ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS, 6 DECEMBER 2024
ಶಿವಮೊಗ್ಗ : ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ನಾಗರಿಕ ಹಕ್ಕು ನಿರ್ದೆಶನಾಲಯದ (ಡಿಸಿಆರ್‌ಇ) ವಿಶೇಷ ಪೊಲೀಸ್ ಠಾಣೆಗಳನ್ನು (STATION) ಸ್ಥಾಪನೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಶಿವಮೊಗ್ಗ ಜಿಲ್ಲೆಗು ಒಂದು ಡಿಸಿಆರ್‌ಇ ವಿಶೇಷ ಪೊಲೀಸ್ ಠಾಣೆ ಮಂಜೂರಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಏನಿದು ಡಿಸಿಆರ್‌ಇ ಪೊಲೀಸ್ ಠಾಣೆ?
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ನಿರ್ವಹಿಸಲು ನಾಗರಿಕ ಹಕ್ಕು ನಿರ್ದೇಶನಾಲಯ ವಿಶೇಷ ಪೊಲೀಸ್ ಠಾಣೆಗಳನ್ನು ಸ್ಥಾಪಿಸಲಾಗುತ್ತಿದೆ. ಜೂನ್ ತಿಂಗಳಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಡಿಸಿಆರ್‌ಇ ಠಾಣೆಗಳ ಸ್ಥಾಪನೆಗೆ ನಿರ್ಧರಿಸಲಾಗಿತ್ತು. ಅಂತೆಯೆ ಗೃಹ ಇಲಾಖೆ ಅಧೀನ ಕಾರ್ಯದರ್ಶಿ ಕೆ.ಎನ್.ವನಜ ಇವತ್ತು ಆದೇಶ ಹೊರಡಿಸಿದ್ದಾರೆ.
ಶಿವಮೊಗ್ಗಕ್ಕೆ ಎಷ್ಟು ಸಿಬ್ಬಂದಿ ಮಂಜೂರಾಗಿದೆ?
ಡಿಸಿಆರ್‌ಇ ವಿಭಾಗದಲ್ಲಿ ರಾಜ್ಯದಲ್ಲಿ ಡಿಜಿಪಿ ಮತ್ತು ಡಿಐಜಿಪಿ ಇರಲಿದ್ದಾರೆ. ವಲಯವಾರು ಎಸ್‌ಪಿಗಳು ಇರಲಿದ್ದಾರೆ. ಎಲ್ಲ ಜಿಲ್ಲೆಗಳಲ್ಲಿ ಡಿವೈಎಸ್‌ಪಿ ನೇತೃತ್ವದಲ್ಲಿ ವಿಭಾಗ ಕಾರ್ಯನಿರ್ವಹಿಸಲಿದೆ.
ಶಿವಮೊಗ್ಗದ ಡಿಸಿಆರ್‌ಇ ಠಾಣೆಯು ಪೂರ್ವ ವಲಯದ ವ್ಯಾಪ್ತಿಗೆ ಬರಲಿದೆ. ಶಿವಮೊಗ್ಗ ಜಿಲ್ಲೆಯ ವಿಶೇಷ ಠಾಣೆಗೆ ಓರ್ವ ಡಿವೈಎಸ್‌ಪಿ, ಓರ್ವ ಪಿಎಸ್‌ಐ, 4 ಹೆಡ್ ಕಾನ್ಸ್‌ಟೇಬಲ್, 8 ಕಾನ್ಸ್‌ಟೇಬಲ್, ಓರ್ವ ಚಾಲಕ, ಓರ್ವ ಗ್ರೂಪ್ ಡಿ ಸಿಬ್ಬಂದಿ ಸೇರಿ ಒಟ್ಟು 16 ಸಿಬ್ಬಂದಿ ಇರಲಿದ್ದಾರೆ.
ಇದನ್ನೂ ಓದಿ » ಇನ್‌ಸ್ಟಾಗ್ರಾಂ ಪೋಸ್ಟ್‌ನಿಂದ ಗೃಹಿಣಿಗೆ ಸಂಕಷ್ಟ, ಆಗಿದ್ದೇನು?