ಹೊಟೇಲ್‌ನಲ್ಲಿ ಯುವಕ, ಯುವತಿಯ ವಿಡಿಯೋ ತೆಗೆದರು, ಆಟೋದಲ್ಲಿ ಕಿಡ್ನಾಪ್‌ ಮಾಡಿದರು, ಏನಿದು ಕೇಸ್‌?

ಶಿವಮೊಗ್ಗ : ಹೊಟೇಲ್‌ನಲ್ಲಿ (Hotel) ಯುವಕ, ಯುವತಿಯ ವಿಡಿಯೋ ಚಿತ್ರೀಕರಣ ಮಾಡಿಕೊಂಡು ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪದ ಸಂಬಂಧ ಪ್ರಕರಣ ದಾಖಲಾಗಿದೆ. ಯುವಕ ಮತ್ತು ಯುವತಿ (ಇಬ್ಬರ ಹೆಸರು ಗೌಪ್ಯ) ಬೈಕಿನಲ್ಲಿ ಸಕ್ರೆಬೈಲಿನ ಹೊಟೇಲ್‌ ಒಂದಕ್ಕೆ ಊಟಕ್ಕೆ ತೆರಳಿದ್ದಾಗ ಘಟನೆ ಸಂಭವಿಸಿದೆ.

ಯುವಕ ಊಟದ ಕೊಠಡಿಯಲ್ಲಿ ಬಿಯರ್‌ ಬಾಟಲಿ ಇಟ್ಟುಕೊಂಡಿದ್ದ. ಆ ಸಂದರ್ಭ ಅಲ್ಲಿಗೆ ಬಂದ ನಾಲ್ವರು ಅಪರಿಚಿತರು ವಿಡಿಯೋ ಚಿತ್ರೀಕರಣ ಮಾಡಿದ್ದಾರೆ. ಬಳಿಕ ಯುವಕ ಮತ್ತು ಯುವತಿಯನ್ನು ಬಲವಂತವಾಗಿ ಆಟೋದಲ್ಲಿ ಶಿವಮೊಗ್ಗಕ್ಕೆ ಕರೆತಂದು ವಿವಿಧೆಡೆ ಸುತ್ತಾಡಿಸಿದ್ದಾರೆ. ಹಣ ಕೊಡದೆ ಇದ್ದರೆ ವಿಡಿಯೋ ಲೀಕ್‌ ಮಾಡುವುದಾಗಿ ಬೆದರಿಸಲಾಗಿದೆ. ಈ ವೇಳೆ ಯುವತಿ ಬಳಿ ಇದ್ದ 24 ಸಾವಿರ ರೂ., ಹಣ, ಯುವಕನ ಮೊಬೈಲ್‌ನಿಂದ ಗೂಗಲ್‌ ಪೇ ಮೂಲಕ 1500 ರೂ. ಹಣ ವರ್ಗಾಯಿಸಿಕೊಂಡಿದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.  

Parishrama advt 10 feb 2025 1

ಮತ್ತಷ್ಟು ಹಣಕ್ಕೆ ಡಿಮಾಂಡ್‌

ಯುವಕ ಮತ್ತು ಯುವತಿಯನ್ನು ಆಟೋದಲ್ಲಿ ಕರೆತಂದು ಎಂಆರ್‌ಎಸ್‌ ಸರ್ಕಲ್‌ ಬಳಿ ಬಿಟ್ಟು, ಅವರ ಬೈಕ್‌ ಕೊಟ್ಟು ಕಳುಹಿಸಲಾಗಿದೆ. ರಾತ್ರಿಯೊಳಗೆ ಒಂದೂವರೆ ಲಕ್ಷ ರೂ. ಹಣ ಕೊಡದೆ ಇದ್ದರೆ ವಿಡಿಯೋ ಲೀಕ್‌ ಮಾಡುವುದಾಗಿ ಬೆದರಿಕೆ ಒಡ್ಡಿದಾರೆ ಎಂದು ಆರೋಪಿಸಲಾಗಿದೆ.

NATIONAL-PUBLIC-SCHOOL-scaled

ಯುವಕನ ಮೇಲೆ ಹಲ್ಲೆ

ಯುವಕನಿಗೆ ಕರೆ ಮಾಡಿದ್ದ ಅಪರಿಚಿತರು ಹಣ ತಂದು ಕೊಡುವಂತೆ ಬೆದರಿಸಿದ್ದರು. ಆರು ಸಾವಿರ ರೂ. ಹಣದೊಂದಿಗೆ ಯುವಕ ಶಿವಮೊಗ್ಗ ಬಸ್‌ ನಿಲ್ದಾಣದ ಬಳಿ ಬಂದಿದ್ದ. ಆಟೋದಲ್ಲಿ ಬಂದ ಯುವಕರಿಗೆ ಹಣ ಆರು ಸಾವಿರ ರೂ. ಕೊಟ್ಟಿದ್ದಕ್ಕೆ ಯುವಕನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೆ ಒಂದೂವರೆ ಲಕ್ಷ ರೂ. ಹಣ ನೀಡುವಂತೆ ಆಗ್ರಹಿಸಿ, ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಆಪಾದಿಸಲಾಗಿದೆ.

Kalleshwara-Enterprises.webp

ಘಟನೆ ಸಂಬಂಧ ತುಂಗಾ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಇದನ್ನೂ ಓದಿ » ಶಿವಮೊಗ್ಗಕ್ಕೆ ಲಗ್ಗೆ ಇಟ್ಟ ರ‍್ಯಾಪಿಡೋ ಬೈಕ್‌ ಟ್ಯಾಕ್ಸಿ, ಆಟೋ ಚಾಲಕರ ಆಕ್ರೋಶ, ಏನಿದು ರ‍್ಯಾಪಿಡೋ?

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment