ಬೈಕಿನಲ್ಲಿ 18 ಕೆ.ಜಿ. ಶ್ರೀಗಂಧ ಸಾಗಿಸುತ್ತಿದ್ದವರು ಅರಣ್ಯಾಧಿಕಾರಿಗಳ ಬಲೆಗೆ, ಇಬ್ಬರು ಅರೆಸ್ಟ್‌, ಒಬ್ಬ ಎಸ್ಕೇಪ್‌

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS
ಹೊಸನಗರ : ಶ್ರೀಗಂಧ ಮರವನ್ನು (sandalwood) ಅಕ್ರಮವಾಗಿ ಕಡಿತಲೆ ಮಾಡಿ ತುಂಡುಗಳನ್ನಾಗಿ ಕತ್ತರಿಸಿ ಬೈಕ್‌ನಲ್ಲಿ ಸಾಗಣೆ ಮಾಡುತ್ತಿದ್ದ ಇಬ್ಬರು ಶ್ರೀಗಂಧ ಕಳ್ಳರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಕೆರೆಹಳ್ಳಿ ಹೋಬಳಿ ಹೊಸಳ್ಳಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ‍ಶ್ರೀಗಂಧ ಕಡಿತಲೆ ಮಾಡಲಾಗಿತ್ತು.
➤ ಸುದ್ದಿಯ ಮುಂದಿನ 4 ಪ್ಯಾರಾಗಳು ಕೆಳಗಿವೆ.

ಹೊಸಕೆಸರೆ ಗ್ರಾಮದ ಸೊಪ್ಪಿನಮಲ್ಲೆ ನಿವಾಸಿ ದಿನೇಶ್ ಅಲಿಯಾಸ್ ವಿಜೇತ (31) ಮತ್ತು ಹಿರಿಯೋಗಿ ಗ್ರಾಮದ ಮಾವಿನಕಟ್ಟೆಯ ರಾಘವೇಂದ್ರ (32) ಬಂಧಿತರು. ಹೊಸಕೆಸರೆ ಗ್ರಾಮದ ನೀರೇರಿ ನಿವಾಸಿ ಎಂ.ಭದ್ರಪ್ಪ ಅಲಿಯಾಸ್‌ ಕರಿಮಂಜ (32) ತಲೆಮರೆಸಿಕೊಂಡಿದ್ದಾನೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Sandalwood-thieves-nabbed-at-hosanagara

ಆರೋಪಿಗಳಿಂದ 18 ಕೆ.ಜಿ. ಶ್ರೀಗಂಧ ಹಾಗೂ ಸಾಗಣೆಗೆ ಬಳಸುತ್ತಿದ್ದ 3 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಹೊಸನಗರ ವಲಯ ಅರಣ್ಯಾಧಿಕಾರಿ ಎಸ್.ಅನಿಲ್ ಕುಮಾರ್, ಹರತಾಳು ಶಾಖೆ ಉಪ ವಲಯ ಅರಣ್ಯಾಧಿಕಾರಿ ಮಂಜುನಾಥ ಕೆ ಎನ್, ಸಿಬ್ಬಂದಿ ಪುಟ್ಟಸ್ವಾಮಿ ಕೆ.ವಿ, ಭರತ್ ಕುಮಾರ್, ಸುರೇಶ್ ವಿ, ರಾಜು ಎನ್, ಪ್ರಶಾಂತ ಜಿ, ವಾಹನ ಚಾಲಕ ಮಹೇಶ್ ಇದ್ದರು.

Parishrama advt 10 feb 2025 1

NATIONAL-PUBLIC-SCHOOL-scaled

ಇದನ್ನೂ ಓದಿ » ಹಂದಿಗಾಗಿ ಕೈ ಕೈ ಮಿಲಾಯಿಸಿ ಆಸ್ಪತ್ರೆ ಸೇರಿದ ಯುವಕರು, ದೂರು, ಪ್ರತಿದೂರು ದಾಖಲು

Leave a Comment