ಕೆಲಸದ ನಿರೀಕ್ಷೆ, ಶಿವಮೊಗ್ಗದ ಯುವಕರು ಕಳೆದುಕೊಂಡಿದ್ದು 58 ಲಕ್ಷ , ಆಗಿದ್ದೇನು?

SHIMOGA NEWS, 29 OCTOBER 2024 : ಉದ್ಯೋಗ ಸಂಬಂಧಿ ವಾಟ್ಸಪ್‌ ಗ್ರೂಪ್‌ ಸೇರಿದ್ದ ಯುವಕರಿಗೆ ಪ್ರತಿಷ್ಠಿತ ಕಂಪನಿಗಳಲ್ಲಿ ಆನ್‌ಲೈನ್‌ (Online) ಉದ್ಯೋಗ ಕೊಡಿಸುವ ಆಮಿಷವೊಡ್ಡಿ, 58 ಲಕ್ಷ ರೂ. ವಂಚಿಸಲಾಗಿದೆ. ನಾಲ್ಕು ಬಾರಿ ವಿವಿಧ ಕಾರಣ ಹೇಳಿ ಹಣ ಪಡೆದು ಮೋಸ ಮಾಡಲಾಗಿದೆ.

ONLINE ಕೆಲಸಕ್ಕೆ ಹಣ ಕೊಡಬೇಕು

ಶಿವಮೊಗ್ಗದ ಯುವಕರ ಗುಂಪೊಂದು (ಹೆಸರುಗಳು ಗೌಪ್ಯ) ಆನ್‌ಲೈನ್‌ನಲ್ಲಿ ಟೆಕ್ನಿಕಲ್‌ ಸ್ಕಿಲ್‌ ತರಬೇತಿ ನೀಡುತ್ತಿದ್ದಾಗ ಉದ್ಯೋಗ ಸಂಬಂಧಿ ವಾಟ್ಸಪ್ ಗ್ರೂಪ್‌ ಸೇರಿದ್ದರು. ಈ ಪೈಕಿ ಒಬ್ಬಾತನಿಗೆ ಶ್ರೀನಿಧಿ ಎಂಬಾತ ಕರೆ ಮಾಡಿ ಗ್ರೂಪ್‌ ಬಗ್ಗೆ ಚರ್ಚೆ ನಡೆಸಿ, ಪ್ರತಿಷ್ಠಿತ ಕಂಪನಿಗಳಲ್ಲಿ ಆನ್‌ಲೈನ್‌ ಉದ್ಯೋಗ ಕೊಡಿಸುವ ಭರವಸೆ ನೀಡಿದ್ದ. ತಮ್ಮ ಬಳಿ ತರಬೇತಿ ಪಡೆಯುತ್ತಿರುವ ಯುವಕರಿಗೂ ಉದ್ಯೋಗವಕಾಶವಿದೆ. ಆದರೆ ಅಭ್ಯರ್ಥಿಗಳು ಹಣ ನೀಡಬೇಕು ಎಂದು ಸೂಚಿಸಿದ್ದ.

Online-Fraud-In-Shimoga

ಆಫರ್‌ ಲೆಟರ್‌ ಬಂದರೂ ಕೆಲಸವಿಲ್ಲ

ಅದರಂತೆ ಮೊದಲ ಬಾರಿ ಫೋನ್‌ ಪೇ ಮೂಲಕ 6.69 ಲಕ್ಷ ರೂ. ಪಾವತಿಸಲಾಗಿತ್ತು. ನಕಲಿ ಕಂಪನಿಯೊಂದರ ಲೆಟರ್‌ಹೆಡ್‌ನಲ್ಲಿ ಆಫರ್‌ ಲೆಟರ್‌ ನೀಡಿ, ಲ್ಯಾಪ್‌ಟಾಪ್‌ ಒದಗಿಸಲಾಗಿತ್ತು. ಆದರೆ ಉದ್ಯೋಗ ನೀಡಿರಲಿಲ್ಲ. ಕರೆ ಮಾಡಿದಾಗ ಕಂಪನಿಯ ಮಾಲೀಕ ಎಂದು ಮತ್ತೊಬ್ಬ ವ್ಯಕ್ತಿಯ ಮೊಬೈಲ್‌ ನಂಬರ್‌ ನೀಡಲಾಗಿತ್ತು. ಆತ 20.13 ಲಕ್ಷ ರೂ. ಹಣ ಪಡೆದು ಕೆಲಸ ಕೊಡದೆ ವಂಚಿಸಿದ್ದ.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಕೊಠಡಿಯೊಳಗೆ ಗಂಡ, ಹೆಂಡತಿ Digital Arrest, ಏನಿದು?

ಹಂತ ಹಂತವಾಗಿ ಹೋಯ್ತು ಲಕ್ಷ ಲಕ್ಷ

2022 ರಿಂದ 2024ರವರೆಗೆ ಹಂತ ಹಂತವಾಗಿ ಒಟ್ಟು 58 ಲಕ್ಷ ರೂ. ಹಣ ಪಡೆದು ಕೆಲಸ ಕೊಡಿಸದೆ ವಂಚಿಸಲಾಗಿದೆ. ಈ ಸಂಬಂಧ ಶಿವಮೊಗ್ಗದ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಉದ್ಯೋಗದ ಆಮಿಷವೊಡ್ಡಿ ನಾನಾ ಬಗೆಯಲ್ಲಿ ಅಭ್ಯರ್ಥಿಗಳನ್ನು ವಂಚಿಸಲಾಗುತ್ತಿದೆ. ಪಾರ್ಟ್‌ ಟೈಮ್‌ ಉದ್ಯೋಗ, ಮೊಬೈಲ್‌ನಲ್ಲೇ ಕೆಲಸ, ಪ್ರತಿಷ್ಠಿತ ಕಂಪನಿಗಳಲ್ಲಿ ಆನ್‌ಲೈನ್‌ ಜಾಬ್‌ ಎಂಬ ನೆಪವೊಡ್ಡಿ ಅಭ್ಯರ್ಥಿಗಳಿಂದ ಲಕ್ಷಾಂತರ ರೂ. ಪಡೆದು ಮೋಸ ಮಾಡಲಾಗುತ್ತಿದೆ. ಉದ್ಯೋಗಾಕಾಂಕ್ಷಿಗಳು ಈ ಕುರಿತು ಎಚ್ಚರ ವಹಿಸಬೇಕಿದೆ.

ಇದನ್ನೂ ಓದಿ » ಪಾರ್ಟ್‌ ಟೈಮ್‌ ಕೆಲಸಕ್ಕಾಗಿ ಬ್ಯಾಂಕಿನಲ್ಲಿದ್ದ ಫುಲ್‌ ಹಣ ಕಳೆದುಕೊಂಡ ಮಹಿಳೆ

Online-Fraud-In-Shimoga

Leave a Comment