ಶಿವಮೊಗ್ಗ – ಭದ್ರಾವತಿ ರಸ್ತೆಯಲ್ಲಿ ಓಡಾಡುವವರೆ ಹುಷಾರ್‌, ಪ್ರಾಣ ತೆಗೆಯಲು ಕಾಯುತ್ತಿವೆ ಕರೆಂಟ್‌ ಕಂಬಗಳು

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS
SHIMOGA NEWS, 26 NOVEMBER 2024
➤ ಸುದ್ದಿಯ ಮುಂದಿನ 11 ಪ್ಯಾರಾಗಳು ಕೆಳಗಿವೆ.

ಹೈಲೈಟ್‌ ಪಾಯಿಂಟ್ಸ್‌

» ಅಪಾಯಕಾರಿ ಸ್ಥಿತಿಯಲ್ಲಿ ಎಂಟು ವಿದ್ಯುತ್‌ ಕಂಬ

» ಯಾವುದೇ ಸಂದರ್ಭ ರಸ್ತೆಗೆ ಉರುಳಬಹುದು ಕಂಬ

» ಎಚ್ಚರ ವಹಿಸದೆ ದೊಡ್ಡ ಅನಾಹುತ ನಿಶ್ಚಿತ

ಶಿವಮೊಗ್ಗ : ಶಿವಮೊಗ್ಗ – ಭದ್ರಾವತಿ ಹೆದ್ದಾರಿಯಲ್ಲಿ ಸುಮಾರು ಎಂಟಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ವಾಲಿದ್ದು, ಯಾವುದೇ ಸಂದರ್ಭ ಅಪಾಯ ಸಂಭವಿಸಲಿದೆ. ಅಪ್ಪಿತಪ್ಪಿ ಕಂಬಗಳು ರಸ್ತೆಗೆ ಬಿದ್ದರೆ ದೊಡ್ಡ ಅನಾಹುತ ಸಂಭವಿಸಲಿದೆ. ಮತ್ತೊಂದು ದಿಕ್ಕಿಗೆ ಉರುಳಿದರೆ ಅಡಿಕೆ ತೋಟಕ್ಕೆ ಹಾನಿಯಾಗುವ ಸಾಧ್ಯತೆ ಇದೆ.

ನಿದಿಗೆ ಕೆರೆ ಏರಿ ಮೇಲೆ ವಿದ್ಯುತ್‌ ಕಂಬಗಳು ಅಪಾಯಕಾರಿ ಸ್ಥಿತಿಯಲ್ಲಿವೆ. ಶಿವಮೊಗ್ಗದಿಂದ ಭದ್ರಾವತಿಗೆ ಹೋಗುವ ಬದಿಯ ತಿರುವಿನಲ್ಲಿರುವ ವಿದ್ಯುತ್‌ ಕಂಬಗಳು ವಾಲಿಕೊಂಡಿವೆ.

ಯಮಾರಿದರೆ ಅವಘಡ ಗ್ಯಾರಂಟಿ

ತಿರುವಿನಲ್ಲಿರುವ ಸುಮಾರು ಎಂಟು ವಿದ್ಯುತ್‌ ಕಂಬಗಳು ಅಪಾಯಕಾರಿ ಸ್ಥಿತಿಯಲ್ಲಿವೆ. ಈ ಪೈಕಿ ಮೂರ್ನಾಲ್ಕು ಕಂಬಗಳು ನೆಲಕ್ಕೆ ತಾಗುವಂತಿದೆ. ಜೋರು ಗಾಳಿ ಬೀಸಿದರೆ ಈ ಕಂಬಗಳು ಧರೆಗುರುಳುವುದು ನಿಶ್ಚಿತ. ಒಂದು ಕಂಬ ಉರುಳಿದರೆ ವಿದ್ಯುತ್‌ ತಂತಿಗಳು ಜಗ್ಗಿ ಮತ್ತಷ್ಟು ಕಂಬಗಳು ಉರುಳಲಿವೆ.

261124 Electric Pole in dangerous way in Shimoga Bhadravathi road

ಇಲ್ಲಿರುವ ಕಂಬಗಳು ಸುಮಾರು 60 ಡಿಗ್ರಿಯಷ್ಟು ವಾಲಿವೆ. ಒಂದೇ ಒಂದು ಕಂಬ ಉರುಳಿದರೆ ಎಲ್ಲವು ಬುಡಮೇಲಾಗುತ್ತವೆ. ದೊಡ್ಡ ಅನಾಹುತ ಸಂಭವಿಸುವ ಮೊದಲು ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.

ಬಸವರಾಜು, ಭದ್ರಾವತಿ ನಿವಾಸಿ

261124 Electric Pole in dangerous way in Shimoga Bhadravathi road

RED-LINE-

ಶಿವಮೊಗ್ಗ – ಭದ್ರಾವತಿ ರಸ್ತೆಯಲ್ಲಿ ಸದಾ ವಾಹನ ದಟ್ಟಣೆ ಇರುತ್ತದೆ. ಅಪ್ಪಿತಪ್ಪಿ ಕಂಬಗಳು ರಸ್ತೆಗೆ ಉರುಳಿದರೆ ದೊಡ್ಡ ಅವಘಡವಾಗಲಿದೆ.

Electric Pole at Nidge - Shimoga - Bhadravathi Highway

Electric Pole at Nidge - Shimoga - Bhadravathi Highway

Electric Pole at Nidge - Shimoga - Bhadravathi Highway

ಇದನ್ನೂ ಓದಿ » ಗಾಂಧಿ ಬಜಾರ್‌ನ ಅಂಗಡಿಯಲ್ಲಿ ಬೆಂಕಿ, ಲಕ್ಷ ಲಕ್ಷದ ವಸ್ತುಗಳು ಆಹುತಿ

Pole

Leave a Comment