ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಪೊಲೀಸರಿಂದ ದಿಢೀರ್‌ ಕಾರ್ಯಾಚರಣೆ, 626 ಕೇಸ್‌ ದಾಖಲು

ಶಿವಮೊಗ್ಗ : ಜಿಲ್ಲೆಯ ವಿವಿಧೆಡೆ ಜೆರಾಕ್ಸ್‌ ಅಂಗಡಿ, ಪೆಟ್ಟಿಗೆ ಅಂಗಡಿ ಮತ್ತು ಬೇಕರಿಗಳ ಮೇಲೆ ಪೊಲೀಸರು ದಾಳಿ (Raid) ನಡೆಸಿದ್ದಾರೆ. ಕೋಟ್ಪಾ ಕಾಯ್ದೆ ಅಡಿ 626 ಪ್ರಕರಣ ದಾಖಲು ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸುದ್ದಿಯ ಮುಂದಿನ ಭಾಗ ಕೆಳಗಿದೆ

ಶಾಲೆ, ಕಾಲೇಜು ಆವರಣದಿಂದ 100 ಮೀಟರ್‌ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದ ಆರೋಪದ ಹಿನ್ನೆಲೆ ಜಿಲ್ಲೆಯ ವಿವಿಧ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಏಕಕಾಲಕ್ಕೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಶಿವಮೊಗ್ಗ – ಎ ಉಪ ವಿಭಾಗದಲ್ಲಿ – 145,  ಶಿವಮೊಗ್ಗ – ಬಿ ಉಪ ವಿಭಾಗದಲ್ಲಿ – 142, ಭದ್ರಾವತಿ ಉಪ ವಿಭಾಗದಲ್ಲಿ – 123,  ಸಾಗರ ಉಪ ವಿಭಾಗದಲ್ಲಿ – 84,  ಶಿಕಾರಿಪುರ ಉಪ ವಿಭಾಗದಲ್ಲಿ – 50 ಮತ್ತು  ತೀರ್ಥಹಳ್ಳಿ ಉಪ ವಿಭಾಗದಲ್ಲಿ – 82 ಪ್ರಕರಣದ ದಾಖಲಿಸಲಾಗಿದೆ. ಶಿವಮೊಗ್ಗ ಜಿಲ್ಲೆಯಾದ್ಯಂತ ಒಟ್ಟು 626 ಕೋಟ್ಪಾ ಸ್ಥಳ ದಂಡ ಪ್ರಕರಣ ದಾಖಲಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Shivamogga Live Promotion

-Police-raid-on-shops-booke-cotpa-cases

ಇದನ್ನೂ ಓದಿ » ತಾಳಗುಪ್ಪ, ಶಿವಮೊಗ್ಗ, ಭದ್ರಾವತಿ : ದಿನ ಎಷ್ಟು ರೈಲು, ಯಾವ್ಯಾವ ಟೈಮ್‌ಗೆ ಹೊರಡುತ್ತವೆ? ಇಲ್ಲಿದೆ ಲಿಸ್ಟ್‌

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Leave a Comment