ಕಳೆನಾಶಕ ಸೇವಿಸಿದ್ದ ಶಿವಮೊಗ್ಗ ನಗರಸಭೆ ಮಾಜಿ ಸದಸ್ಯ ಸಾವು

SHIMOGA NEWS, 24 NOVEMBER 2024 : ಕಳೆನಾಶಕ (Pesticide) ಸೇವಿಸಿದ್ದ ಶಿವಮೊಗ್ಗ ನಗರಸಭೆ ಮಾಜಿ ಸದಸ್ಯ ಆರ್‌.ಲಕ್ಷ್ಮಣ್‌ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. (ಈ ಸುದ್ದಿಯನ್ನು ಇನ್ನು 34 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಶುಕ್ರವಾರ ಆರ್.ಲಕ್ಷ್ಮಣ್‌, ಗೋಪಾಳದ ಪಾರ್ಕ್‌ ಒಂದರಲ್ಲಿ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೊನೆಗೆ ಲಕ್ಷ್ಮಣ್‌ ಅವರೆ ಆಂಬುಲೆನ್ಸ್‌ಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಕೂಡಲೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಲಕ್ಷ್ಮಣ್‌ ಕೊನೆಯುಸಿರೆಳೆದಿದ್ದಾರೆ.

R-Lakshman-Former-Nagarasabhe-Member.

ಲಕ್ಷ್ಮಣ್‌ ಅವರು ಹೊಸಮನೆ ನಿವಾಸಿ. ಈ ಹಿಂದೆ ನಗರಸಭೆಗೆ ಬಿಜೆಪಿಯಿಂದ ಆಯ್ಕೆಯಾಗಿದ್ದರು. ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಸದ್ಯಸರಾಗಿದ್ದರು. ಇನ್ನು, ಘಟನೆ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ

ಇದನ್ನೂ ಓದಿ » ಮಾಟ, ಮಂತ್ರ, ಈ ಬಾಕ್ಸ್‌ ತೆಗೆದರೆ ಸತ್ತೇ ಹೋಗ್ತೀರ, ನಂಬಿದ ಕುಟುಂಬಕ್ಕೆ ಕಾದಿತ್ತು ಆಘಾತ

R-Lakshman-Former-Nagarasabhe-Member.

Leave a Comment