ಮುಸ್ಲಿಮ್‌ ಬಜೆಟ್‌ ಆರೋಪಕ್ಕೆ ಮಧು ಬಂಗಾರಪ್ಪ ತಿರುಗೇಟು, ಏನಂದ್ರು? ಇಲ್ಲಿದೆ ನಾಲ್ಕು ಪಾಯಿಂಟ್‌

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಿವಮೊಗ್ಗ : ರಾಜ್ಯ ಸರ್ಕಾರದ್ದು ಮುಸ್ಲಿಂ (Muslim) ಸಮುದಾಯದ ತುಷ್ಠೀಕರಣದ ಬಜೆಟ್‌ ಎಂದು ಬಿಜೆಪಿ ಆರೋಪಿಸಿದೆ. ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಮಿನಿಸ್ಟರ್‌ ಹೇಳಿದ್ದೇನು? ಇಲ್ಲಿದೆ ಪಾಯಿಂಟ್ಸ್‌

point-1ಗ್ಯಾರಂಟಿ ಯೋಜನೆಗಾಗಿ ಪ್ರತಿ ಶಾಸಕರ ಕ್ಷೇತ್ರಕ್ಕೆ ತಲಾ 230 ಕೋಟಿ ರೂ. ಹಣ ಸಂದಾಯವಾಗುತ್ತದೆ. ಯಾವುದೇ ಕಮಿಷನ್‌ ಇಲ್ಲೆ ಹಣ ಫಲಾನುಭವಿಗಳಿಗೆ ತಲುಪಿಸಿ, ಇಡೀ ದೇಶಕ್ಕೆ ಮಾದರಿಯಾಗಿದ್ದೇವೆ. ಬಡವರ ಕೈಗೆ ಹಣ ಕೊಟ್ಟರೆ ಮಾರುಕಟ್ಟೆಯಲ್ಲಿ ಹಣದ ಚಲನೆ ಇರುತ್ತದೆ. ಆದರೆ ಬಡತನವನ್ನು ಜಾತಿ, ಧರ್ಮದ ಕಣ್ಣಿನಿಂದ ನೋಡುವುದು ಸರಿಯಲ್ಲ.

madhu%20bangarappa

point-2ಸಂಪೂರ್ಣ ಬಜೆಟ್‌ ಮುಸ್ಲಿಮ್‌ (Muslim) ಸಮುದಾಯಕ್ಕೆ ಕೊಡಲಾಗಿದೆಯೇ? ಉತ್ತರ ಪ್ರದೇಶದಲ್ಲಿ ಮುಸ್ಲಿಮರೆ ಇಲ್ಲವೆ. ಅಲ್ಲಿ ಸರ್ಕಾರ ಮುಸ್ಲಿಮರಿಗೆ ಸಹಾಯ ಮಾಡುತ್ತಿಲ್ಲವೆ. ನಾವು ಹೃದಯದಲ್ಲಿ ಗೋಮಾತೆಯನ್ನು ಇರಿಸಿಕೊಂಡಿದ್ದೇವೆ. ನಿತ್ಯ ಪೂಜೆ ಮಾಡುತ್ತೇವೆ. ಅವರಂತೆ ಬಾಯಿ ಮಾತಿಗೆ ಗೋಮಾತೆ ಅನ್ನುತ್ತಿಲ್ಲ. ದೇಶದಿಂದ ಭಾರಿ ಪ್ರಮಾಣದಲ್ಲಿ ಗೋಮಾಂಸ ರಫ್ತಾಗುತ್ತಿದೆ. ಇದಕ್ಕೆ ಉತ್ತರವಿಲ್ಲ ಯಾಕೆ?

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

point-3ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡಲಾಗುತ್ತದೆ. ಆದರೆ ಆ ಶಿಕ್ಷಣ ಸಂಸ್ಥೆಗಳಲ್ಲಿ ಶೇ.25ರಷ್ಟು ಇತರೆ ಧರ್ಮಿಯರು ಇರುತ್ತಾರೆ. ಆ ಅನುದಾನ ಶೈಕ್ಷಣಿಕವಾಗಿ ಎಲ್ಲರಿಗು ನೆರವಾಗಲಿದೆ. ಇನ್ನು, ಶೈಕ್ಷಣಿಕ ಅಭಿವೃದ್ಧಿಗಾಗಿ 5 ಸಾವಿರ ಕೋಟಿ ರೂ. ಪೈಕಿ 1250 ಕೋಟಿ ರೂ. ಹಣವನ್ನು ಕಲ್ಯಾಣ ಕರ್ನಾಟಕಕ್ಕೆ ಮೀಸಲಿಡಲಾಗಿದೆ. ಆ ಭಾಗದಲ್ಲಿ ಎಲ್ಲ ಜಾತಿ, ಧರ್ಮಿಯರಿಗು ಇದರ ಅನುಕೂಲ ಸಿಗಲಿದೆ.

madhu%20bangarappa1

ಇದನ್ನೂ ಓದಿ » ರಾಜ್ಯ ಬಜೆಟ್‌, ಶಿವಮೊಗ್ಗಕ್ಕೆ ಸಿಕ್ಕಿದ್ದೇನು? ಪಟ್ಟಿ ಪ್ರಕಟಿಸಿದ ಮಿನಿಸ್ಟರ್‌ ಮಧು ಬಂಗಾರಪ್ಪ

point-4ಬಿಜೆಪಿಯವರಿಗೆ ಪ್ರಗತಿಪರ ಯೋಚನೆ ಇಲ್ಲ. ಪಾಕಿಸ್ತಾನ, ಹಲಾಲ್‌ ಎಂದಷ್ಟೆ ಮಾತನಾಡುತ್ತಾರೆ. ಬಿಜೆಪಿ ಈ ದೇಶದಕ್ಕೆ ಅತಿದೊಡ್ಡ ಶಾಪ. ಡಾ. ಮನಮೋಹನ್‌ ಸಿಂಗ್‌ ಅವರು ಪ್ರಧಾನಿಯಾಗಿದ್ದಾಗ 53 ಲಕ್ಷ ಕೋಟಿ ರೂ. ಸಾಲವಿತ್ತು. ಈಗ ಕೇಂದ್ರ ಸರ್ಕಾರದ ಸಾಲ 183 ಲಕ್ಷ ಕೋಟಿ ರೂ.ಗೆ ತಲುಪಿದೆ. ರಾಜ್ಯ ಸರ್ಕಾರ ಶೇ.3ರಷ್ಟು ಸಾಲ ಮಾಡಲು ಮಿತಿ ಇದೆ. ಆದರೆ ಕೇಂದ್ರ ಸರ್ಕಾರ ಈ ಮಿತಿಯನ್ನು ಮೀರಿ ಸಾಲ ಮಾಡಿದೆಯಲ್ಲ.

ಇದನ್ನೂ ಓದಿ » ಚಂದ್ರಗುತ್ತಿಯಲ್ಲಿ ವೈಭವದ ಬ್ರಹ್ಮರಥೋತ್ಸವ, ಲಕ್ಷ ಲಕ್ಷ ಭಕ್ತರು ಭಾಗಿ, ಏನೆಲ್ಲ ಧಾರ್ಮಿಕ ಕಾರ್ಯಕ್ರಮ ನಡೆಯಿತು?

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment