ಶಿವಮೊಗ್ಗ ಜಿಲ್ಲೆಯ ಉದ್ಯಮಿಗೆ ಸಂಕಷ್ಟ ತಂದ ವಾಟ್ಸಪ್‌ ಗ್ರೂಪ್‌, ಆಗಿದ್ದೇನು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

SHIVAMOGGA LIVE NEWS | 4 JANUARY 2024

ಶಿವಮೊಗ್ಗ : ಪ್ರತಿಷ್ಠಿತ ಹೂಡಿಕೆ ಸಂಸ್ಥೆಯೊಂದರ ಹೆಸರು ದುರ್ಬಳಕೆ ಮಾಡಿಕೊಂಡು ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ (Businessman) 20 ಲಕ್ಷ ರೂ. ಹಣ ವಂಚಿಸಲಾಗಿದೆ. ಈ ಸಂಬಂಧ ಶಿವಮೊಗ್ಗದ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ಶಿವಮೊಗ್ಗ ಜಿಲ್ಲೆಯ ಉದ್ಯಮಿಯೊಬ್ಬರ ಮೊಬೈಲ್‌ ನಂಬರ್‌ ಅನ್ನು ಹೂಡಿಕೆಗೆ ಸಂಬಂಧಿಸಿದ ವಾಟ್ಸಪ್‌ ಗ್ರೂಪ್‌ಗೆ ಜಾಯಿನ್‌ ಮಾಡಲಾಗಿತ್ತು. ಅಲ್ಲಿ ಬಂದ APK ಫೈಲ್‌ ಡೌನ್‌ಲೋಡ್‌ ಮಾಡಿಕೊಂಡು ಅರ್ಜಿ ಭರ್ತಿ ಮಾಡುವಂತೆ ತಿಳಿಸಲಾಗಿತ್ತು. ಅಂತೆಯೇ ಉದ್ಯಮಿ ಅರ್ಜಿ ಭರ್ತಿ ಮಾಡಿದ ನಂತರ ಅವರಿಂದ ಹಣ ಹೂಡಿಕೆ ಮಾಡಿಸಿಕೊಳ್ಳಲಾಗಿದೆ.

Web-Design-by-New-Web-techy

ಕಳೆದ ವರ್ಷದ ಅಕ್ಟೋಬರ್‌ ತಿಂಗಳಿಂದ ಡಿಸೆಂಬರ್‌ ತಿಂಗಳವರೆಗೆ ಹಂತ ಹಂತವಾಗಿ 20 ಲಕ್ಷ ರೂ. ಹೂಡಿಕೆ ಮಾಡಿದ್ದಾರೆ. ಆದರೆ ಅಸಲು ಹಿಂತಿರುಗಿಸದೆ, ಲಾಭವು ದೊರೆಯದೆ ಇದ್ದಾಗ ಅನುಮಾನ ಮೂಡಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಇದನ್ನೂ ಓದಿ » ಯುದ್ಧ ಟ್ಯಾಂಕರ್‌ಗೆ ಕೊನಗೂ ಸಿಕ್ತು ‘ಫ್ರೀಡಂ’, ಇದು ಶಿವಮೊಗ್ಗ ಲೈವ್.ಕಾಂ ಇಂಪ್ಯಾಕ್ಟ್‌

Leave a Comment