SHIMOGA NEWS, 3 NOVEMBER 2024 : ಯಾರೂ ಇಲ್ಲದಾಗ ಮನೆ ಬಾಗಲಿನ ಲಾಕ್ ಮುರಿದು ಸುಮಾರು 50 ಸಾವಿರ ರೂ. ಮೌಲ್ಯದ ಪಾತ್ರೆಗಳು (Vessels) ಮತ್ತು ಹೊಟೇಲ್ ಸಾಮಗ್ರಿ ಕಳ್ಳತನ ಮಾಡಲಾಗಿದೆ. ಶಿವಮೊಗ್ಗದ ಬಾಪೂಜಿ ನಗರದ 5ನೇ ಅಡ್ಡರಸ್ತೆಯಲ್ಲಿರುವ ರವಿಕುಮಾರ್ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ.
ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:
ರವಿಕುಮಾರ್ ಕೆಲವು ತಿಂಗಳಿಂದ ಮಂಗಳೂರಿನಲ್ಲಿ ಲಾರಿ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಅವರ ಪತ್ನಿ ಮಣಿಪಾಲದಲ್ಲಿ ವೃದ್ಧರ ಶುಶ್ರೂಷೆ ಕಾರ್ಯದಲ್ಲಿ ತೊಡಗಿದ್ದಾರೆ. ಹಾಗಾಗಿ ಇಬ್ಬರು ಮನೆಯಲ್ಲಿ ಇರಲಿಲ್ಲ. ಇದೇ ಸಂದರ್ಭ ಮನೆ ಬಾಗಲಿನ ಬೀಗ ಮುರಿದು ಕಳ್ಳರು ಒಳ ನುಗ್ಗಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ » ಬಸ್ ಹತ್ತಿ ತಾಯಿಯತ್ತ ತಿರುಗಿದ ಮಗಳಿಗೆ ಕಾದಿತ್ತು ಶಾಕ್
ರವಿಕುಮಾರ್ ಈ ಹಿಂದೆ ಹೊಟೇಲ್ ಉದ್ಯಮ ನಡೆಸುತ್ತಿದ್ದರು. ಹಾಗಾಗಿ ಹೊಟೇಲ್‌ನ ಟೇಬಲ್, ಚೇರುಗಳು, ದೊಡ್ಡ ಸ್ಟೌ, ಪಾತ್ರೆಗಳು ಮತ್ತು ಗೃಹ ಬಳಕೆ ಪಾತ್ರೆಗಳು ಮನೆಯಲ್ಲಿಟ್ಟಿದ್ದರು. ಈಚೆಗೆ ಮನೆಗೆ ಕಳ್ಳತನವಾಗಿರುವುದು ಗೊತ್ತಾಗಿದೆ. ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
LATEST NEWS
- ಉಪನ್ಯಾಸಕಿಗೆ ವಿಡಿಯೋ ಕರೆ ಮಾಡಿ ಅಶ್ಲೀಲ ವರ್ತನೆ, ದಾಖಲಾಯ್ತು ಕೇಸ್, ಏನಿದು ಪ್ರಕರಣ?

- ಕಪ್ಪು ಪ್ಯಾಕೆಟ್ ಕೇಸ್, ಮೂವರು ಅರೆಸ್ಟ್, ಏನಿದು ಪ್ರಕರಣ? ಯಾರಿವರು ಬಂಧಿತರು?

- ಅರ್ಜಿಗಳನ್ನು ಪೂರ್ತಿಗೊಳಿಸಲು ಫೆಬ್ರವರಿ 12ರವರೆಗೆ ಅವಕಾಶ, ಇಲ್ಲಿದೆ ಕಂಪ್ಲೀಟ್ ಮಾಹಿತಿ

- ಸೋಗಾನೆಯಲ್ಲಿ ಧಗಧಗ ಹೊತ್ತಿ ಉರಿದ ತೊಗರಿ, ಹುರುಳಿಯ ಬೊಣವೆ, ಆಗಿದ್ದೇನು?

- ಕಾರು, ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಗೆ ನೆರವಾದ ಶಿವಮೊಗ್ಗ ಜಿಲ್ಲಾಧಿಕಾರಿ, ಆಗಿದ್ದೇನು?

About The Editor
ನಿತಿನ್ ಆರ್.ಕೈದೊಟ್ಲು






