ಶಿವಮೊಗ್ಗ : ಮಂಗನ ಕಾಯಿಲೆಯಿಂದ (KFD) ತೀರ್ಥಹಳ್ಳಿಯ ಬಾಲಕ ಸಾವು ಪ್ರಕರಣದ ತನಿಖೆ ನಡೆಸಿ ವರದಿ ನೀಡಬೇಕು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಜನಿವಾರ ವಿವಾದಕ್ಕೆ ಟ್ವಿಸ್ಟ್, ಅಧಿಕಾರಿ ವಿರುದ್ಧ ಕಂಪ್ಲೇಂಟ್, ಈತನಕ ಏನೇನಾಗಿದೆ? ಇಲ್ಲಿದೆ ಡಿಟೇಲ್ಸ್
ತೀರ್ಥಹಳ್ಳಿ ತಾಲೂಕು ಕೋಣಂದೂರು ಸಮೀಪದ ದತ್ತರಾಜಾಪುರ ಗ್ರಾಮದ ರಚಿತ್‌ಗೆ ಕೆಎಫ್‌ಡಿ ಸೋಂಕು ತಗುಲಿತ್ತು. ಗುರುವಾರ ರಾತ್ರಿ ಮಣಿಪಾಲದ ಆಸ್ಪತ್ರೆಯಲ್ಲಿ ರಚಿತ್ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾನೆ. ಈ ಪ್ರಕರಣ ಕುರಿತು ತನಿಖೆ ನಡೆಸಿ ವರದಿ ನೀಡಬೇಕು ಎಂದು ಸೂಚಿಸಿದ್ದಾರೆ.
ಇಲ್ಲಿದೆ ಪ್ರಕರಣದ ಪ್ರಮುಖಾಂಶ
- ಏ.4ರಂದು ತೀವ್ರ ಜ್ವರದ ಹಿನ್ನೆಲೆ ರಚಿತ್ ಸಹೋದರಿ ರಮ್ಯಾಳನ್ನು ತೀರ್ಥಹಳ್ಳಿಯ ಜೆ.ಸಿ.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಪರೀಕ್ಷಿಸಿದಾಗ ಕೆಎಫ್‌ಡಿ ಪಾಸಿಟಿವ್ ಬಂದಿತ್ತು.
- ಏ.5ರಂದು ರಚಿತ್‌ಗೆ ಸುಸ್ತು ಮತ್ತು ವಾಂತಿಯಾದ ಹಿನ್ನೆಲೆ ಆತನನ್ನು ಜೆ.ಸಿ.ಆಸ್ಪತ್ರೆಗೆ ದಾಖಲಿಸಿದಾಗ ಕೆ.ಎಪ್.ಡಿ ದೃಢವಾಗಿತ್ತು.
- ಏ.6ರಂದು ರಮ್ಯಾ ಮತ್ತು ರಚಿತ್‌ರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಯಿತು. ಎಬಿಎಆರ್‌ಕೆ ಯೋಜನೆ ಅಡಿ ಇಬ್ಬರಿಗು ಉಚಿತ ಚಿಕಿತ್ಸೆ ಕೊಡಿಸಲಾಗುತ್ತಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
- ಗುಣವಾದ ಹಿನ್ನೆಲೆ ರಮ್ಯಾಳನ್ನು ಡಿಸ್ಚಾರ್ಜ್ ಮಾಡಲಾಯಿತು. ಆಕೆ ಮನೆಗೆ ಮರಳಿದ್ದಳು. ಏ.17ರ ರಾತ್ರಿ ಚಿಕಿತ್ಸೆ ಫಲಿಸದೆ ರಚಿತ್ ಕೊನೆ ಉಸಿರೆಳೆದಿದ್ದಾನೆ.
- ಸಚಿವ ಮಧು ಬಂಗಾರಪ್ಪ, ಶಾಸಕ ಆರಗ ಜ್ಞಾನೇಂದ್ರ ಅವರು ರಚಿತ್ ಆರೋಗ್ಯದ ಕುರಿತು ವಿಚಾರಿಸಿದ್ದರು. ವೈದ್ಯರೊಂದಿಗು ಚರ್ಚೆ ನಡೆಸಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
- ಏ.18ರಂದು ರಚಿತ್ ಸಾವಿನ ಕುರಿತು ಸಮಗ್ರ ವರದಿ ನೀಡುವಂತೆ ಜಿಲಾಧಿಕಾರಿ ಗುರುದತ್ತ ಹೆಗಡೆ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇದನ್ನೂ ಓದಿ » ಓಮ್ನಿ ಕಾರು ಅಡ್ಡಗಟ್ಟಿ ಲಕ್ಷ ಲಕ್ಷದ ಗುಜರಿ ವಸ್ತು ದರೋಡೆ, ನಾಲ್ವರು ಅರೆಸ್ಟ್, ಏನಿದು ಕೇಸ್?

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್ ನಂಬರ್: 7411700200
