ಶಿವಮೊಗ್ಗದಲ್ಲಿ ಅದ್ಧೂರಿ ಈದ್‌ ಮೆರವಣಿಗೆ, ಹೇಗಿತ್ತು? ಏನೆಲ್ಲ ಇತ್ತು?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ: ನಗರದಲ್ಲಿ ಈದ್‌ ಮಿಲಾದ್‌ ಹಬ್ಬದ ಅಂಗವಾಗಿ ಅದ್ಧೂರಿಯಾಗಿ ಮೆರವಣಿಗೆ ನಡೆಸಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಮರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಸುನ್ನಿ ಜಮೈತುಲ್ ಉಲೆಮಾ ಕಮಿಟಿ ನೇತೃತ್ವದಲ್ಲಿ ಗಾಂಧಿ ಬಜಾರ್‌ನ ಸುನ್ನಿ ಜಾಮಿಯಾ ಮಸೀದಿ ಮುಂಭಾಗದಿಂದ ಮೆರವಣಿಗೆ ಆರಂಭಿಸಲಾಯಿತು. ನಗರದ ಪ್ರಮುಖ ರಸ್ತೆಗಳ ಮೂಲಕ ಸಾಗಿದ ಮೆರವಣಿಗೆ ಅಂತಿಮವಾಗಿ ಅಮೀರ್‌ ಅಹಮದ್‌ ಸರ್ಕಲ್‌ನಲ್ಲಿ ಮುಕ್ತಾಯಗೊಂಡಿತು. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ಮೆರವಣಿಗೆಯಲ್ಲಿ ಟಿಪ್ಪು ಸುಲ್ತಾನ್‌ ವೇಷಭೂಷಣ ಧರಿಸಿ ಭಾಗವಹಿಸಿದ್ದ ಮಕ್ಕಳು ಎಲ್ಲರ ವಿಶೇಷ ಗಮನ ಸೆಳೆದರು. ಅಲ್ಲದೆ, ಟಿಪ್ಪು ಸುಲ್ತಾನ್‌ ಚಿತ್ರವಿರುವ ಬೃಹತ್‌ ಧ್ವಜಗಳು ಮೆರವಣಿಗೆಯ ರಾರಾಜಿಸಿದವು.

Eid-Milad-Procession-in-Shivamogga

ಕುಣಿದು ಕುಪ್ಪಳಿಸಿದ ಯುವಕರು

ಈದ್‌ ಮೆರವಣಿಗೆಯಲ್ಲಿ ವಿವಿಧ ಬಡಾವಣೆಗಳಿಂದ ಡಿಜೆ ಸೆಟ್‌ಗಳಿರುವ ವಾಹನಗಳನ್ನು ತರಿಸಲಾಗಿತ್ತು. ಪ್ರತಿ ಡಿಜೆ ಸೆಟ್‌ನ ಹಿಂಬದಿಯು ಆಯಾ ಬಡಾವಣೆಯ ಯುವಕರು ವಿವಿಧ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು. ಧ್ವಜಗಳನ್ನು ತಿರುಗಿಸುತ್ತ, ಘೋಷಣೆಗಳನ್ನು ಕೂಗುತ್ತ ಮೆರವಣಿಗೆಯಲ್ಲಿ ಸಾಗಿದರು.

ಬಿಗಿ ಪೊಲೀಸ್‌ ಬಂದೋಬಸ್ತ್‌

ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮೆರವಣಿಗೆಯ ಹಾದಿಯಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಕೈಗೊಳ್ಳಾಗಿತ್ತು. ಸಿವಿಲ್‌ ಪೊಲೀಸ್‌, ಸಶಸ್ತ್ರ ಮೀಸಲು ಪಡೆ, ಆರ್‌ಎಎಫ್‌, ಎಎಸ್‌ಎಫ್‌, ಕೆಎಸ್‌ಆರ್‌ಪಿ ಪೊಲೀಸರನ್ನು ಬಂದೋಬಸ್ತ್‌ಗೆ ನಿಯೋಜನೆ ಮಾಡಲಾಗಿತ್ತು.