ಶಿವಮೊಗ್ಗ ಸಿಟಿಯಲ್ಲಿ ಈ ವರ್ಷ ಹಲವು ದಿನ ಮಾಂಸ ಮಾರಾಟ ನಿಷೇಧ, ಯಾವ್ಯಾವ ದಿನ? ಕಾರಣವೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS, 3 FEBRUARY 2025

ಶಿವಮೊಗ್ಗ : ಮಹಾನಗರ ಪಾಲಿಕೆಯು ತನ್ನ ವ್ಯಾಪ್ತಿಯಲ್ಲಿ 2025ನೇ ಸಾಲಿನಲ್ಲಿ ಕೆಳಕಂಡ ದಿನಗಳನ್ನು ಮಾಂಸ (Meat) ರಹಿತ ದಿನವೆಂದು ಘೋಷಿಸಿದೆ.  

ಫೆ.26 ಮಹಾಶಿವರಾತ್ರಿ, ಏ.6 ರಂದು ಶ್ರೀರಾಮ ನವಮಿ, ಏ.10 ಮಹಾವೀರ ಜಯಂತಿ, ಮೇ 12 ಬುದ್ಧ ಪೂರ್ಣಿಮೆ, ಆ.16 ಕೃಷ್ಣ ಜನ್ಮಾಷ್ಟಮಿ, ಆ.27 ಗಣೇಶ ಚತುರ್ಥಿ, ಅ.2 ಗಾಂಧಿ ಜಯಂತಿ ದಿನ ಹಾಗೂ ನ.25 ರಂದು ಸೇಂಟ್ ಟಿ.ಎಲ್. ವಾಸ್ವಾನಿ ಜನ್ಮದಿನ ಆಚರಿಸುವ ಪ್ರಯುಕ್ತ ಈ ದಿನಗಳಂದು ಪ್ರಾಣಿ ವಧೆ ಹಾಗೂ ಮಾಂಸ ಮಾರಾಟ ನಿಷೇಧಿಸಲಾಗಿದೆ. 

Shimoga-Mahanagara-Palike-ambedkar-statue

ಮಾಂಸ ಮಾರಾಟ ಮಾಡುವವರು ಮೇಲ್ಕಂಡ ದಿನಾಂಕಗಳಂದು ತಮ್ಮ ಉದ್ದಿಮೆ ಬಂದ್ ಮಾಡಿ ಸಹಕರಿಸಬೇಕು. ಆದೇಶ ಉಲ್ಲಂಘಿಸುವ ಅಂಗಡಿ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪಾಲಿಕೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ » ತುಂಗಾ ಡ್ಯಾಂಗೆ 11 ಲಕ್ಷ ಮೀನು ಮರಿ | ಆಶ್ರಯ ಸಮಿತಿಗೆ ನೇಮಕ | ವಾಹನ ಡಿಕ್ಕಿ, ಜಿಂಕೆ ಸಾವು

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment