ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS, 18 DECEMBER 2024
ಶಿವಮೊಗ್ಗ : ಸರ್ಕಾರಿ ಅಧಿಕಾರಿಯೊಬ್ಬರ ಮೇಲೆ ಆ್ಯಸಿಡ್ ದಾಳಿ ಮಾಡುವುದಾಗಿ ಬೆದರಿಕೆ ಒಡ್ಡಲಾಗಿದೆ. ಕಚೇರಿಗೆ ತಲುಪಿದ್ದ ಪತ್ರದಲ್ಲಿ (Letter) ಜೀವ ಬೆದರಿಕೆ ಒಡ್ಡಲಾಗಿದೆ ಎಂದು ಆರೋಪಿಸಲಾಗಿದೆ.
ಪತ್ರದಲ್ಲಿ ಏನೇನಿತ್ತು?
ಸಹಾಯಕ ಔಷಧ ನಿಯಂತ್ರಕರೊಬ್ಬರಿಗೆ ಬೆದರಿಕೆ ಒಡ್ಡಲಾಗಿದೆ. ನಮ್ಮವರಿಗೆ ಸೇರಿದ 14 ರಿಂದ 15 ಮೆಡಿಕಲ್ ಶಾಪ್‌ಗಳಿವೆ. ಅವುಗಳಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು. ನಿನ್ನ ಕೆಟ್ಟ ಕಾಲ ಶುರುವಾಗಿದೆ. ಎರಡ್ಮೂರು ತಿಂಗಳಿಂದ ನಿನ್ನನ್ನು ಹಿಂಬಾಲಿಸುತ್ತಿದ್ದೇವೆ. ಆ್ಯಸಿಡ್ ದಾಳಿ ಮಾಡಲು ಯುವಕರು ಸಜ್ಜಾಗಿದ್ದಾರೆ. ಪತ್ನಿಯ ಅಪಹರಣ ಮಾಡಿದರೆ ಏನು ಮಾಡುವೆ ಎಂದು ಬೆದರಿಕೆ ಒಡ್ಡಲಾಗಿದೆ.
ಇದನ್ನೂ ಓದಿ » ಶಿವಮೊಗ್ಗದ ಕಾಲೇಜಿನಲ್ಲಿ ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು
ಈ ಸಂಬಂಧ ಸಹಾಯಕ ಔಷಧ ನಿಯಂತ್ರಕರು ದೂರು ನೀಡಿದ್ದರು. ಬಳಿಕ ನ್ಯಾಯಾಲಯದ ಸೂಚನೆ ಮೇರೆಗೆ ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422