ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
HOSANAGARA NEWS, 27 OCTOBER 2024 : ಒಂದೇ ಸ್ಥಳದಲ್ಲಿ ಎರಡು ಬಾರಿ ಹೆಜ್ಜೇನುಗಳು (Bee Attack) ದಾಳಿ ನಡಿಸಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. ಹೊಸನಗರ ತಾಲೂಕು ಬಿದನೂರು ನಗರದಲ್ಲಿ ಶನಿವಾರ ಮಧ್ಯಾಹ್ನ ಮತ್ತು ಸಂಜೆ ಒಂದೇ ಸ್ಥಳದಲ್ಲಿ ಎರಡು ಬಾರಿ ಹೆಜ್ಜೇನುಗಳು ದಾಳಿ ನಡೆಸಿವೆ.
ಮಧ್ಯಾಹ್ನದ ಘಟನೆ
ಚಿಕ್ಕಪೇಟೆಯ ಬಾಷಾ ಎಂಬುವವರ ಮನೆ ಸಮೀಪ ಜೇನು ದಾಳಿ ನಡೆಸಿವೆ. ಬಾಷಾ, ಪತ್ನಿ ಆಸ್ಮಾ ಬಾನು, ಮಕ್ಕಳಾದ ಆರೀಫ್, ಅನೀಫ್ ಎಂಬುವವರು ಗಾಯಗೊಂಡಿದ್ದರು. ನಗರ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿತ್ತು.
ಸಂಜೆ ಮತ್ತೆ ದಾಳಿ Bee
ಹೆಜ್ಜೇನುಗಳು ಸಂಜೆ ವೇಳೆಗೆ ಅದೇ ಸ್ಥಳದಲ್ಲಿ ಪುನಃ ದಾಳಿ ನಡೆಸಿದೆ. ಆಗ ಬಾಷಾ ಅವರ ಪುತ್ರ ಆರಿಫ್ ಮೇಲೆ ಮತ್ತೆ ದಾಳಿ ನಡೆಸಿವೆ. ಯಾಸಿನ್, ಹಾಸಿಗೆ ರಿಪೇರಿಗೆ ಬಂದಿದ್ದ ಶಿವಮೊಗ್ಗದ ಹುಸೇನ್ ಸಾಬ್ ಮತ್ತು ಅವರ ಪುತ್ರ ಬಾಬಾ ಸಾಬ್ ಎಂಬುವವರ ಮೇಲೆ ದಾಳಿ ನಡೆಸಿದ್ದವು. ಗಾಯಗೊಂಡಿದ್ದವರು ಕೂಡಲೆ ಗಾಯಾಳುಗಳನ್ನು ನಗರ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಇದನ್ನೂ ಓದಿ » ಕುಂಸಿ ಠಾಣೆಗೆ ಹೋಮ್ ಮಿನಿಸ್ಟರ್ ದಿಢೀರ್ ಭೇಟಿ, ಏನೆಲ್ಲ ಚೆಕ್ ಮಾಡಿದರು?
ಹುಸೇನ್ ಸಾಬ್ ಅವರಿಗೆ ಗಂಭೀರ ಗಾಯವಾಗಿದ್ದು ಹೊಸನಗರದ ಸರ್ಕಾರಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ. ಒಂದೇ ಸ್ಥಳದಲ್ಲಿ ಎರಡು ಬಾರಿ ಹೆಜ್ಜೇನುಗಳು ದಾಳಿ ನಡೆಸಿರುವ ಪ್ರಕರಣ ಸ್ಥಳೀಯಲ್ಲಿ ಆತಂಕ ಮೂಡಿಸಿದೆ.
LATEST NEWS
- ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್? – 27 ಮಾರ್ಚ್ 2026

- ಆಗುಂಬೆ ಘಾಟಿಯಲ್ಲಿ ರಸ್ತೆಗೆ ಬಿದ್ದ ಮರ, ಕೆಲ ಹೊತ್ತು ಟ್ರಾಫಿಕ್ ಜಾಮ್

- ಕುಟುಂಬದ ಜೊತೆ ಊಟ ಮುಗಿಸಿ, ಮಾತನಾಡಿ ಮಲಗಲು ತೆರಳಿದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

- ಶಿವಮೊಗ್ಗದಲ್ಲಿ ಶ್ರೀಕಾಂತಣ್ಣ ಕಪ್ ಕ್ರಿಕೆಟ್ ಪಂದ್ಯಾವಳಿ, ಟ್ರೋಫಿ, ಟೀ ಶರ್ಟ್ಗಳ ಅನಾವರಣ

- ಸರ್ವೆಗೆ ಹೋದಾಗ ಇಂಜಿನಿಯರ್, ಸರ್ವೇಯರ್ ಮೇಲೆ ಕೋಲು, ಕಲ್ಲುಗಳಿಂದ ದಾಳಿ

About The Editor
ನಿತಿನ್ ಆರ್.ಕೈದೊಟ್ಲು















