ನಂದಿನಿ ಹಾಲಿಗೆ ದೆಹಲಿ ಜನ ಫಿದಾ, ಮೊದಲ ದಿನ ಎಷ್ಟಿತ್ತು ವ್ಯಾಪಾರ?

SHIVAMOGGA LIVE NEWS, 3 DECEMBER 2024

ನವದೆಹಲಿ : ಮಾರುಕಟ್ಟೆಗೆ ಲಗ್ಗೆ ಇಟ್ಟ ಮೊದಲ ದಿನವೇ ನಂದಿನಿ ಹಾಲಿಗೆ (Milk) ದೆಹಲಿ ಜನ ಉತ್ತಮವಾಗಿ ಸ್ಪಂದಿಸಿದ್ದಾರೆ. ನವದೆಹಲಿಯಲ್ಲಿ ಮೊದಲ ದಿನವೆ 10 ಸಾವಿರ ಲೀಟರ್‌ ಹಾಲು ಮಾರಾಟವಾಗಿದೆ. ಇನ್ನು ಕೆಲವೇ ತಿಂಗಳಲ್ಲಿ ನಿತ್ಯ 70 ಸಾವಿರ ಲೀಟರ್‌ ಹಾಲು ಮತ್ತು ಮೊಸರು ಮಾರಾಟದ ಗುರಿ ಹೊಂದಲಾಗಿದೆ ಎಂದು ಸರ್ಕಾರ ತಿಳಿಸಿದೆ.

ಕರ್ನಾಟಕ ಹಾಲು ಮಹಾಮಂಡಲ (ಕೆಎಂಎಫ್‌) ಇತ್ತೀಚೆಗೆ ದೆಹಲಿಯಲ್ಲಿ ಮಾರುಕಟ್ಟೆ ವಿಸ್ತರಣೆ ಮಾಡಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ನವದೆಹಲಿಯಲ್ಲಿ ನಂದಿನಿ ಹಾಲು ಮಾರಾಟಕ್ಕೆ ಚಾಲನೆ ನೀಡಿದ್ದರು.

ಇದನ್ನೂ ಓದಿ » ಭದ್ರಾ ಡ್ಯಾಮ್‌, ನಾಲೆಯ ಗೇಟ್‌ ಬಂದ್‌ ಮಾಡುವಾಗ ಕ್ರೇನ್‌ನ ಕೇಬಲ್‌ ಕಟ್

Nandini-Milk-logo-general-image

Leave a Comment