ಶಿವಮೊಗ್ಗದಲ್ಲಿ ಮೊಬೈಲ್‌ ಟವರ್‌ ಕಳ್ಳತನ, ಖಾಲಿ ಜಾಗದಲ್ಲಿದ್ದದ್ದು ದಿಢೀರ್‌ ನಾಪತ್ತೆ

SHIMOGA NEWS, 23 OCTOBER 2024 : ಖಾಲಿ ಜಾಗದಲ್ಲಿ ಅಳವಡಿಸಿದ್ದ ಮೊಬೈಲ್‌ ಟವರ್‌ (Tower) ಕಳ್ಳತನವಾಗಿದೆ. ಈ ಸಂಬಂಧ ಶಿವಮೊಗ್ಗದಲ್ಲಿ ಪ್ರಕರಣ ದಾಖಲಾಗಿದೆ. ➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ಶಿವಮೊಗ್ಗ ಟಿಪ್ಪು ನಗರದ ಖಾಲಿ ಜಾಗದಲ್ಲಿ ಖಾಸಗಿ ಸಂಸ್ಥೆಯೊಂದು 2008ರಲ್ಲಿ ಮೊಬೈಲ್‌ ಟವರ್‌ ಅಳವಡಿಸಿತ್ತು. ಅದೇ ಸಂಸ್ಥೆ ಟವರ್‌ನ ನಿರ್ವಹಣೆ ಮಾಡುತ್ತಿತ್ತು. ಕೋವಿಡ್‌ ಸಂದರ್ಭ ನಿರ್ವಹಣೆ ಸಾಧ್ಯವಾಗಿರಲಿಲ್ಲ. ಆ ಬಳಿಕ ಸಂಸ್ಥೆಯವರು ಸ್ಥಳಕ್ಕೆ ಬಂದಾಗ ಮೊಬೈಲ್‌ ಟವರ್‌ ಮತ್ತು ಅದಕ್ಕೆ ಅಳವಡಿಸಿದ್ದ ಬಿಡಿ ಭಾಗಗಳೆ ನಾಪತ್ತೆಯಾಗಿದ್ದವು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Crime-News-General-Image

ಇದನ್ನೂ ಓದಿ » ಗೌರಿ ಹಂತಕರಿಗೆ ಸನ್ಮಾನ, ಶಿವಮೊಗ್ಗದಲ್ಲಿ ಆಕ್ರೋಶ, ಜಾಮೀನು ವಜಾಗೆ ಆಗ್ರಹ

ಈ ಸಂಬಂಧ ಖಾಸಗಿ ಸಂಸ್ಥೆ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿತ್ತು. ಈಗ ನ್ಯಾಯಾಲಯದ ಸೂಚನೆ ಮೇರೆಗೆ ತುಂಗಾ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟವರ್‌ ಮತ್ತು ಬಿಡಿ ಭಾಗಗಳ ಅಂದಾಜು ಮೌಲ್ಯ 46.30 ಲಕ್ಷ ರೂ. ಎಂದು ಉಲ್ಲೇಖಿಸಲಾಗಿದೆ.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Leave a Comment

ಮುಂದಿನ ಸುದ್ದಿ ಓದಿ TRENDING

ಶಿವಮೊಗ್ಗದಲ್ಲಿ ದೊಡ್ಡಪೇಟೆ ಠಾಣೆ ಪೊಲೀಸರ ದಾಳಿ, ₹65,000 ಮೌಲ್ಯದ ಮಾದಕ ವಸ್ತು ಸಹಿತ ಒಬ್ಬ ಅರೆಸ್ಟ್‌