ಶಿವಮೊಗ್ಗ ಲೈವ್
ಶಿಕಾರಿಪುರ : ಎರಡು ಕಾರುಗಳು ಮುಖಾಮುಖಿ ಡಿಕ್ಕಿಯಾಗಿ (Mishap) ಮಹಿಳೆ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಶಿಕಾರಿಪುರ – ಶಿರಾಳಕೊಪ್ಪ ರಸ್ತೆಯ ಕುಮದ್ವತಿ ನದಿ ಸೇತುವೆ ಮೇಲೆ ಇಂದು ಅಪಘಾತ ಸಂಭವಿಸಿದೆ.
ಚನ್ನಗಿರಿ ತಾಲೂಕು ಕಾಕನೂರು ಗ್ರಾಮದ ರೂಪ (40) ಮೃತರು. ಕಾರಿನಲ್ಲಿದ್ದ ರೂಪ ಅವರ ಪತಿ ಕಾಂತರಾಜ್, ಸಹೋದರಿ ರೇಖಾ ಗಂಭೀರ ಗಾಯಗೊಂಡಿದ್ದಾರೆ. ಮತ್ತೊಂದು ಕಾರಿನಲ್ಲಿದ್ದ ಕಾಳಿಯಪ್ಪನ್, ಸೋಮಶೇಖರ್, ಸುರೇಶ್ ಕುಮಾರ್ ಹಾಗೂ ಯಮುನಪ್ಪ ಎಂಬುವವರಿಗು ಗಾಯವಾಗಿದೆ. ಎಲ್ಲರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಈ ಸುದ್ದಿಯನ್ನೂ ಓದಿ
ಶಿವಮೊಗ್ಗದಲ್ಲಿ ತಾಯಿ, ಮಕ್ಕಳು ತುಂಗಾ ನದಿಗೆ ಜಿಗಿದ ಕೇಸ್ಗೆ ಟ್ವಿಸ್ಟ್, ಏನದು?
ಘಟನೆಯಲ್ಲಿ (Mishap) ಎರಡು ಕಾರುಗಳ ಮುಂಭಾಗ ನಜ್ಜುಗುಜ್ಜಾಗಿವೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.
ಈ ಸುದ್ದಿಯನ್ನೂ ಓದಿ
ಶಿವಮೊಗ್ಗದಲ್ಲಿ ತಾಯಿ, ಮಕ್ಕಳು ತುಂಗಾ ನದಿಗೆ ಜಿಗಿದ ಕೇಸ್ಗೆ ಟ್ವಿಸ್ಟ್, ಏನದು?

ಇದನ್ನೂ ಓದಿ » ಡಾಕ್ಟರ್ಗೆ ಆಸೆ ಮೂಡಿಸಿತು ಫೇಸ್ಬುಕ್ ಪೋಸ್ಟ್, ನಂಬಿ ಕ್ಲಿಕ್ ಮಾಡಿದ್ಮೇಲೆ ಕಾದಿತ್ತು ಬಿಗ್ ಶಾಕ್, ಕೋಟಿ ಕೋಟಿ ಮೋಸ
