ಶಿವಮೊಗ್ಗದಲ್ಲಿ ದೀದಿ ಪ್ರತಿಕೃತಿಗೆ ಬೆಂಕಿ, ರಾಷ್ಟ್ರಪತಿ ಆಡಳಿತಕ್ಕೆ ಪಟ್ಟು, ಹಿಂದೂ ಸಂಘಟನೆಗಳ ಆಕ್ರೋಶ

ಶಿವಮೊಗ್ಗ : ವಕ್ಫ್‌ ಕಾಯಿದೆ ವಿರೋಧಿಸುವ ನೆಪದಲ್ಲಿ ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ (Hindu) ಮೇಲೆ ಹಿಂಸಾಚಾರ ನಡೆಯುತ್ತಿದೆ. ಆದ್ದರಿಂದ ಅಲ್ಲಿಗೆ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ವಿಶ್ವ ಹಿಂದು ಪರಿಷತ್‌ ಮತ್ತು ಬಜರಂಗದಳದಿಂದ ಪ್ರತಿಭಟನೆ ನಡೆಸಲಾಯಿತು.

ಇದನ್ನೂ ಓದಿ » ಶಿವಮೊಗ್ಗ ಬದಲು ಬೆಳಗಾವಿಯಲ್ಲಿ ಇಳಿದ ವಿಮಾನ, ಪ್ರಯಾಣಿಕರ ಪರದಾಟ, ಆಗಿದ್ದೇನು?

ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ವಿಹೆಚ್‌ಪಿ ಮತ್ತು ಬಜರಂಗದಳ ಕಾರ್ಯಕರ್ತರು, ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಪಶ್ಚಿಮ ಬಂಗಾಳದಲ್ಲಿ ವಕ್ಫ್‌ ಕಾಯಿದೆ ವಿರೋಧಿಸಿ ಪ್ರತಿಭಟನೆ ನೆಪದಲ್ಲಿ ಹಿಂದುಗಳ (Hindu) ಮೇಲೆ ವ್ಯವಸ್ಥಿತವಾಗಿ ದಾಳಿ ನಡೆಸಲಾಗುತ್ತಿದೆ. ಹಿಂದೂ ಮಹಿಳೆಯರ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ. ಪಶ್ಚಿಮ ಬಂಗಾಳದ ಮುರ್ಶಿದಾಬಾದ್‌ ಜಿಲ್ಲೆಯಲ್ಲಿ ಆರಂಭವಾದ ಹಿಂದೂಗಳ ಮೇಲಿನ ದೌರ್ಜನ್ಯ ಸುತ್ತಲಿನ ಜಿಲ್ಲೆಗಳಿಗು ವ್ಯಾಪಿಸುತ್ತಿದೆ. ಇದಕ್ಕೆ ಕೂಡಲೆ ಕಡಿವಾಣ ಹಾಕಬೇಕು. ರಾಷ್ಟ್ರಪತಿ ಆಡಳಿತ ಹೇರಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

Kalleshwara-Enterprises.webp

Bajarangadal-Protest-in-Shimoga-city.

ಮುರ್ಶಿದಾಬಾದ್ ಜಿಲ್ಲೆಯಿಂದ ಆರಂಭವಾದ ಹಿಂದುಗಳ ಮೇಲಿನ ಹಲ್ಲೆ, ಹಿಂದು ಹೆಣ್ಣುಮಕ್ಕಳ ದೌರ್ಜನ್ಯ ಸುತ್ತಲಿನ ಜಿಲ್ಲೆಗಳಿಗೂ ವ್ಯಾಪಿಸುತ್ತಿದೆ.

– ವಾಸುದೇವ್‌, ವಿಶ್ವ ಹಿಂದೂ ಪರಿಷತ್‌

Bajarangadal-Protest-in-Shimoga-city.

ಪ್ರತಿಭಟನೆಗು ಮುನ್ನ ಗೋಪಿ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರವರೆಗೆ ಮೆರವಣಿಗೆ ನಡೆಸಿದರು. ಮಹಾವೀರ ವೃತ್ತದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರತಿಕೃತಿ ದಹಿಸಲಾಯಿತು.

ಶಾಸಕ ಎಸ್.ಎನ್.ಚನ್ನಬಸಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಪ್ರಮುಖರಾದ ರಾಜೇಶ್ ಗೌಡ, ಮೋಹನ್ ರೆಡ್ಡಿ, ವಾಸುದೇವ್, ರಮೇಶ್ ಬಾಬು, ಕೆ.ಈ.ಕಾಂತೇಶ್, ಆನಂದ್ ರಾವ್, ಅಂಕುಶ್, ಸುರೇಖಾ ಮುರಳೀಧರ್, ರಶ್ಮಿ ಮತ್ತಿತರರಿದ್ದರು.

hindu organizations protest in Shimoga city

hindu organizations protest in Shimoga city

hindu organizations protest in Shimoga city

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment