ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS, 15 DECEMBER 2024
Bike Theft
ಶಿವಮೊಗ್ಗ : ಸಂತೆ ಕಡೂರು ಸಮೀಪ ಸಾರ್ವಜನಿಕರಿಗೆ ಉಪಟಳ ನೀಡುತ್ತಿದ್ದ ಇಬ್ಬರು ಯುವಕರನ್ನು ಪೊಲೀಸರು ಮೆಗ್ಗಾನ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವಿಸಿರುವುದು ದೃಢವಾಗಿದೆ. ಈ ಹಿನ್ನೆಲೆ ಅಮೀರ್ ಜಾನ್ (27) ಮತ್ತು ಸಾಹಿಲ್ ಅಹಮದ್ (21) ಎಂಬುವವರನ್ನು ಬಂಧಿಸಿದ್ದಾರೆ. ಅವರ ವಿರುದ್ಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಉಪಟಳ ನೀಡುತ್ತಿದ್ದವರು ಅರೆಸ್ಟ್
ಸಾಗರ : ಯಾವುದೇ ಪರವಾನಗಿ ಇಲ್ಲದೆ ಗೋವುಗಳನ್ನು ಕೊಂಡೊಯ್ಯುತ್ತಿದ್ದ ಗೂಡ್ಸ್ ವಾಹನ ತಡೆದ ಸ್ಥಳೀಯರು ಪರಿಶೀಲಿಸಿ, ಪೊಲೀಸರಿಗೆ ಒಪ್ಪಿಸಿದ್ದಾರೆ. 2 ದನ, ಒಂದು ಹೋರಿ, ಒಂದು ಕರುವನ್ನು ರಕ್ಷಿಸಲಾಗಿದೆ. ಗೂಡ್ಸ್ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಗೂಡ್ಸ್ ವಾಹನದಲ್ಲಿದ್ದ ಅಬ್ರಾರ್, ನಂದನ್ ಮತ್ತು ನವೀನ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ. ಸಾಗರ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ಗೋವುಗಳ ಸಾಗಣೆ, ಮೂವರ ವಿರುದ್ಧ ಕೇಸ್
ಇದನ್ನೂ ಓದಿ » ಶಿವಮೊಗ್ಗದಲ್ಲಿ ಧೂಳು ಹಿಡಿಯುತ್ತಿದೆ ಮಲ್ಟಿ ಲೆವೆಲ್ ಪಾರ್ಕಿಂಗ್ ಕಟ್ಟಡ, ಏನೆಲ್ಲ ಸಮಸ್ಯೆ ಆಗ್ತಿದೆ?
ಶಿವಮೊಗ್ಗ : ಅಯ್ಯಪ್ಪ ಸ್ವಾಮಿ ಮಾಲಾಧಾರಿಯೊಬ್ಬರು ತುಂಗಾ ನದಿ ದಂಡೆ ಮೇಲೆ ನಿಲ್ಲಿಸಿದ್ದ ಸ್ಪ್ಲೆಂಡರ್ ಬೈಕ್ ಕಳ್ಳತನವಾಗಿದೆ. ಅಯ್ಯಪ್ಪ ಮಾಲಾಧಾರಿ ಗೋಪಿ ಇತರೆ ಮಾಲಾಧಾರಿಗಳ ಜೊತೆಗೆ ಸೀಗೆಹಟ್ಟಿಯ ಅಂತರ ಘಟ್ಟಮ್ಮ ದೇಗುಲದಲ್ಲಿ ಉಳಿದಿದ್ದರು. ಬೆಳಗಿನ ಜಾವ 4 ಗಂಟೆಗೆ ವಾದಿ-ಎ-ಹುದಾ ಬಳಿ ತುಂಗಾ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದರು. ತಮ್ಮ ಬೈಕ್ ಅನ್ನು ನದಿ ದಂಡೆ ಮೇಲೆ ನಿಲ್ಲಿಸಿ ಹೋಗಿದ್ದರು. ಸ್ನಾನ ಮುಗಿಸಿ ಹಿಂತಿರುಗಿದಾಗ ಬೈಕ್ ನಾಪತ್ತೆಯಾಗಿತ್ತು. ಘಟನೆ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ತುಂಗಾ ನದಿ ದಂಡೆ ಮೇಲೆ ಬೈಕ್ ಕಳವು
ಇದನ್ನೂ ಓದಿ » ಸಾಗರದಲ್ಲಿ ಬೆಳಗ್ಗೆ ಅಂಗಡಿಗೆ ಬಂದ ಮಾಲೀಕನಿಗೆ ಕಾದಿತ್ತು ಶಾಕ್
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422