನೂ ಓದಿ » ಲಕ್ಕಿನಕೊಪ್ಪದಲ್ಲಿ ಕೋಡಿ ಬಿದ್ದ ಕೆರೆ, ಕೊಚ್ಚಿ ಹೋದ ರಸ್ತೆ ಪಕ್ಕದ ಮಣ್ಣು, ಜಮೀನಿಗೆ ನೀರು
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್ ನಂಬರ್: 7411700200
