ದೀಪಾವಳಿ: ಯಾವ್ಯಾವ ದಿನ ಏನೇನು ಪೂಜೆ ಮಾಡಬೇಕು? ಅಮಾವಾಸ್ಯೆ ಯಾವಾಗ ಶುರು?

ಶಿವಮೊಗ್ಗ: ದೀಪಾವಳಿ ಆಚರಣೆ ಕುರಿತು ಶಿವಮೊಗ್ಗದ ನಾಗಸುಬ್ರಮಣ್ಯ ದೇವಸ್ಥಾನ ಪ್ರಧಾನ ಅರ್ಚಕ ಸಂದೇಶ ಉಪಾಧ್ಯಾಯ ಮಾಹತಿ ನೀಡಿದ್ದಾರೆ. (ಈ ಸುದ್ದಿಯನ್ನು ಇನ್ನು 38 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಯಾವ್ಯಾವ ದಿನ ಏನೇನು ಪೂಜೆ?

ದೀಪಾವಳಿ ಆಚರಣೆಯ ಅಂಗವಾಗಿ ನವೆಂಬರ್‌ 7ರಂದು ನೀರು ತುಂಬುವ ಹಬ್ಬ ಆಚರಿಸಲಾಗುತ್ತದೆ. ಭಾನುವಾರ ಬೆಳಿಗ್ಗೆ ಅಭ್ಯಂಗ ಸ್ನಾನ ಮಾಡಿ, ಸಂಜೆ ಲಕ್ಷ್ಮಿ ಪೂಜೆ ನೆರವೇರಿಸಲಾಗುತ್ತದೆ. ಭಾನುವಾರ ಮಧ್ಯಾಹ್ನ 2.30ರ ನಂತರ ಅಮಾವಾಸ್ಯೆ ಆರಂಭವಾಗಲಿದೆ. ಆದ್ದರಿಂದ ಸಂಜೆ ಲಕ್ಷ್ಮಿ ಪೂಜೆಗೆ ವಿಶೇಷ ಮಹತ್ವವಿದೆ ಎಂದು ತಿಳಿಸಿದರು.

Sandesh-Upadaya-Sri-nagasubramanya-temple-shimoga.

ನ.9ರಂದು ಬೆಳಿಗ್ಗೆ 9 ಗಂಟೆಯವರೆಗೆ ಅಮಾವಾಸ್ಯೆ ತಿಥಿ ಇರಲಿದೆ. ಬೆಳಿಗ್ಗೆ 6.30ರಿಂದ 7 ಗಂಟೆಯ ಅವಧಿಯಲ್ಲಿ ಲಕ್ಷ್ಮಿ ಪೂಜೆ ನೆರವೇರಿಸಬಹುದು. ಬಳಿಕ ಪಾಡ್ಯಮಿ ತಿಥಿ ಆರಂಭವಾಗಲಿದೆ. ಈ ತಿಥಿ 20 ಘಳಿಗೆಗಳಿಗಿಂತ ಹೆಚ್ಚು ಕಾಲ ಇರುವುದರಿಂದ ಸೋಮವಾರ ಗೋಪೂಜೆ ನಡೆಸುವುದು ಶಾಸ್ತ್ರೋಕ್ತವಾಗಿದೆ. ನವೆಂಬರ್‌ 10ರ ಬೆಳಿಗ್ಗೆ 9 ಗಂಟೆಯವರೆಗೆ ಮಾತ್ರ ಪಾಡ್ಯಮಿ ತಿಥಿ ಇರಲಿದೆ ಎಂದು ಅರ್ಚಕ ಸಂದೇಶ್‌ ಉಪಾದ್ಯ ತಿಳಿಸಿದ್ದಾರೆ.