ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS, 20 JANUARY 2025
ಶಿವಮೊಗ್ಗ : ATMನಿಂದ ಹಣ ಡ್ರಾ ಮಾಡಲು ಅಪರಿಚಿತನ ನೆರವು ಪಡೆದ ರೈತರೊಬ್ಬರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಆವರಣದ ಯುನಿಯನ್ ಬ್ಯಾಂಕ್ ಎಟಿಎಂನಲ್ಲಿ ತುರ್ತು ಹಣ ಬಿಡಿಸಲು ಬಂದಾಗ ಘಟನೆ ನಡೆದಿದೆ.
ಚಿತ್ರದುರ್ಗ ಜಿಲ್ಲೆ ಹೊಸದುರ್ಗದ ಪರಮೇಶ್ವರಪ್ಪ ವಂಚನೆಗೊಳಗಾದವರು. ಪರಮೇಶ್ವರಪ್ಪ ಅವರ ಸಹೋದರ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ಆಕ್ಸಿಜನ್ ಯಂತ್ರದ ಖರೀದಿಗೆ ಹಣ ಬೇಕಿದ್ದರಿಂದ ಡಿ.26ರಂದು ಪರಮೇಶ್ವರಪ್ಪ ಎಟಿಎಂ ಕೇಂದ್ರಕ್ಕೆ ಬಂದಿದ್ದರು. ಹಣ ಬಿಡಿಸಲು ಬಾರದಿದ್ದರಿಂದ ಎಟಿಎಂ ಕೇಂದ್ರದ ಬಳಿ ಅಪರಿಚಿತನ ನೆರವು ಪಡೆದಿದ್ದರು.

ಪರಮೇಶ್ವರಪ್ಪ ಅಪರಿಚಿತನಿಗೆ ತಮ್ಮ ಎಟಿಎಂ ಕಾರ್ಡ್ ಕೊಟ್ಟು, ಪಾಸ್ ವರ್ಡ್ ತಿಳಿಸಿದ್ದರು. ಆತ ಎಟಿಎಂನಿಂದ 16 ಸಾವಿರ ರೂ. ಹಣ ಬಿಡಿಸಿ ಕೊಟ್ಟಿದ್ದ. ಆದರೆ ಪರಮೇಶ್ವರಪ್ಪ ಅವರ ಎಟಿಎಂ ಕಾರ್ಡ್ ಬದಲು ಬೇರೊಂದು ಎಟಿಎಂ ಕಾರ್ಡ್ ನೀಡಿದ್ದ. ಪರಮೇಶ್ವರಪ್ಪ ಅವರು ತಮ್ಮೂರಿಗೆ ತೆರಳಿದ್ದು ಡಿ.27ರಂದು ತುರ್ತು ಹಣದ ಅಗತ್ಯವಿದ್ದರಿಂದ ಮಗನಿಗೆ ಎಟಿಎಂ ಕಾರ್ಡ್ ಕೊಟ್ಟಾಗ ಅದು ತಮ್ಮ ಎಟಿಎಂ ಕಾರ್ಡ್ ಅಲ್ಲ ಅನ್ನುವುದು ಅವರ ಗಮನಕ್ಕೆ ಬಂದಿದೆ.ಎಟಿಎಂ ಕಾರ್ಡ್ ಬದಲಿಸಿ ಕೊಟ್ಟ

ಪರಮೇಶ್ವರಪ್ಪ ಅವರ ಬಳಿ ಕರ್ನಾಟಕ ಗ್ರಾಮೀಣ ಬ್ಯಾಂಕ್ ಎಟಿಎಂ ಕಾರ್ಡ್ ಇತ್ತು. ಆದರೆ ಅಪರಿಚಿತ ಆ ಕಾರ್ಡ್ ಬದಲು ಯುನಿಯನ್ ಬ್ಯಾಂಕ್ ಕಾರ್ಡ್ ನೀಡಿದ್ದ. ಕಾರ್ಡ್ ಬದಲಾದ ವಿಷಯ ಗೊತ್ತಾದ ಕೂಡಲೆ ಪರಮೇಶ್ವರಪ್ಪ ಪುತ್ರನೊಂದಿಗೆ ಬ್ಯಾಂಕ್‌ಗೆ ತೆರಳಿ ಎಟಿಎಂ ಬ್ಲಾಕ್ ಮಾಡುವಂತೆ ತಿಳಿಸಿದರು. ಅಷ್ಟರಲ್ಲಾಗಲೆ ಪರಮೇಶ್ವರಪ್ಪ ಅವರ ಬ್ಯಾಂಕ್ ಖಾತೆಯಿಂದ 55 ಸಾವಿರ ರೂ. ಹಣ ಡ್ರಾ ಮಾಡಲಾಗಿತ್ತು ಎಂದು ಆರೋಪಿಸಲಾಗಿದೆ.
ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಇದನ್ನೂ ಓದಿ » ಕುವೆಂಪು ವಿವಿಯಿಂದ ಮೂವರಿಗೆ ಗೌರವ ಡಾಕ್ಟರೇಟ್, ಯಾರಿಗೆಲ್ಲ ಪ್ರದಾನ ಮಾಡಲಾಗ್ತಿದೆ?
LATEST NEWS
- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

About The Editor
ನಿತಿನ್ ಆರ್.ಕೈದೊಟ್ಲು






