ಸಾಗರದಲ್ಲಿ ಕೆಎಸ್‌ಆರ್‌ಟಿಸಿ ಬಸ್‌ ಜಫ್ತಿ, ನ್ಯಾಯಾಲಯದ ಆವರಣಕ್ಕೆ ರವಾನೆ, ಕಾರಣವೇನು?

ಸಾಗರ : ಅಪಘಾತದಲ್ಲಿ ಮೃತಪಟ್ಟ ಯುವಕನ ಕುಟುಂಬಕ್ಕೆ ಪರಿಹಾರ ನೀಡದ ಹಿನ್ನೆಲೆ ಸಾಗರ ನ್ಯಾಯಾಲಯದ ಆದೇಶದ ಮೇರೆಗೆ ಕೆಎಸ್‌ಆರ್‌ಟಿಸಿ ಬಸ್ಸನ್ನು ಜಫ್ತಿ ಮಾಡಲಾಗಿದೆ. ಶಿರಸಿ ಡಿಪೋಗೆ ಸೇರಿದ ಬಸ್‌ ಒಂದನ್ನು ಜಫ್ತಿ (Seized) ಮಾಡಿ ನ್ಯಾಯಾಲಯದ ಆವರಣದಲ್ಲಿ ನಿಲ್ಲಿಸಲಾಗಿದೆ.

ಏನಿದು ಪ್ರಕರಣ?

2022ರ ಜುಲೈ 7ರಂದು ಬೆಳಗ್ಗೆ 5.30ಕ್ಕೆ ಗಣೇಶ್‌ ಎಂಬ ಯುವಕ ಪತ್ರಿಕೆ ಹಂಚಲು ಸೈಕಲ್‌ನಲ್ಲಿ ತೆರಳುವಾಗ ಕೆಎಸ್‌ಆರ್‌ಟಿಸಿ ಬಸ್‌ ಡಿಕ್ಕಿಯಾಗಿ ಸಾವನ್ನಪ್ಪಿದ್ದ. ಪರಿಹಾರ ಕೋರಿ ಗಣೇಶನ ಪೋಷಕರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಬಳಿಕ ಮೂರು ತಿಂಗಳ ಒಳಗೆ ಪರಿಹಾರ ನೀಡಬೇಕು ಎಂದು 2024ರ ಜುಲೈ 8ರಂದು ನ್ಯಾಯಾಲಯ ಆದೇಶಿಸಿತ್ತು.

KSRTC-Bus-seized-at-sagara-court.

ಪರಿಹಾರ ನೀಡದ ಕೆಎಸ್‌ಆರ್‌ಟಿಸಿ

ನ್ಯಾಯಾಲಯದ ಆದೇಶವಿದ್ದರು ಗಣೇಶನ ಪೋಷಕರಿಗೆ ಕೆಎಸ್‌ಆರ್‌ಟಿಸಿ ಪರಿಹಾರ ನೀಡಲಿಲ್ಲ. ಈ ಹಿನ್ನೆಲೆ ಗಣೇಶನ ತಾಯಿ ಉಮಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಬಸ್‌ ಜಫ್ತಿಗೆ (Seized) ಆದೇಶಿಸಿತು. ಈ ಹಿನ್ನೆಲೆ ಶಿರಸಿ ಡಿಪೋಗೆ ಸೇರಿದ ಕೆಎಸ್‌ಆರ್‌ಟಿಸಿ ಬಸ್ಸನ್ನು ಸಾಗರದಲ್ಲಿ ವಶಕ್ಕೆ ಪಡೆದು ನ್ಯಾಯಾಲಯದ ಆವರಣದಲ್ಲಿ ನಿಲ್ಲಿಸಲಾಗಿದೆ.

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

ಇದನ್ನೂ ಓದಿ » ಶಿವಮೊಗ್ಗದಲ್ಲಿ ನಿರ್ದೇಶಕ ಯೋಗರಾಜ್‌ ಭಟ್‌, ಮನದ ಕಡಲು ಟೀಮ್‌ ಜೊತೆಗೆ ಪ್ರೆಸ್‌ ಮೀಟ್‌

KSRTC-Bus-seized-at-sagara-court.

Leave a Comment