ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS, 15 FEBRUARY 2025
ಭದ್ರಾವತಿ : ನಗರಸಭೆ ನೂತನ ಅಧ್ಯಕ್ಷೆಯಾಗಿ (President) ಗೀತಾ ರಾಜಕುಮಾರ್ ಆಯ್ಕೆಯಾಗಿದ್ದಾರೆ. ಇಂದು ಮಧ್ಯಾಹ್ನ ಭದ್ರಾವತಿ ನಗರಸಭೆ ಸಭಾಂಗಣದಲ್ಲಿ ನಿಗದಿಯಾಗಿದ್ದ ಚುನಾವಣೆಯಲ್ಲಿ ಗೀತಾ ರಾಜಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರಸಭೆ ನೂತನ ಅಧ್ಯಕ್ಷೆ ಗೀತಾ ರಾಜಕುಮಾರ್‌ಗೆ ಶಾಸಕ ಬಿ.ಕೆ.ಸಂಗಮೇಶ್ವರ್, ವಿಧಾನ ಪರಿಷತ್ ಸದಸ್ಯೆ ಬಲ್ಕಿಷ್ ಬಾನು, ನಗರಸಭೆ ಹಿರಿಯ ಸದಸ್ಯ ಬಿ.ಕೆ.ಮೋಹನ್ ಸೇರಿದಂತೆ ನಗರಸಭೆಯ ಸದಸ್ಯರು, ಪಕ್ಷದ ಪ್ರಮುಖರು ಶುಭಾಶಯ ತಿಳಿಸಿದರು.

ಭದ್ರಾವತಿಯ ಅಭಿವೃದ್ಧಿಗೆ ಪೂರಕವಾದ ಕೆಲಸ ಮಾಡಲಿದ್ದೇವೆ. ಶಾಸಕರ ಸಲಹೆ ಮತ್ತು ಅವರೊಂದಿಗೆ ಚರ್ಚೆ ನಡೆಸಿ ಭದ್ರಾವತಿಯನ್ನು ಸುಂದರ ನಗರವಾಗಿ ರೂಪಿಸುವ ಕನಸು ಇದೆ. ಅಧಿಕಾರಿಗಳು, ಜನರ ಸಹಕಾರದಲ್ಲಿ ಕೆಲಸ ಮಾಡಲಿದ್ದೇನೆ.
• ಗೀತಾ ರಾಜಕುಮಾರ್, ಭದ್ರಾವತಿ ನಗರಸಭೆ ನೂತನ ಅಧ್ಯಕ್ಷೆ
ಅವಿರೋಧವಾಗಿ ಆಯ್ಕೆ
ನೂತನ ಅಧ್ಯಕ್ಷರ ಆಯ್ಕೆಗೆ ಇಂದು ಮಧ್ಯಾಹ್ನ ಚುನಾವಣೆ ನಿಗದಿಯಾಗಿತ್ತು. ನಾಮಪತ್ರ ಸಲ್ಲಿಸಲು ಮಧ್ಯಾಹ್ನ 1 ಗಂಟೆಯಿಂದ 1.15ರವರೆಗೆ ಕಾಲವಕಾಶವಿತ್ತು. ನಾಮಪತ್ರ ಹಿಂಪಡೆಯಲು 1.15ರಿಂದ 1.30ರವರೆಗೆ ಸಮಯ ನಿಗದಿಯಾಗಿತ್ತು. ಗೀತಾ ರಾಜಕುಮಾರ್ ಅವರ ಹೊರತು ಮತ್ಯಾವ ಸದಸ್ಯರೂ ನಾಮಪತ್ರ ಸಲ್ಲಿಸಲಿಲ್ಲ. ಹಾಗಾಗಿ ಗೀತಾ ರಾಜಕುಮಾರ್ ಅವರನ್ನು ನಗರಸಭೆಯ ನೂತನ ಅಧ್ಯಕ್ಷರಾಗಿ ಘೋಷಿಸಲಾಯಿತು. ಉಪ ವಿಭಾಗಾಧಿಕಾರಿ ಸತ್ಯನಾರಾಯಣ ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು.

ಉಪಸ್ಥಿತರಿದ್ದದ್ದು 27 ಸದಸ್ಯರಷ್ಟೆ
ನಗರಸಭೆಯಲ್ಲಿ ಒಟ್ಟು 35 ಸದಸ್ಯರಿದ್ದಾರೆ. ಆದರೆ ಚುನಾವಣೆ ಸಂದರ್ಭ ಕಾಂಗ್ರೆಸ್‌ನ 19 ಸದಸ್ಯರು, ಜೆಡಿಎಸ್‌ನ ಐವರು ಸದಸ್ಯರು, ಬಿಜೆಪಿಯ ಮೂವರು ಸದಸ್ಯರು ಸೇರಿ ಒಟ್ಟು 27 ಸದಸ್ಯರು ಮತ್ತು ವಿಧಾನ ಪರಿಷತ್ ಸದಸ್ಯೆ ಬಲ್ಕಿಷ್ ಬಾನು ಉಪಸ್ಥಿತರಿದ್ದರು.

ವಿಡಿಯೋ ಕರೆ ಮಾಡಿದ್ದ ಎಂಎಲ್‌ಎ
ನಗರಸಭೆ ಅಧ್ಯಕ್ಷರ ಆಯ್ಕೆ ಚುನಾವಣೆಗೆ ಶಾಸಕ ಸಂಗಮೇಶ್ವರ್ ಗೈರಾಗಿದ್ದರು. ಚುನಾವಣೆ ಮುಗಿದ ನಂತರ ನೂತನ ಅಧ್ಯಕ್ಷೆಗೆ ಗೀತಾ ರಾಜಕುಮಾರ್ ಅವರಿಗೆ ವಿಡಿಯೋ ಕರೆ ಮಾಡಿ ಶಾಸಕ ಸಂಗಮೇಶ್ವರ್ ಶುಭ ಕೋರಿದರು.

ಇದನ್ನೂ ಓದಿ » ಶಿವಮೊಗ್ಗದಿಂದ ಕುಂಭಮೇಳಕ್ಕೆ ವಿಶೇಷ ರೈಲು, ಟಿಕೆಟ್ ಬುಕಿಂಗ್ ಶುರು, ಯಾವಾಗ ಹೊರಡುತ್ತೆ ರೈಲು?
LATEST NEWS
- ಭದ್ರಾವತಿಯ ತರೀಕೆರೆ ರಸ್ತೆಯಲ್ಲಿ ಅಗ್ನಿ ಅವಘಡ, ಲಕ್ಷ ಲಕ್ಷ ಮೌಲ್ಯದ ವಸ್ತುಗಳು ಆಹುತಿ

- ಕಲ್ಲು ಬಂಡೆ ಬಿದ್ದು ಕೃಷಿಕ ಸ್ಥಳದಲ್ಲೇ ಸಾವು

- ಹೆಗಲತ್ತಿಯಲ್ಲಿ ನಾಗಯಕ್ಷೆ ದೇವಾಲಯದ 12ನೇ ವಾರ್ಷಿಕೋತ್ಸವ, ಇವತ್ತು ಪಲ್ಲಕ್ಕಿ ಉತ್ಸವ

- ಶಿವಮೊಗ್ಗ ಜಿಲ್ಲೆಯಲ್ಲಿ ರಣ ಬಿಸಿಲು, ತಾಪಮಾನ ಹೆಚ್ಚಳ, ಇವತ್ತು ಎಲ್ಲೆಲ್ಲಿ ಎಷ್ಟಿರಲಿದೆ ಉಷ್ಣಾಂಶ?

- ತುಂಗಾ ಚಾನಲ್ ಬಳಿ ಸ್ಕೂಟಿ ನಿಲ್ಲಿಸಿಕೊಂಡಿದ್ದವರ ಮೇಲೆ ಪೊಲೀಸ್ ದಾಳಿ, ಒಬ್ಬ ಎಸ್ಕೇಪ್, ಮತ್ತೊಬ್ಬ ಅರೆಸ್ಟ್

About The Editor
ನಿತಿನ್ ಆರ್.ಕೈದೊಟ್ಲು






