ಶಿವಮೊಗ್ಗಕ್ಕೆ ಇವತ್ತು ಪಾದಯಾತ್ರೆ ಎಂಟ್ರಿ, ನಾಳೆ ತುಂಗಾ ಆರತಿ

SHIMOGA NEWS, 9 NOVEMBER 2024 : ನಿರ್ಮಲ ತುಂಗಭದ್ರಾ ಅಭಿಯಾನದ ಪಾದಯಾತ್ರೆ ಇವತ್ತು ಶಿವಮೊಗ್ಗ ನಗರ ಪ್ರವೇಶಿಸುತ್ತಿದೆ. ನಾಳೆ ತುಂಗಾ (Tunga) ನದಿ ದಂಡೆಯ ಮೇಲೆ ತುಂಗಾ ಆರತಿ ನಡೆಯಲಿದೆ. (ಈ ಸುದ್ದಿಯನ್ನು ಇನ್ನು 76 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಎಸ್‌.ಎನ್.ಚನ್ನಬಸಪ್ಪ, ಶೃಂಗೇರಿಯಿಂದ ಕಿಷ್ಕಿಂದೆಯವರೆಗೆ ನಿರ್ಮಲ ತುಂಗಭದ್ರ ಅಭಿಯಾನದ ಭಾಗವಾಗಿ ಜಲ ಜಾಗೃತಿ ಮತ್ತು ಜನ ಜಾಗೃತಿಗಾಗಿ ಪಾದಯಾತ್ರೆ ನಡೆಸಲಾಗುತ್ತಿದೆ. ಇವತ್ತು ಸಂಜೆ ಪಾದಯಾತ್ರೆ ಶಿವಮೊಗ್ಗ ನಗರ ಪ್ರವೇಶಿಸಲಿದೆ ಎಂದು ತಿಳಿಸಿದರು.

MLA-Channabasappa-about-Padayatre

ನ.10ರಂದು ಬೆಳಗ್ಗೆ 8.30ಕ್ಕೆ ಡಾ. ಅಂಬೇಡ್ಕರ್‌ ಭವನದಲ್ಲಿ ಪ್ರಬುದ್ಧರ ಸಭೆ ನಡೆಯಲಿದೆ. ಸಂಜೆ 6.30ಕ್ಕೆ ಕೋರ್ಪಲಯ್ಯ ಛತ್ರ ಮಂಟಪದ ಬಳಿ ತುಂಗಾ ಆರತಿ ಆಯೋಜಿಸಲಾಗಿದೆ. ನ.11ರಂದು ಬೆಳಗ್ಗೆ 8 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಯುವ ಜಾಗೃತಿ ಕಾರ್ಯಕ್ರಮ ನಡೆಯಲಿದೆ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ

ಎಸ್‌.ಎನ್.ಚನ್ನಬಸಪ್ಪ, ಶಾಸಕ

MLA-Channabasappa-about-Padayatre

RED-LINE-

ತುಂಗಾ ಆರತಿಗೆ ಸಿದ್ಧತೆ ಜೋರು

ಕೋರ್ಪಲಯ್ಯ ಛತ್ರ ಮಂಟಪದಲ್ಲಿ ತುಂಗಾ ಆರತಿಗೆ ಸಿದ್ಧತೆ ನಡೆಯುತ್ತಿದೆ. ಮಂಟಪಕ್ಕೆ ಸುಣ್ಣ ಬಳಿದು ಅಣಿಗೊಳಿಸಲಾಗಿದೆ. ಮಂಟಪದ ಸುತ್ತಮುತ್ತ ವಿದ್ಯುತ್‌ ದೀಪಾಲಂಕಾರ ಮಾಡಲಾಗುತ್ತಿದೆ. ಶೃಂಗೇರಿ ಮಠದ ಅಭಿನವ ಶಂಕರ ಭಾರತಿ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಜಿಲ್ಲಾ ಉಸ್ತವಾರಿ ಸಚಿವ ಮಧು ಬಂಗಾರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಚನ್ನಬಸಪ್ಪ, ವಿಧಾನ ಪರಿಷತ್‌ ಸದಸ್ಯರಾದ ಡಾ. ಧನಂಜಯ ಸರ್ಜಿ, ಮಾಜಿ ಎಂಎಲ್‌ಸಿ ರುದ್ರೇಗೌಡ ಸೇರಿ ಹಲವರು ಭಾಗವಹಿಸಲಿದ್ದಾರೆ.

Tunga River

ತೀರ್ಥಹಳ್ಳಿಯಲ್ಲಿ ಪಾದಯಾತ್ರೆಗೆ ಭಾರಿ ಬೆಂಬಲ

ರಾಷ್ಟ್ರೀಯ ಸ್ವಾಭಿಮಾನ ಆಂದೋಲನ, ಪರ್ಯಾವರಣ ಟ್ರಸ್ಟ್‌ ಸಹಯೋಗದಲ್ಲಿ ಶೃಂಗೇರಿಯಿಂದ ಹೊರಟಿರುವ ನಿರ್ಮಲ ತುಂಗಭದ್ರಾ ಅಭಿಯಾನ ಪಾದಯಾತ್ರೆಗೆ ತೀರ್ಥಹಳ್ಳಿಯಲ್ಲಿ ಭಾರಿ ಬೆಂಬಲ ವ್ಯಕ್ತವಾಯಿತು. ಶುಕ್ರವಾರ ಭೀಮನಕಟ್ಟೆ ಮಾರ್ಗವಾಗಿ ಪಾದಯಾತ್ರೆಯು ತೀರ್ಥಹಳ್ಳಿ ಪಟ್ಟಣ ಪ್ರವೇಶಿಸಿತು. ನಂತರ ಗ್ರಾಮೀಣ ಭವನದಲ್ಲಿ ಸಭೆಯಲ್ಲಿ ನಡೆಯಿತು. ಪರಿಸರ ಹೋರಾಟಗಾರರು ಹಾಗೂ ರಾಜಕೀಯ ಮುಖಂಡರು ಜಲಜಾಗೃತಿ ಮೂಡಿಸಿದರು.

ಇದನ್ನೂ ಓದಿ » ಶಿವಮೊಗ್ಗದ ಯುವತಿಗೆ ಮುಂಬೈ ಪೊಲೀಸರಿಂದ ಫೋನ್‌, ಆಮೇಲೆ ಕಾದಿತ್ತು ದೊಡ್ಡ ಶಾಕ್‌

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Leave a Comment