ಕಾರು, ಬೈಕ್‌ ಅಪಘಾತದ CCTV ದೃಶ್ಯ ಲಭ್ಯ, ಹೇಗಾಯ್ತು ಘಟನೆ? ಏನೇನೆಲ್ಲ ಆಯ್ತು?

SHIVAMOGGA LIVE NEWS, 1 JANUARY 2025

ಶಿವಮೊಗ್ಗ : ಕಳೆದ ರಾತ್ರಿ ನಗರದ ಸಿದ್ದಯ್ಯ ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಮೃತಪಟ್ಟ ಯುವಕನ ಗುರುತು ಪತ್ತೆಯಾಗಿದೆ. ಇನ್ನೊಂದೆಡೆ ಘಟನೆಯ CCTV ದೃಶ್ಯ ಲಭ್ಯವಾಗಿದೆ. ಘಟನೆಯಾದ ತಕ್ಷಣ ಸ್ಥಳೀಯರು ಗಾಯಾಳುಗಳಿಗೆ ನೆರವಾಗಿದ್ದಾರೆ. ಇತ್ತ ಕೆಲವೇ ಸೆಕೆಂಡ್‌ನಲ್ಲಿ ಪೊಲೀಸ್‌ ಕೂಡ ಸ್ಥಳಕ್ಕೆ ಆಗಮಿಸಿರುವುದು ಕೂಡ ದೃಶ್ಯದಲ್ಲಿದೆ.

ಹೊಸ ವರ್ಷಾಚರಣೆ ಸಂಭ್ರಮದ ನಡುವೆ ಶಿವಮೊಗ್ಗದ ಸಿದ್ದಯ್ಯ ರಸ್ತೆಯಲ್ಲಿ ಭೀಕರ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಓರ್ವ ಯುವಕ ಮೃತಪಟ್ಟಿದ್ದ. ಇನ್ನು, ಘಟನೆಯ ಸ್ಥಳದಲ್ಲಿ ಕಾರು ಪಲ್ಟಿಯಾಗಿತ್ತು.

Web-Design-by-New-Web-techy

ಒಂದು ನಿಮಿಷದ ಸಿಸಿಟಿವಿ ವಿಡಿಯೋ

ಕಳೆದ ರಾತ್ರಿ ಸಂಭವಿಸಿದ ಭೀಕರ ಅಪಘಾತದ ಸಿಸಿಟಿವಿಯ ಒಂದು ನಿಮಿಷದ ದೃಶ್ಯ ಹೊರಬಿದ್ದಿದೆ. ಇಡೀ ಘಟನೆಯ ಭೀಕರತೆಯನ್ನು ತೋರಿಸಿದೆ.

Kalleshwara-Enterprises.webp

ದಿನಾಂಕ : 1 ಜನವರಿ 2025

ಸಮಯ : ರಾತ್ರಿ 12 ಗಂಟೆ 22 ನಿಮಿಷ 39 ಸೆಕೆಂಡ್‌

ಸಿದ್ದಯ್ಯ ರಸ್ತೆಯಲ್ಲಿ ಪಲ್ಟಿಯಾದ ಸ್ಥಿತಿಯಲ್ಲಿ ಬೈಕ್‌ ಉಜ್ಜಿಕೊಂಡು ಹೋಗುತ್ತದೆ. ಅದರ ಪಕ್ಕದಲ್ಲೇ ಸವಾರ ಕೂಡ ಕೆಳಗೆ ಬಿದ್ದು ರಸ್ತೆಯಲ್ಲಿ ಉಜ್ಜಿಕೊಂಡು ಹೋಗಿದ್ದಾರೆ. ಮತ್ತೊಂದು ಬದಿಯಲ್ಲಿ ವೇಗವಾಗಿ ಬಂದ ಕಾರು ಕಟ್ಟಡಕ್ಕೆ ಡಿಕ್ಕಿ ಹೊಡೆಯುವಂತೆ ನುಗ್ಗುತ್ತದೆ.

Siddaiah-Road-Car-mishap

RED-LINE

ಸಮಯ : ರಾತ್ರಿ 12 ಗಂಟೆ 22 ನಿಮಿಷ 41 ಸೆಕೆಂಡ್‌

ಕಾರು ಪಲ್ಟಿಯಾಗುತ್ತದೆ. ಜೋರು ಶಬ್ದ ಮತ್ತು ಸ್ಥಳದಲ್ಲಿ ಧೂಳೇಳುತ್ತದೆ. ಒಂದೆರಡು ಸೆಕೆಂಡ್‌ನ ಬಳಿಕ ಕಾರಿನ ಹಿಂಬದಿ ಲೈಟುಗಳು ಜೋರಾಗಿ ಬೆಳಗುತ್ತವೆ. ಇಂಡಿಕೇಟರ್‌ ಆನ್‌ ಆಗುತ್ತದೆ.

Siddaiah-Road-Car-mishap

RED-LINE

ಸಮಯ : ರಾತ್ರಿ 12 ಗಂಟೆ 23 ನಿಮಿಷ

ಅಪಘಾತದ ಶಬ್ದಕ್ಕೆ ಅಕ್ಕಪಕ್ಕದ ನಿವಾಸಿಗಳು ಕೂಡಲೆ ಸ್ಥಳಕ್ಕೆ ದೌಡಾಯಿಸಿದ್ದಾರೆ. ಪಲ್ಟಿಯಾಗಿದ್ದ ಕಾರಿನ ಒಳಗಿದ್ದವರನ್ನು ಹೊರಗೆಳೆಯುತ್ತಾರೆ.

Siddaiah-Road-Car-mishap

RED-LINE

ಸಮಯ : ರಾತ್ರಿ 12 ಗಂಟೆ 23 ನಿಮಿಷ 23 ಸೆಕೆಂಡ್‌

ಸಿದ್ದಯ್ಯ ಸರ್ಕಲ್‌ ಬಳಿ ಪಾಯಿಂಟ್‌ ಡ್ಯೂಟಿಗೆ ನಿಯೋಜನೆಗೊಂಡಿದ್ದ ದೊಡ್ಡಪೇಟೆ ಠಾಣೆಯ ಪೊಲೀಸ್‌ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ದೌಡಾಯಿಸಿದರು.

Siddaiah-Road-Car-mishap

RED-LINE

ಮೃತ ಯುವಕನ ಗುರುತು ಪತ್ತೆ

ಘಟನೆಯಲ್ಲಿ ಬೈಕ್‌ ಸವಾರ ಮೃತಪಟ್ಟಿದ್ದಾನೆ. ಆತನನ್ನು ಧನುಷ್‌ (20) ಎಂದು ಗುರುತಿಸಲಾಗಿದೆ. ಇನ್ನು, ಪ್ರಜ್ವಲ್‌ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದಾನೆ. ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ದೊಡ್ಡಪೇಟೆ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

Car Mishap in Shimoga MKK Road

Siddaiah-Road-Car-mishap

ಇದನ್ನೂ ಓದಿ » ಹೊಸ ವರ್ಷಾಚರಣೆ ಮಧ್ಯೆ ಶಿವಮೊಗ್ಗದಲ್ಲಿ ಭೀಕರ ಅಪಘಾತ, ಓರ್ವ ಬಲಿ

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment