ಶಿವಮೊಗ್ಗ ಲೈವ್
SHIVAMOGGA LIVE NEWS, 1 JANUARY 2025
ಶಿವಮೊಗ್ಗ : ಹೊಸ ವರ್ಷಾಚರಣೆ ಸಂಭ್ರಮದ ನಡುವೆ ಅಪಘಾತ ಸಂಭವಿಸಿ ಬೈಕ್ (Bike) ಸವಾರನೊಬ್ಬ ಮೃತಪಟ್ಟಿದ್ದಾನೆ. ಶಿವಮೊಗ್ಗ ನಗರದ ಸಿದ್ದಯ್ಯ ರಸ್ತೆಯ ಸರ್ಕಲ್ ಬಳಿಕ ತಡರಾತ್ರಿ ಘಟನೆ ಸಂಭವಿಸಿದೆ. ಈ ಸಂಬಂಧ ಇನ್ನಷ್ಟೆ ಪ್ರಕರಣ ದಾಖಲಾಗಬೇಕಿದೆ. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಈ ಸುದ್ದಿಯನ್ನೂ ಓದಿ
ಶಿವಮೊಗ್ಗ ಜೈಲಿನಲ್ಲಿ ಒಂದು ಲಕ್ಷ ಮೌಲ್ಯದ ಉಪಕರಣ ಒಡೆದ ವಿಚಾರಣಾಧೀನ ಕೈದಿಗಳು
ಸರ್ಕಲ್ ಬಳಿ ಕಾರು ಪಲ್ಟಿಯಾಗಿದೆ. ಕಾರಿನಲ್ಲಿ ಓರ್ವ ಯುವಕ, ಇಬ್ಬರು ಯುವತಿಯರಿದ್ದರು ಎಂದು ತಿಳಿದು ಬಂದಿದೆ. ಮೊಪೆಡ್‌ನಲ್ಲಿದ್ದ ಯುವಕನ ತಲೆಗೆ ತೀವ್ರ ಪೆಟ್ಟಾಗಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಆತನ ಹೆಸರು ಇನ್ನಷ್ಟೆ ತಿಳಿದು ಬರಬೇಕಿದೆ. ಮತ್ತೊಬ್ಬ ಯುವಕನಿಗೆ ಗಂಭೀರ ಗಾಯವಾಗಿದೆ.
ಈ ಸುದ್ದಿಯನ್ನೂ ಓದಿ
ಶಿವಮೊಗ್ಗ ಜೈಲಿನಲ್ಲಿ ಒಂದು ಲಕ್ಷ ಮೌಲ್ಯದ ಉಪಕರಣ ಒಡೆದ ವಿಚಾರಣಾಧೀನ ಕೈದಿಗಳು

ಇನ್ನು, ಘಟನೆ ಬೆನ್ನಿಗೆ ಸ್ಥಳೀಯರು ಕಾರಿನಲ್ಲಿದ್ದವರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ದೊಡ್ಡಪೇಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.


ಇದನ್ನೂ ಓದಿ » ಶಿವಮೊಗ್ಗದಲ್ಲಿ ಹೊಸ ವರ್ಷಾಚರಣೆ ಜೋರು, ಎಲ್ಲೆಲ್ಲಿ ಹೇಗಿತ್ತು ಅಬ್ಬರ?