ಸೇತುವೆ ಬಳಿ ದಾಳಿ, ಕಾರು, ಬೈಕು ಸಹಿತ ನಾಲ್ವರು ಅರೆಸ್ಟ್‌, ಏನಿದು ಕೇಸ್‌?

ಶಿಕಾರಿಪುರ : ಸೇತುವೆ ಬಳಿ ಗಾಂಜಾ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ (RAID) ನಡೆಸಿದ ಸಿ.ಇ.ಎನ್‌ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. 70 ಸಾವಿರ ರೂ. ಮೌಲ್ಯದ 2 ಕೆ.ಜಿ 52 ಗ್ರಾಂ ಗಾಂಜಾ, ಕೃತ್ಯಕ್ಕೆ ಬಳಸಿದ ಒಂದು ಕಾರು ಮತ್ತು ಬೈಕ್‌ ವಶಕ್ಕೆ ಪಡೆದಿದ್ದಾರೆ.

ಶಿಕಾರಿಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯ ಕೆಸರಗಟ್ಟೆ ಮೀಸಲು ಅರಣ್ಯ ಪ್ರದೇಶದ ಸೇತುವೆ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಮಾಹಿತಿ ಲಭ್ಯವಾಗಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ದಾಳಿ ವೇಳೆ ಶಿಕಾರಿಪುರದ ಮಲ್ಲಾಪುರದ ಮೊಹಮ್ಮದ್‌ ಮುಸೇಬ್‌, ಹಜರತ್‌ ಉಸ್ಮಾನ್‌, ಶಿವಮೊಗ್ಗ ಅಣ್ಣಾನಗರದ ಸಲ್ಮಾನ್‌, ಶಿಕಾರಿಪುರ ಪಟ್ಟಣದ ಜಟ್ಪಟ್‌ ನಗರದ ಮೊಹಮ್ಮದ್‌ ಕೈಫ್‌ ಬಂಧಿತರು.

Four-arrest-with-car-and-bike-NDPS-Case-at-shikaripura

ಸಿ.ಇ.ಎನ್‌ ಠಾಣೆ ಡಿವೈಎಸ್‌ಪಿ ಕೃಷ್ಣಮೂರ್ತಿ.ಕೆ ನೇತೃತ್ವದ ತಂಡವು ಕಾರ್ಯಾಚರಣೆ ನಡೆಸಿದೆ ಎಂದ ಪೊಲೀಸ್‌ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

ಇದನ್ನೂ ಓದಿ » ಗೋದಾಮಿನ ಮೇಲೆ ಅಧಿಕಾರಿಗಳ ದಾಳಿ, ಅಡಿಕೆ ಮುಟ್ಟುಗೋಲು

ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : March 26, 2025 at 10:58 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಮಾರ್ಚ್ 26, 2025

Leave a Comment