ಗೋಪಿ ಸರ್ಕಲ್‌ನಲ್ಲಿ ಅಂಚೆ ಕಚೇರಿಗೆ ಮುತ್ತಿಗೆ, ಪೊಲೀಸರು, ಪ್ರತಿಭಟನಾಕಾರರ ಮಧ್ಯೆ ತಳ್ಳಾಟ, ಕಾರಣವೇನು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS
ಶಿವಮೊಗ್ಗ : ಕಾಂಗ್ರೆಸ್‌ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರ ವಿರುದ್ಧ ಕೇಂದ್ರ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ. ತನಿಖಾ ಸಂಸ್ಥೆಗಳನ್ನು (Agencies) ದುರ್ಬಳಕೆ ಮಾಡಿಕೊಂಡು ನ್ಯಾಷನಲ್‌ ಹೆರಾಲ್ಡ್‌ಗೆ ಸೇರಿದ ಆಸ್ತಿ ವಶಕ್ಕೆ ಪಡೆಯಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ ಎಂದು ಆರೋಪಿಸಿ ಯುವ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
➤ ಸುದ್ದಿಯ ಮುಂದಿನ 9 ಪ್ಯಾರಾಗಳು ಕೆಳಗಿವೆ.

ಗೋಪಿ ಸರ್ಕಲ್‌ನಲ್ಲಿರುವ ಪ್ರಧಾನ ಅಂಚೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್‌ ಕಾರ್ಯಕರ್ತರು ಅಂಚೆ ಕಚೇರಿಗೆ ಮುತ್ತಿಗೆ ಹಾಕಿದರು.

ತನಿಖಾ ಸಂಸ್ಥೆಗಳ ಜುಟ್ಟು ಹಿಡಿದುಕೊಂಡಿದೆ

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಆದಾಯ ತೆರಿಗೆ (ಐಟಿ), ಜಾರಿ ನಿರ್ದೇಶನಾಲಯ (ಇ.ಡಿ) ಸಂಸ್ಥೆಗಳನ್ನು (Agencies)  ಬಳಸಿಕೊಂಡು ಕಾಂಗ್ರೆಸ್‌ ಮತ್ತು ವಿರೋಧ ಪಕ್ಷಗಳ ಮುಖಂಡರ ಮೇಲೆ ದಾಳಿ ನಡೆಸಲಾಗುತ್ತಿದೆ. ತನಿಖಾ ಸಂಸ್ಥೆಗಳ ಜುಟ್ಟು ಹಿಡಿದುಕೊಂಡು ಷಡ್ಯಂತ್ರ ನಡೆಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಇ.ಡಿ ಮತ್ತು ಐ.ಟಿ ತನಿಖಾ ಸಂಸ್ಥೆಗಳನ್ನು ಕೇಂದ್ರ ಸರ್ಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಕೇಂದ್ರ ಸರ್ಕಾರದ ಅಧೀನದಲ್ಲಿರುವ ಅಂಚೆ ಕಚೇರಿಗೆ ಇವತ್ತು ಮುತ್ತಿಗೆ ಹಾಕಿದ್ದೇವೆ. ಚಾರ್ಜ್‌ಶೀಟ್‌ನಿಂದ ಸೋನಿಯಾ ಗಾಂಧಿ ಅವರ ಹೆಸರು ಕೈ ಬಿಡದೆ ಇದ್ದರೆ ಹೋರಾಟ ತೀವ್ರಗೊಳಿಸಲಾಗುತ್ತದೆ.

– ಹರ್ಷಿತ್‌ ಗೌಡ, ಯುವ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ

Youth-Congress-Protest-in-front-of-Shimoga-post-office

Youth-Congress-Protest-in-front-of-Shimoga-post-office

ಗೇಟ್‌ ದಾಟಿ ಒಳ ನುಗ್ಗಿದರು

ಮೊದಲು ಪ್ರಧಾನ ಅಂಚೆ ಕಚೇರಿ ಮುಂಭಾಗ ಯುವ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಬಳಿಕ ಅಂಚೆ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ಸಂದರ್ಭ ಪೊಲೀಸರು ಅಂಚೆ ಕಚೇರಿಯ ಗೇಟ್‌ ಬಂದ್‌ ಮಾಡಿದರು. ಆದರೆ ಯುವ ಕಾಂಗ್ರೆಸ್‌ ಕಾರ್ಯಕರ್ತರು ಗೇಟ್‌ ತಳ್ಳಿಕೊಂಡು ಆವರಣದೊಳಗೆ ನುಗ್ಗಿದರು. ಈ ಸಂದರ್ಭ ಪೊಲೀಸರು ಮತ್ತು ಯುವ ಕಾಂಗ್ರೆಸ್‌ ಕಾರ್ಯಕರ್ತರ ಮಧ್ಯೆ ತಳ್ಳಾಟವಾಯಿತು.

Youth-Congress-Protest-in-front-of-Shimoga-post-office

ಇದನ್ನೂ ಓದಿ » ಮೊಬೈಲ್‌ಗಾಗಿ ಕೈ ಕೈ ಮಿಲಾಯಿಸಿದ ಇಬ್ಬರು ಯುವಕರು, ದೂರು, ಪ್ರತಿದೂರು ದಾಖಲು

ಕೊನೆಗೆ ಪೊಲೀಸರು ಯುವ ಕಾಂಗ್ರೆಸ್‌ ಕಾರ್ಯಕರ್ತರನ್ನು ಪ್ರಧಾನ ಅಂಚೆ ಕಚೇರಿ ಆವರಣದಿಂದ ಹೊರಗೆ ಕಳುಹಿಸಿದರು. ಹಾಗಾಗಿ ಗೇಟ್‌ ಮುಂದೆಯೇ ಪ್ರತಿಭಟನೆ ಮುಂದುವರೆಯಿತು.

ಕಾಂಗ್ರೆಸ್‌ ಮುಖಂಡರಾದ ವಿಜಯ್‌ ಕುಮಾರ್‌, ಎನ್‌.ರಮೇಶ್‌, ಶಿವಕುಮಾರ್‌, ಯುವ ಕಾಂಗ್ರೆಸ್‌ನ ಪ್ರಮುಖರಾದ ಚರಣ್‌, ಪ್ರವೀಣ್‌, ಗಿರೀಶ್‌, ಮಧುಸೂದನ್‌, ಚೇತನ್‌ ಗೌಡ ಸೇರಿದಂತೆ ಹಲವರು ಇದ್ದರು.

Youth-Congress-Protest-in-front-of-Shimoga-post-office

Youth-Congress-Protest-in-front-of-Shimoga-post-office

Youth-Congress-Protest-in-front-of-Shimoga-post-office

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

Leave a Comment