ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS, 22 JANUARY 2025
ಶಿವಮೊಗ್ಗ : ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ಜಿಲ್ಲಾ ಉದ್ಯಾನ ಕಲಾ ಸಂಘದ ವತಿಯಿಂದ ಶಿವಮೊಗ್ಗದ ಫ್ರೀಡಂ ಪಾರ್ಕ್‌ನಲ್ಲಿ ಜ.24 ರಿಂದ 26ರವರೆಗೆ ಮಲೆನಾಡ ಕರಕುಶಲ ಉತ್ಸವ ಮತ್ತು ಪುಷ್ಪಸಿರಿ ಫಲಪುಷ್ಪ (Flower Show) ಪ್ರದರ್ಶನ ಆಯೋಜಿಸಲಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್, ಫಲಪುಷ್ಪ ಪ್ರದರ್ಶನದ ವಿಶೇಷತೆಗಳ ಕುರಿತು ಮಾಹಿತಿ ನೀಡಿದರು.
ಈ ಬಾರಿ 28 ಅಡಿ ಎತ್ತರದ ಕುಪ್ಪಳಿಯ ಕವಿ ಮನೆ, 16 ಅಡಿ ಎತ್ತರದ ಚಂದ್ರಗುತ್ತಿಗೆ ದೇಗುಲದ ಮಾದರಿಗಳನ್ನು ಹೂವಿನಿಂದ ಸೃಷ್ಟಿಸಲಾಗುತ್ತದೆ. ಬೆಂಗಳೂರಿನ ಲಾಲ್ ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನದಲ್ಲಿ ಹೂವಿನಿಂದ ಕಲಾಕೃತಿ ಸೃಷ್ಟಿಸುವ ಕಲಾವಿದರೆ ಇಲ್ಲಿಯು ಮಾದರಿಗಳನ್ನು ಸಿದ್ಧಪಡಿಸಲಿದ್ದಾರೆ. – ಎನ್.ಹೇಮಂತ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಹೂವಿನಲ್ಲಿ ಕವಿಮನೆ, ಚಂದ್ರಗುತ್ತಿ ದೇಗುಲ
![]()
ಕರಕುಶಲ ವಸ್ತುಗಳ ಪ್ರದರ್ಶನ
ಫಲಪುಷ್ಪ ಪ್ರದರ್ಶನದ ಒಳಾಂಗಣದಲ್ಲಿ ಇದೇ ಮೊದಲ ಬಾರಿಗೆ ವಿವಿಧ ಸ್ವಸಹಾಯ ಸಂಘಗಳ ಮಹಿಳೆಯರು ತಯಾರಿಸಿರುವ 100ಕ್ಕೂ ಹೆಚ್ಚು ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದಕ್ಕಾಗಿ ಒಳಾಂಗಣದಲ್ಲಿ 35 ಸ್ಟಾಲ್‌ಗಳನ್ನು ನಿರ್ಮಿಸಲಾಗಿದೆ. ಇಲ್ಲಿ ನರೇಗಾ ಯೋಜನೆ, ಚಂದ್ರಕಲಾ ಅವರ ಬೋನ್ಸಾಯ್ ಪ್ಲಾಂಟ್‌ಗಳ ಪ್ರದರ್ಶನವಿರಲಿದೆ ಎಂದರು.

ಹೊರಾಂಗಣದಲ್ಲಿ 25 ಮಳಿಗೆಗಳನ್ನು ಸ್ಥಾಪಿಸಲಾಗುತ್ತಿದೆ. ಇಲ್ಲಿ ವಿವಿಧ ಕೃಷಿ ಉಪಕರಣ, ವಿವಿಧ ಸಂಸ್ಥೆಗಳು, ತಿನಿಸುಗಳ ಮಳಿಗೆ ಇರಲಿದೆ ಎಂದು ಹೇಮಂತ್ ಅವರು ಸುದ್ದಿಗೋಷ್ಠಿಯಲ್ಲಿ ಇರಲಿವೆ.
ಈ ಬಾರಿ ಫಲಪುಷ್ಪ ಪ್ರದರ್ಶನಕ್ಕೆ ಸಾರ್ವಜನಿಕರಿಗೆ ಮುಕ್ತ ಅವಕಾಶವಿರಲಿದೆ. ಮೂರು ದಿನ ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ಪ್ರದರ್ಶನ ಆಯೋಜಿಸಲಾಗಿದೆ. ಸಾರ್ವಜನಿಕರಿಗೆ ಈ ಬಾರಿ ಉಚಿತ ಪ್ರವೇಶ ಇರಲಿದೆ ಎಂದು ತಿಳಿಸಿದರು.ಸಾರ್ವಜನಿಕ ಪ್ರವೇಶ ಉಚಿತ
ಜಿಲ್ಲಾ ಪಂಚಾಯಿತಿ ಯೋಜನ ನಿರ್ದೇಶಕಿ ನಂದಿನಿ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಸವಿತಾ.ಜೆ, ಜಿಲ್ಲಾ ಉದ್ಯಾನ ಸಂಘದ ಉಪಾಧ್ಯಕ್ಷ ಸಿದ್ದಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ » ಇನ್ಮುಂದೆ ಕಾಗೋಡು ತಿಮ್ಮಪ್ಪ, ಡಾಕ್ಟರ್ ಕಾಗೋಡು ತಿಮ್ಮಪ್ಪ
LATEST NEWS
- ಶಿವಮೊಗ್ಗ ಜಿಲ್ಲೆಯ ಮನೆ ಮನೆಗೂ ಭೇಟಿ ನೀಡ್ತಾರೆ ಗಣತಿದಾರರು, ಏನೇನು ಮಾಹಿತಿ ಕೊಡಬೇಕು?

- ಕೇಕ್, ಬಿಸ್ಕತ್ತು, ಕುಕೀಸ್ ತಯಾರಿಸೋದು ಹೇಗೆ? ಶಿವಮೊಗ್ಗದಲ್ಲಿ ಬೇಕರಿ ಉತ್ಪನ್ನಗಳ ತಯಾರಿ ತರಬೇತಿ

- ಹೊಸಹಳ್ಳಿ ಬಳಿ ಅಪಘಾತ, ಗಾಜನೂರು ನಿವಾಸಿಗೆ ಗಂಭೀರ ಗಾಯ, ಹೇಗಾಯ್ತು ಘಟನೆ?

- ಕಾರಿನಲ್ಲಿ ದಿಢೀರ್ ಬೆಂಕಿ, ಕೆಲವೇ ಕ್ಷಣದಲ್ಲಿ ಮುಂಭಾಗ ಆಹುತಿ

- ಜಯನಗರ ಪೊಲೀಸ್ ಠಾಣೆಯಲ್ಲಿ 8 ವಾಹನಗಳ ಹರಾಜು, ದಿನಾಂಕ ಪ್ರಕಟ

About The Editor
ನಿತಿನ್ ಆರ್.ಕೈದೊಟ್ಲು















