SHIVAMOGGA LIVE NEWS, 17 JANUARY 2025
ಹೊಳೆಹೊನ್ನೂರು : ಮೂವರು ಅಡಿಕೆ (Adike) ಕಳ್ಳರನ್ನು ಪೊಲೀಸರು ಬಂಧಿಸಿದ್ದು, 6 ಕ್ವಿಂಟಾಲ್ ಅಡಕೆ, ಮೂರು ಬೈಕ್ ಹಾಗೂ ಒಂದು ಮಾರು ಓಮ್ನಿ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಭದ್ರಾವತಿಯ ಸಾಜಿದ್(25), ಕೂಡ್ಲಿಯ ಜಮೀರ್ ಶೇಖ್(24) ಮತ್ತು ಚನ್ನಗಿರಿಯ ಮಹಮ್ಮದ್ ಮಹೀಬುಲ್ಲಾ(23) ಬಂಧಿತರು. ಶ್ರೀನಿವಾಸಪುರದ ರಮೇಶ ಎಂಬುವವರ ಮನೆಯಲ್ಲಿದ್ದ ಅಡಿಕೆ ಕಳ್ಳತನವಾಗಿತ್ತು. ತನಿಖೆ ನಡೆಸಿದ ಹೊಳೆಹೊನ್ನೂರು ಠಾಣೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಪೊಲೀಸ್ ಇನ್ಸ್ ಪೆಕ್ಟರ್ ಲಕ್ಷ್ಮೀಪತಿ ನೇತೃತ್ವದಲ್ಲಿ ಪಿಎಸ್ಐ ರಮೇಶ್, ಸಿಬ್ಬಂದಿ ಮಂಜುನಾಥ, ಕೃಷ್ಣನಾಯ್ಕ, ಅಣ್ಣಪ್ಪ, ಪ್ರಕಾಶ್ ನಾಯ್ಕ, ಮಂಜುನಾಥ, ಪ್ರಸನ್ನ ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ » ಶಿವಮೊಗ್ಗದಲ್ಲಿ 21 ಲಕ್ಷ ರೂ. ಮೌಲ್ಯದ ಗಾಂಜಾ ಸುಟ್ಟ ಪೊಲೀಸರು
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್ ನಂಬರ್: 7411700200
