ಮೈಸೂರಿನಿಂದ ಶಿವಮೊಗ್ಗಕ್ಕೆ ಬಂದ ವ್ಯಕ್ತಿ ಲಾಡ್ಜ್‌ನಲ್ಲಿ ನೇಣಿಗೆ ಶರಣು

SHIMOGA NEWS, 20 NOVEMBER 2024 : ಮೈಸೂರು (Mysore) ಮೂಲದ ವ್ಯಕ್ತಿಯೊಬ್ಬರು ಶಿವಮೊಗ್ಗದ ಲಾಡ್ಜ್‌ ಒಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೊಠಡಿಯಲ್ಲಿ ಡೆತ್‌ ನೋಟ್‌ ಪತ್ತೆಯಾಗಿದ್ದು ಬ್ಯಾಂಕ್‌ ಮ್ಯಾನೇಜರ್‌ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ನಂಜಪ್ಪ ಲೈಫ್‌ ಕೇರ್‌ನಲ್ಲಿ ಉಚಿತ ಸಮಾಲೋಚನೆ, 40% ರಿಯಾಯಿತಿ Nanjappa Hospital Advertisement ಇಲ್ಲಿ ಕ್ಲಿಕ್‌ ಮಾಡಿ ನೇರವಾಗಿ ಕರೆ ಮಾಡಿ ಹೆಸರು ನೋಂದಾಯಿಸಿ

ಮೈಸೂರಿನ ವಿಜಯನಗರ ನಿವಾಸಿ ರವಿಕುಮಾರ್‌ ನ.17ರ ರಾತ್ರಿ ಶಿವಮೊಗ್ಗದ ಲಾಡ್ಜ್‌ ಒಂದರಲ್ಲಿ ನೇಣಿಗೆ ಶರಣಾಗಿದ್ದಾರೆ. ತರಕಾರಿ ಮಂಡಿ ನಡೆಸುತ್ತಿದ್ದ ರವಿಕುಮಾರ್‌ ಖಾಸಗಿ ಬ್ಯಾಂಕ್‌ ಮತ್ತು ಖಾಸಗಿ ವ್ಯಕ್ತಿಗಳಿಂದ ಸಾಲ ಪಡೆದಿದ್ದರು. ದಿನದ ಬಡ್ಡಿ ಮತ್ತು ಹಣ ಮರುಪಾವತಿಗಾಗಿ ಬ್ಯಾಂಕ್‌ ಮ್ಯಾನೇಜರ್‌, ರಿಕವರಿ ಏಜೆಂಟ್‌ಗಳು, ಖಾಸಗಿ ವ್ಯಕ್ತಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಡೆತ್‌ ನೋಟ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ಆರೋಪಿಸಲಾಗಿದೆ.

Doddapete-Police-raid-on-Lodge-in-Shimoga.

ಇದನ್ನೂ ಓದಿ » ತುಂಗಾ ನದಿಯಲ್ಲಿ ಬ್ಯಾಂಕ್‌ ಮ್ಯಾನೇಜರ್‌ಗಾಗಿ ಶೋಧ

ವಿಷಯ ತಿಳಿದು ರವಿಕುಮಾರ್‌ ಅವರ ಕುಟುಂಬದವರು ಮೈಸೂರಿನಿಂದ ಆಗಮಿಸಿ ಮೃತದೇಹ ಕೊಂಡೊಯ್ದಿದ್ದಾರೆ. ಘಟನೆ ಸಂಬಂಧ ನಾಲ್ವರ ವಿರುದ್ಧ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Mysore

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion

Leave a Comment