ಶಿವಮೊಗ್ಗ ಲೈವ್
ಸಾಗರ : ಕಾಡು ಹಂದಿ ಬೇಟೆಯಾಡಿ (Hunters) ಮಾಂಸ ಹಂಚಿಕೊಳ್ಳುತ್ತಿದ್ದ ಮೂವರ ವಿರುದ್ಧ ಅರಣ್ಯ ಇಲಾಖೆ ಸಿಬ್ಬಂದಿ ಪ್ರಕರಣ ದಾಖಲಿಸಿದ್ದಾರೆ.
ತಾಲ್ಲೂಕಿನ ಬಾಳೆಗುಂಡಿ ಗ್ರಾಮದಲ್ಲಿ ಬೇಟೆಯಾಡಿದ್ದ ಕಾಡು ಹಂದಿ ಮಾಂಸವನ್ನು ಗ್ರಾಮದ ಕೆರೆ ದಂಡೆಯ ಮೇಲೆ ಹಂಚಿಕೊಳ್ಳುತ್ತಿದ್ದಾಗ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿದ್ದು ಮೂವರು ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.
ಈ ಸುದ್ದಿಯನ್ನೂ ಓದಿ
ಶಿವಮೊಗ್ಗದಲ್ಲಿ ಅದ್ಧೂರಿ ಈದ್ ಮೆರವಣಿಗೆ, ಹೇಗಿತ್ತು? ಏನೆಲ್ಲ ಇತ್ತು?
ಆರೋಪಿಗಳನ್ನು ಪ್ರಭಾಕರ್, ಗಣಪತಿ, ಅಣ್ಣಪ್ಪ ಎಂದು ಗುರುತಿಸಲಾಗಿದೆ. ಸ್ಥಳದಲ್ಲಿ ದೊರಕಿದ ನಾಲ್ಕೂವರೆ ಕೆ.ಜಿ. ಕಾಡು ಹಂದಿ ಮಾಂಸ ವಶಪಡಿಸಿಕೊಳ್ಳಲಾಗಿದೆ. ಉಪ ವಲಯ ಅರಣ್ಯಾಧಿಕಾರಿ ಕಿರಣ್, ವಲಯ ಅರಣ್ಯಾಧಿಕಾರಿ ಅಣ್ಣಪ್ಪ, ಸಿಬ್ಬಂದಿ ಸುರೇಶ್, ಬಸವರಾಜ್, ಸುನೀತಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಈ ಸುದ್ದಿಯನ್ನೂ ಓದಿ
ಕಾರ್ಗಲ್ ಪೊಲೀಸರ ಸಮಯ ಪ್ರಜ್ಞೆಯಿಂದ ಉಳಿಯಿತು ತುಮಕೂರು ಯುವತಿಯ ಪ್ರಾಣ, ಆಗಿದ್ದೇನು?
ಇದನ್ನೂ ಓದಿ » ತೀರ್ಥಹಳ್ಳಿಯಲ್ಲಿ ಚಲಿಸುತ್ತಿದ್ದ ಬೈಕ್ ಮೇಲೆ ಬಿದ್ದ ಮರ, ಸವಾರ ಆಸ್ಪತ್ರೆಗೆ
