ಶಿವಮೊಗ್ಗದಲ್ಲಿ ಬೈಕಿನಲ್ಲಿ ಅಕ್ಕಿ ಮೂಟೆ ಇಟ್ಟುಕೊಂಡು ಹೋಗುವಾಗ ಅಪಘಾತ, ಕೇರಳದ ವ್ಯಕ್ತಿ ಸಾವು

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ : ಬೈಕ್‌ನ ಮುಂಭಾಗದಲ್ಲಿ ಅಕ್ಕಮೂಟೆ (Rice Bag) ಇಟ್ಟುಕೊಂಡು ಚಾಲನೆ ಮಾಡುವಾಗ ನಿಯಂತ್ರಣ ತಪ್ಪಿ ಗುಂಡಿಗೆ ಬಿದ್ದ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಶಿವಮೊಗ್ಗದ ಪಿಇಎಸ್‌ ಕಾಲೇಜು ಹಿಂಭಾಗ ಕಿಮ್ಮನೆ ಗಾಲ್ಫ್‌ ಕ್ಲಬ್‌ಗೆ ತೆರಳುವ ರಸ್ತೆಯಲ್ಲಿ ಘಟನೆ ಸಂಭವಿಸಿದೆ.

ಕೇರಳ ಮೂಲದ ಎರ್ನಾಕುಲಂನ ಜೋಬಿ ಪೌಲ್‌ (45) ಮೃತ ಬೈಕ್‌ ಸವಾರ. ಇಲ್ಲಿನ ಫಾರಂ ಒಂದರಲ್ಲಿ ಜೋಬಿ ಪೌಲ್‌ ಕೆಲಸ ಮಾಡುತ್ತಿದ್ದರು. ಸಾಗರ ರಸ್ತೆಯ ಅಂಗಡಿಯೊಂದರಲ್ಲಿ ಅಕ್ಕಿ ಮೂಟೆ (Rice Bag) ಖರೀದಿಸಿ, ಅದನ್ನು ಬೈಕಿನ ಮುಂಭಾಗದಲ್ಲಿ ಇರಿಸಿಕೊಂಡು ಫಾರಂಗೆ ಹಿಂತಿರುಗುತ್ತಿದ್ದರು. ಈ ಸಂದರ್ಭ ನಿಯಂತ್ರಣ ತಪ್ಪಿದ ಬೈಕ್‌ ಗುಂಡಿಗೆ ಬಿದ್ದಿದೆ ಎಂದು ಆರೋಪಿಸಲಾಗಿದೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

ಗುಂಡಿಗೆ ಬಿದ್ದ ಜೋಬಿ ಪೌಲ್‌ ತಲೆ ಸಿಮೆಂಟ್‌ ಕಂಬಕ್ಕೆ ಹೊಡೆದುಕೊಂಡಿದೆ. ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Web-Design

ಇದನ್ನೂ ಓದಿ » ಭದ್ರಾವತಿ MPM ಕುರಿತು ಬೆಂಗಳೂರಿನಲ್ಲಿ ಮಹತ್ವದ ಮೀಟಿಂಗ್‌, ಏನೇನು ಚರ್ಚೆಯಾಯ್ತು?

Leave a Comment