ಶಿವಮೊಗ್ಗ: ಇತ್ತೀಚೆಗೆ ನಡೆದ 2025-31ನೇ ಸಾಲಿನ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಮತ್ತು ತಾಲೂಕು ಮಟ್ಟದ ಚುನಾವಣೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಪ್ರಕಾಶ್ ಎಸ್. ಮಡ್ಲೂರ್ ಮತ್ತು ಶಿವಮೊಗ್ಗ ತಾಲೂಕು ಘಟಕದ ಅಧ್ಯಕ್ಷರಾಗಿ ಎಂ. ಜಯ ಆಯ್ಕೆಯಾಗಿದ್ದಾರೆ.
ಜಿಲ್ಲಾ ಘಟಕಕ್ಕೆ ಉಪಾಧ್ಯಕ್ಷರಾಗಿ ಬಿ. ಆರ್. ಮಂಜಪ್ಪ, ಚಿತ್ರಾ (ಮಹಿಳೆ), ಪ್ರಧಾನ ಕಾರ್ಯದರ್ಶಿಯಾಗಿ ಎಂ. ಸಿ. ಮಂಜುನಾಥ, ಕೋಶಾಧ್ಯಕ್ಷರಾಗಿ ಜಿ.ಎಂ.ದಿನೇಶ್, ಸಹ ಕಾರ್ಯದರ್ಶಿ ಬಿ. ರುದ್ರೇಶ್, ಎನ್. ಕೆ. ವಾಣಿ (ಮಹಿಳೆ), ಸಂಘಟನಾ ಕಾರ್ಯದರ್ಶಿ ಎಂ. ಮಾಲತೇಶ್, ಸಾಜಿದಾಬಾನು (ಮಹಿಳೆ) ಅವರನ್ನು ಆಯ್ಕೆ ಮಾಡಲಾಗಿದೆ.

ಶಿವಮೊಗ್ಗ ತಾಲೂಕು ಘಟಕದ ಉಪಾಧ್ಯಕ್ಷರಾಗಿ ಎ. ಕೆ. ನಾಗರಾಜ, ಟಿ. ಕೆ. ಸುನೀತಾ (ಮಹಿಳೆ), ಪ್ರಧಾನ ಕಾರ್ಯದರ್ಶಿ ಬಿ. ಆನಂದಪ್ಪ, ಕೋಶಾಧ್ಯಕ್ಷ ಜಿ. ರವಿ, ಸಹ ಕಾರ್ಯದರ್ಶಿ ಹೆಚ್.ಬಿ.ರುದ್ರೇಶ್, ಕೆ.ಎಸ್.ಅನಿತಾ ಕುಮಾರಿ, ಸಂಘಟನಾ ಕಾರ್ಯದರ್ಶಿ ಬಿ.ಎನ್.ನಾಗಭೂಷಣ, ಶಶಿರೇಖಾ ಜಿ.ಭಟ್ (ಮಹಿಳೆ) ಆಯ್ಕೆಯಾಗಿದ್ದಾರೆ.
ನೂತನವಾಗಿ ಆಯ್ಕೆಯಾಗಿರುವ ಎಲ್ಲ ಪ್ರತಿನಿಧಿಗಳಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ. ಎಸ್. ಷಡಾಕ್ಷರಿ, ಜಿಲ್ಲಾ ಸಂಘದ ಅಧ್ಯಕ್ಷ ಆರ್. ಮೋಹನ್ ಕುಮಾರ್ ಅಭಿನಂದಿಸಿದ್ದಾರೆ.

