ದುಬೈನಿಂದ ಶಿವಮೊಗ್ಗಕ್ಕೆ ಮರಳಿದ ಕುಟುಂಬಕ್ಕೆ ಕಾದಿತ್ತು ಆಘಾತ, ಆಗಿದ್ದೇನು?

ಶಿವಮೊಗ್ಗ : ಕುಟುಂಬದವರು ದುಬೈ (Dubai) ಪ್ರವಾಸಕ್ಕೆ ಹೋಗಿದ್ದಾಗ ಮನೆಗೆ ನುಗ್ಗಿದ ಕಳ್ಳರು ಚಿನ್ನಾಭರಣ, ನಗದು ಕಳ್ಳತನ ಮಾಡಿದ್ದಾರೆ. ದುಬೈ ಪ್ರವಾಸದಿಂದ ಹಿಂತಿರುಗಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಟ್ಯಾಂಕ್‌ ಮೊಹಲ್ಲಾದ ಯುಸುಫ್‌ ಎಂಬುವವರ ಮನೆಯಲ್ಲಿ ಕಳ್ಳತನವಾಗಿದೆ. ಮನೆಯ ಬೀರುವಿನಲ್ಲಿದ್ದ 1.10 ಲಕ್ಷ ರು. ಮೌಲ್ಯದ ಚಿನ್ನಾಭರಣ, 28 ಸಾವಿರ ರೂ. ಮೌಲ್ಯದ ಬೆಳ್ಳಿ ವಸ್ತುಗಳು, ಆರು ಸಾವಿರ ರೂ. ನಗದು ಕಳ್ಳತನವಾಗಿದೆ ಎಂದು ಆರೋಪಿಸಲಾಗಿದೆ.

Parishrama advt 10 feb 2025 1

ದುಬೈ ಪ್ರವಾಸ ಮುಗಿಸಿ ಯುಸುಫ್‌ ಅವರ ಕುಟುಂಬ ಶಿವಮೊಗ್ಗಕ್ಕೆ ಹಿಂತಿರುಗುತ್ತಿತ್ತು. ಆದ್ದರಿಂದ ಅವರ ಅಳಿಯ ಮನೆ ಕ್ಲೀನ್‌ ಮಾಡಿಸಲು ಕೆಲಸದವರನ್ನು ಕರೆದೊಯ್ದಿದ್ದರು. ಆಗ ಮನೆಯ ಮುಂಬಾಗಿಲಿನ ಇಂಟರ್‌ ಲಾಕ್‌ ಮುರಿದಿತ್ತು. ಪರಿಶೀಲಿಸಿದಾಗ ಕಳ್ಳತನ ಆಗಿರುವುದು ಗೊತ್ತಾಗಿದೆ. ಘಟನೆ ಸಂಬಂಧ ಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

NATIONAL-PUBLIC-SCHOOL-scaled

ಇದನ್ನೂ ಓದಿ » ದಿನ ಭವಿಷ್ಯ | ಇವತ್ತು ಯಾವ್ಯಾವ ರಾಶಿಗೆ ಹೇಗಿದೆ? ಯಾವ ರಾಶಿಗೆ ಲಾಭವಿದೆ?

Crime-News-General-Image

Leave a Comment