SHIVAMOGGA LIVE NEWS | 2 DECEMBER 2024
ಭದ್ರಾವತಿ : ಭದ್ರಾ ಜಲಾಶಯದ (Bhadra Dam) ಬಲದಂಡೆ ಕಾಲುವೆಗೆ ಗೇಟ್ ಅಳವಡಿಸುವ ಕ್ರೇನ್‌ನ ಕೇಬಲ್ ತುಂಡಾಗಿದ್ದರಿಂದ ನಾಲೆಗೆ ಒಂದು ದಿನ ಹೆಚ್ಚುವರಿಯಾಗಿ ನೀರು ಹರಿದಿದೆ. ಭಾನುವಾರ ಬೇರೊಂದು ಕ್ರೇನ್ ತರಿಸಿ ನಾಲೆಯ ಗೇಟ್ ಬಂದ್ ಮಾಡಲಾಗಿದೆ.
ನ.29ರಂದು ಭದ್ರಾ ಜಲಾಶಯದ ಬಲದಂಡೆ ನಾಲೆಗೆ ನೀರು ಹರಿಸುವುದನ್ನು ನಿಲ್ಲಿಸಲಾಗುತ್ತದೆ ಎಂದು ಭದ್ರಾ ಅಚ್ಚುಕಟ್ಟು ಪ್ರದೇಶ ಪ್ರಾಧಿಕಾರ (ಕಾಡಾ) ತಿಳಿಸಿತ್ತು. ಅಂದು ಗೇಟ್ ಬಂದ್ ಮಾಡುವಾಗ ಬೃಹತ್ ಕ್ರೇನ್‌ನ ಉಕ್ಕಿನ ಕ್ರೇನ್‌ನ ಕೇಬಲ್ ತುಂಡಾಗಿತ್ತು. ಹಾಗಾಗಿ ಬೇರೊಂದು ಕ್ರೇನ್ ತರಿಸಿಕೊಂಡು ನಾಲೆಯ ಗೇಟ್ ಬಂದ್ ಮಾಡಲಾಗಿದೆ.
ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ, ಇಡೀ ದಿನ ಮೋಡ ಕವಿದ ವಾತಾವರಣ ಸಾಧ್ಯತೆ
ಈ ಮೊದಲು ನ.26ರಂದು ಬಲದಂಡೆ ನಾಲೆಗೆ ನೀರು ಹರಿಸುವುದನ್ನು ನಿಲ್ಲಿಸಲು ಉದ್ದೇಶಿಸಲಾಗಿತ್ತು. ಆದರೆ ಕೊನೆ ಭಾಗದ ಮಲೆಬೆನ್ನೂರು ಸುತ್ತಮುತ್ತಲ ರೈತರಿಗೆ ಮತ್ತು ದಾವಣಗೆರೆಗೆ ಕುಡಿಯುವ ನೀರು ಪೂರೈಸಲು ನ.29ರವರೆಗೆ ನೀರು ಹರಿಸಲು ನಿರ್ಧರಿಸಲಾಗಿತ್ತು. ಆದರೆ ಕ್ರೇನ್‌ನ ಉಕ್ಕಿನ ರೋಪ್ ತುಂಡಾಗಿದ್ದರ ಒಂದು ದಿನ ಹೆಚ್ಚುವರಿಯಾಗಿ ನೀರು ಹರಿದಿದೆ.