ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
DINA BHAVISHYA, 30 JANUARY 2025
» ಮೇಷ
ಉತ್ತಮ ಅವಕಾಶಗಳು ಲಭಿಸಲಿದೆ. ಭೂ ವಿವಾದ ಪರಿಹಾರವಾಗಲಿದೆ. ನೆಮ್ಮದಿಯ ದಿನ ಇರಲಿದೆ. ಕೆಲಸ ಕಾರ್ಯದಲ್ಲಿ ಇವತ್ತು ಸುಲಭವಾಗಿ ಯಶಸ್ಸು ಸಿಗಲಿದೆ. ನಿರೀಕ್ಷಿತ ಸ್ಥಾನಮಾನ ಲಭಿಸುತ್ತದೆ.
» ವೃಷಭ
ಗುರು ಹಿರಿಯರ ಆಶೀರ್ವಾದದಿಂದ ಆತ್ಮಶಕ್ತಿ ಹೆಚ್ಚಳವಾಗಲಿದೆ. ಮುಂಗೋಪ ಬಿಟ್ಟರೆ ನೆರವು ಸಿಗಲಿದೆ. ಕಷ್ಟ ನಷ್ಟ ಕಡಿಮೆಯಾಗಲಿವೆ. ಅನಿರೀಕ್ಷಿತವಾಗಿ ನಿಮ್ಮ ಕೈಗೆ ಹಣ ಸೇರಲಿದೆ. ಲಾಭದಾಯಕವಾಗಿರಲಿದೆ ದಿನ.
» ಮಿಥುನ
ಜಾರಿ ಬೀಳುವ ಸಾಧ್ಯತೆ ಇದೆ. ಆದ್ದರಿಂದ ಎಚ್ಚರಿಕೆ ಇರಲಿ. ವೃತ್ತಿಯಲ್ಲಿ ತೊಡಕು ಉಂಟಾಗಬಹುದು. ಇವತ್ತು ಖರ್ಚುಗಳು ಹೆಚ್ಚುತ್ತವೆ. ಸಂಗಾತಿಯು ಹಣದ ಸಹಾಯ ಮಾಡುತ್ತಾರೆ.

» ಕರ್ಕಾಟಕ
ಒಳ್ಳೆಯ ಕೆಲಸಕ್ಕೆ ಹಣ ಖರ್ಚು. ಹೊಸ ವಾಹನ ಖರೀದಿ ಭಾಗ್ಯ. ಮನೆ ರಿಪೇರಿ ಕೆಲಸಕ್ಕೆ ಮುಂದಾಗುವಿರಿ. ಇಚ್ಚೆಯಂತೆ ಕೆಲಸ ಕಾರ್ಯ ನಡೆಯುತ್ತವೆ. ಉದ್ಯೋಗದಲ್ಲಿ ಲಾಭದಾಯಕ ಬದಲಾವಣೆ ಸಿಗುತ್ತವೆ.
» ಸಿಂಹ
ಎದುರಾಗುವ ಕಷ್ಟಗಳಿಂದ ಪಾರಾಗುವಿರಿ. ಆತ್ಮೀಯರೊಬ್ಬರು ಈ ದಿನ ನಿಮ್ಮ ಬೆಂಬಲಕ್ಕೆ ನಿಲ್ಲುತ್ತಾರೆ. ಇವತ್ತು ಖರ್ಚುಗಳು ಹೆಚ್ಚುತ್ತವೆ. ಸಂಗಾತಿಯು ಹಣದ ಸಹಾಯ ಮಾಡುತ್ತಾರೆ.

» ಕನ್ಯಾ
ಆರೋಗ್ಯದ ಬಗ್ಗೆ ಎಚ್ಚರವಿರಲಿ. ಆರೈಕೆಯ ಅಗತ್ಯವಿದೆ. ಹಣದ ಚಲನೆ ಹೆಚ್ಚಾಗಿರುತ್ತದೆ. ಸಮಸ್ಯೆಯಿಂದ ಹೊರಬರಬೇಕಿದ್ದರೆ ಹೊಂದಾಣಿಕೆ ಬೇಕು. ನಿಜ ತನದಿಂದ ಇರಿ. ಹಿತ ಶತೃಗಳು ಹೆಚ್ಚಾಗುವ ಸಾಧ್ಯತೆ.
» ತುಲಾ
ಇಂದು ನೀವು ನಿಮ್ಮ ಆರೋಗ್ಯ ಮತ್ತು ನೋಟವನ್ನು ಸುಧಾರಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತೀರಿ. ಸ್ನೇಹಿತರ ಶೀತಲ ವರ್ತನೆ ನಿಮ್ಮ ಮನಸ್ಸಿಗೆ ನೋವುಂಟು ಮಾಡುತ್ತದೆ. ಆದರೆ ಶಾಂತವಾಗಿರಲು ಪ್ರಯತ್ನಿಸಿ.
» ವೃಶ್ಚಿಕ
ಇಂದು ಧಾರ್ಮಿಕ ಮತ್ತು ಆಧ್ಯಾತ್ಮಿಕ ಆಸಕ್ತಿಗಳನ್ನು ಅನುಸರಿಸಲು ಒಳ್ಳೆಯ ದಿನ. ಗಡಿಬಿಡಿ ಪ್ರಯಾಣ. ಧ್ಯಾನ ಮತ್ತು ಆತ್ಮ ಸಾಕ್ಷಾತ್ಕಾರ ಪ್ರಯೋಜನಕಾರಿ ಆಗಬಹುದು. ಹಣದ ಸಂಬಂಧ ಸಮಸ್ಯೆ ಪರಿಹಾರವಾಗುತ್ತದೆ.

» ಧನಸ್ಸು
ಹೊರಾಂಗಣ ಕ್ರೀಡೆ ನಿಮ್ಮನ್ನು ಸೆಳೆಯುತ್ತದೆ. ಧ್ಯಾನ ಮತ್ತು ಯೋಗ ಲಾಭ ತರುತ್ತದೆ. ನೀವು ವಿರಾಮದ ಸಂತೋಷನ್ನು ಅನುಭವಿಸುತ್ತಿದ್ದೀರಿ. ನಿಮ್ಮ ಅಮೂಲ್ಯ ವಸ್ತು ಕಳುವಾಗುವ ಸಾಧ್ಯತೆ ಇದೆ.
» ಮಕರ
ಹೆಚ್ಚು ಆಶಾವಾದಿಯಾಗಲು ನಿಮ್ಮನ್ನು ನೀವೇ ಪ್ರೇರೇಪಿಸಿಕೊಳ್ಳಿ. ಇದು ವಿಶ್ವಾಸ ಮತ್ತು ನಮ್ಯತೆಯನ್ನು ಹೆಚ್ಚಿಸುತ್ತದೆ. ಇಂದು ನೀವು ಪ್ರಮುಖ ನಿರ್ಧಾರ ಕೈಗೊಳ್ಳಬೇಕು. ಇದು ನಿಮ್ಮನ್ನು ಒತ್ತಡ ಹಾಗೂ ಉದ್ವೇಗಕ್ಕೆ ಒಳಪಡಿಸುತ್ತದೆ.
» ಕುಂಭ
ಆರೋಗ್ಯ ದೃಷ್ಟಿಯಲ್ಲಿ ಉತ್ತಮ ದಿನ. ನಿಮ್ಮ ಹರ್ಷ ಚಿತ್ತದ ಮನಸ್ಸು ನಿಮಗೆ ಆನಂದವನ್ನು, ಆತ್ಮವಿಶ್ವಾಸ ನೀಡುತ್ತದೆ. ಸಂಬಂಧಿಕರಿಂದ ಯಾವುದಾದರು ಉಡುಗೊರೆ ಬರಬಹುದು.
» ಮೀನ
ನಿಮ್ಮ ಮನಸ್ಥಿತಿಯನ್ನು ಬದಲಾಯಿಸಲು ಯಾವುದಾದರು ಸಾಮಾಜಿಕ ಸಭೆಗೆ ಹಾಜರಾಗಿ. ಅನಿರೀಕ್ಷಿತವಾದ ಸಿಹಿ ಸುದ್ದಿ ಇಡೀ ಕುಟುಂಬವನ್ನು ಖುಷಿ ಪಡಿಸುತ್ತದೆ. ಹಣ ಗಳಿಕೆಯ ಹೊಸ ಅವಕಾಶಗಳು ಲಾಭದಾಯಕವಾಗಿರುತ್ತದೆ.
ಇದನ್ನೂ ಓದಿ » ಶಿವಮೊಗ್ಗ ಸಿಟಿಯಲ್ಲಿ ಮತ್ತೆ ಎರಡು ಇಂದಿರಾ ಕ್ಯಾಂಟೀನ್, ಎಲ್ಲೆಲ್ಲಿ? ಯಾವಾಗ ಶುರುವಾಗುತ್ತೆ?
LATEST NEWS
- ಆಲ್ಕೊಳ ಬಳಿ ಪೊಲೀಸರ ಕಾರ್ಯಾಚರಣೆ, ಬೈಕ್ ಸಹಿತ ಇಬ್ಬರು ಅರೆಸ್ಟ್, ಕಾರಣವೇನು?

- ಶರಾವತಿ ನಗರದಲ್ಲಿ ಕಾರು ಗಾಜು ಪೀಸ್ ಪೀಸ್ ಕೇಸ್, ಮೂವರು ಅರೆಸ್ಟ್, ಘಟನೆಗೆ ಕಾರಣ ಮನೆ

- ಶಿವಮೊಗ್ಗದಲ್ಲಿ ಏರ್ಟೆಲ್ ಮೊಬೈಲ್ ಟವರ್ನ ಉಪಕರಣ ಕಳವು, ಆಗಿದ್ದೇನು?

- ಶಿವಮೊಗ್ಗ ಕಾಂಗ್ರೆಸ್ ಕಾರ್ಯದರ್ಶಿ ಸೇರಿ ಇಬ್ಬರು 6 ವರ್ಷ ಪಕ್ಷದಿಂದ ಉಚ್ಛಾಟನೆ, ಕಾರಣವೇನು?

- ಬೇಡರ ಹೊಸಹಳ್ಳಿ ಬಳಿ ಚಲಿಸುತ್ತಿದ್ದ ಬಸ್ಸಿನ ಸೀಟಿನಿಂದಲೇ ಹೊರಗೆ ಬಿದ್ದ ಪ್ರಯಾಣಿಕ

About The Editor
ನಿತಿನ್ ಆರ್.ಕೈದೊಟ್ಲು





