ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
THIRTHAHALLI NEWS, 10 NOVEMBER 2024 : ಹಣಗೆರೆಯ ಹಜರತ್ ಸೈಯದ್ ಸಾದತ್ ದರ್ಗಾ ಮತ್ತು ಭೂತರಾಯ ಚೌಡೇಶ್ವರಿ ದೇವಸ್ಥಾನದಲ್ಲಿ ಗುರುವಾರ ನಡೆದ ಹುಂಡಿ ಎಣಿಕೆ ಹಣದಲ್ಲಿ (Money) ಮೋಸವಾಗಿದ್ದು, ಈ ಕುರಿತು ಧಾರ್ಮಿಕ ಪರಿಷತ್ ಆಡಳಿತ ಮಂಡಳಿಯು ತಹಶೀಲ್ದಾರ್‌ಗೆ ದೂರು ಸಲ್ಲಿಸಿದ್ದರಿಂದ ಶುಕ್ರವಾರ ಮರು ಎಣಿಕೆ ನಡೆಯಿತು.
ಕಂತೆಯಲ್ಲಿ ಹೆಚ್ಚುವರಿ ನೋಟು
ವಾರ್ಷಿಕ 2 ಕೋಟಿಗೂ ಹೆಚ್ಚು ಆದಾಯ ಹೊಂದಿರುವ ಧಾರ್ಮಿಕ ಕೇಂದ್ರದಲ್ಲಿ ತ್ರೈಮಾಸಿಕ ಸರಾಸರಿ 50 ಲಕ್ಷ ರೂ.ಗು ಹೆಚ್ಚು ಮೊತ್ತ ಕಾಣಿಕೆ ರೂಪದಲ್ಲಿ ಸಂಗ್ರಹವಾಗುತ್ತದೆ. ಗುರುವಾರ ಎಂದಿನಂತೆ ಹುಂಡಿ ಎಣಿಕೆ ನಡೆದಿದ್ದು, ಲಕ್ಷ ರೂ. ನೋಟಿನ ಕಂತೆಯಲ್ಲಿ ಹೆಚ್ಚುವರಿ ನೋಟುಗಳು ಪತ್ತೆಯಾಗಿದ್ದವು. ಅದನ್ನು ಗಮನಿಸಿದ ಆಡಳಿತ ಮಂಡಳಿ ತಹಶೀಲ್ದಾರ್‌ಗೆ ದೂರು ನೀಡಿದೆ.
ರಾತ್ರಿ ಆಡಳಿತ ಮಂಡಳಿ – ಕಂದಾಯ ಅಧಿಕಾರಿಗಳ ನಡುವೆ ವಾಗ್ವಾದ ನಡೆದ ಬಳಿಕ ಸಂಗ್ರಹವಾದ ಹಣವನ್ನು ಬಿಗಿ ಬಂದೋಬಸ್ತ್‌ನಲ್ಲಿ ತಾಲ್ಲೂಕು ಕಚೇರಿಯ ಖಜಾನೆಯಲ್ಲಿ ಇರಿಸಲಾಗಿತ್ತು.
ಮರು ಎಣಿಕೆಯಲ್ಲಿ ಹೆಚ್ಚುವರಿ ಹಣ ಪತ್ತೆ
ಶುಕ್ರವಾರ ತಹಶೀಲ್ದಾರ್, ಡಿವೈಎಸ್‌ಪಿ ಬಂದೋಬಸ್ತ್‌ನಲ್ಲಿ ಪುನಃ ಧಾರ್ಮಿಕ ಕೇಂದ್ರಕ್ಕೆ ಹಣ ರವಾನಿಸಿ ಎಣಿಕೆ ಮಾಡಲಾಯಿತು. ಒಟ್ಟು 66,04,950 ರೂ. ಮೊತ್ತ ಕಾಣಿಕೆ ರೂಪದಲ್ಲಿ ದೇವಸ್ಥಾನಕ್ಕೆ ಸಂದಾಯವಾಗಿದೆ. ಹಣದ ಕಂತೆಯಲ್ಲಿ ಹೆಚ್ಚುವರಿ 77,930 ರೂ. ಸೇರಿಸಿ ಅದನ್ನು ಲಪಟಾಯಿಸಲು ಪ್ರಯತ್ನಿಸಿರುವುದು ಗೊತ್ತಾಗಿದೆ.
ಕಾಣಿಕೆ ಹಣ ಎಣಿಕೆ ಕಾರ್ಯ ಮುಕ್ತಾಯದ ಹಂತದಲ್ಲಿ ನಮಗೆ ಅನುಮಾನ ಬಂದು ಒಂದೆರಡು ಕಂತೆಯನ್ನು ಮರು ಎಣಿಕೆ ಮಾಡಿಸಿದೆವು. ಆಗ ವ್ಯತ್ಯಾಸ ಕಂಡು ಬಂದಿದೆ. ರಾತ್ರಿ ವಿಳಂಬವಾಗಿದ್ದರಿಂದ ತಾಲೂಕು ಖಜಾನೆಯಲ್ಲಿ ಹಣ ಇರಿಸಿದ್ದೆವು. ಪುನಃ ಎಣಿಕೆ ಮಾಡಿದಾಗ 77,930 ಹೆಚ್ಚುವರಿ ಹಣ ಬಂದಿದೆ. ಮುಂದಿನ ಕ್ರಮ ಕೈಗೊಳ್ಳುವಂತೆ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಗೆ ತಹಶೀಲ್ದಾರ್ ಮೂಲಕ ಶಿಫಾರಸು ಪತ್ರ ಕಳುಹಿಸುತ್ತಿದ್ದೇವೆ.
ರಾಮಪ್ಪ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ
ಈ ಸಂಬಂಧ ತಹಶೀಲ್ದಾರ್ ತನಿಖೆ ಆರಂಭಿಸಿದ್ದು, ಪ್ರಕರಣ ವಿವಾದಕ್ಕೆ ತಿರುಗಿದೆ. ಆಡಳಿತ ಮಂಡಳಿಯು ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಗೆ ದೂರು ನೀಡಲು ನಿರ್ಧರಿಸಿದೆ.
ಇದನ್ನೂ ಓದಿ » ಶಿವಮೊಗ್ಗಕ್ಕೆ ಮತ್ತೊಂದು ಕಾರು ಶೋ ರೂಂ, ಮಲೆನಾಡಿಗೆ ಇಸೂಝು ಎಂಟ್ರಿ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422