ಸಾಗರ : ಮೆಸ್ಕಾಂ ಜೋಗ ವ್ಯಾಪ್ತಿಯ 110/11 ಕೆ.ವಿ ವಿದ್ಯುತ್ ಸರಬರಾಜು ತುರ್ತು ತ್ರೈಮಾಸಿಕ ನಿರ್ವಹಣೆ ಕಾಮಗಾರಿ ನಡೆಸಲಾಗುತ್ತಿದೆ. ಆದ್ದರಿಂದ ಫೆ.21ರಂದು ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ವಿವಿಧೆಡೆ ವಿದ್ಯುತ್ (Power cut) ವ್ಯತ್ಯಯವಾಗಲಿದೆ.
ಜೋಗ ಕಾರ್ಗಲ್ ವ್ಯಾಪ್ತಿ ಸೇರಿ ಅರಳಗೋಡು, ಭಾನುಕುಳಿ, ಚನ್ನಗೊಂಡ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ತಿಳಿಸಿದ್ದಾರೆ. ಕೋಣಂದೂರಿನಲ್ಲಿ ಎಲ್ಲೆಲ್ಲಿ ಕರೆಂಟ್ ಇರಲ್ಲ? ಕೆಳಗಿದೆ ಲಿಸ್ಟ್
ಕೋಣಂದೂರಿನಲ್ಲಿ ಕರೆಂಟ್ ಇರಲ್ಲ
ಕೋಣಂದೂರು : ಇಲ್ಲಿನ ಮುಖ್ಯ ರಸ್ತೆ ವಿಸ್ತರಣೆ ಕಾಮಗಾರಿ ಹಾಗೂ 110 ಕೆ.ವಿ. ಪರಿವರ್ತಕ ನಿರ್ವಹಣಾ ಕಾಮಗಾರಿ ನಡೆಸಲಾಗುತ್ತಿದೆ. ಆದ್ದರಿಂದ ಫೆ.21ರ ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಕೋಣಂದೂರು ಶಾಖಾ ವ್ಯಾಪ್ತಿಯ ಕೋಣಂದೂರು, ಹುಂಚದ ಕಟ್ಟೆ, ಹಾದಿಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಇರುವುದಿಲ್ಲ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.



ಇದನ್ನೂ ಓದಿ » ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಪೊಲೀಸರಿಂದ ದಿಢೀರ್ ಕಾರ್ಯಾಚರಣೆ, 626 ಕೇಸ್ ದಾಖಲು