ಉಗ್ರರ ದಾಳಿಗೆ ಮಗ ಬಲಿಯಾದ ವಿಚಾರ ತಾಯಿಗೆ ತಿಳಿದಿಲ್ಲ, ಹೇಗಿದೆ ಮಂಜುನಾಥ್‌ ಮನೆ ಬಳಿ ಪರಿಸ್ಥಿತಿ?

ಶಿವಮೊಗ್ಗ : ಕಾಶ್ಮೀರದ ಪಹಾಲ್ಗಾಮ್‌ನಲ್ಲಿ ಉಗ್ರರ ದಾಳಿಗೆ ಶಿವಮೊಗ್ಗದ ರಿಯಲ್‌ ಎಸ್ಟೇಟ್‌ ಉದ್ಯಮಿ ಮಂಜುನಾಥ್‌ ರಾವ್‌ ಸಾವನ್ನಪ್ಪಿದ್ದಾರೆ. ಘಟನೆ ಮಾಹಿತಿ ತಿಳಿಯುತ್ತಿದ್ದಂತೆ ಮಂಜನಾಥ್‌ ಮನೆ (House) ಬಳಿ ನೀರವ ಮೌನ ಆವರಿಸಿದೆ.

ಇದನ್ನೂ ಓದಿ » ಕಾಶ್ಮೀರದಲ್ಲಿ ಶಿವಮೊಗ್ಗದ ರಿಯಲ್‌ ಎಸ್ಟೇಟ್‌ ಉದ್ಯಮಿ ಹತ್ಯೆ, ಪತ್ನಿ ಹೇಳಿದ್ದೇನು? ಇಲ್ಲಿದೆ ಪಾಯಿಂಟ್ಸ್‌

ಶಿವಮೊಗ್ಗದ ನೇತಾಜಿ ವೃತ್ತದ ಬಳಿ ವಿಜಯನಗರ ಬಡಾವಣೆಯ 3ನೇ ಅಡ್ಡರಸ್ತೆಯ ಮಂಜುಶ್ರೀ ನಿಲಯದಲ್ಲಿ (House) ಮಂಜುನಾಥ್‌ ಅವರ ಕುಟಂಬ ವಾಸವಿದೆ.

ತಾಯಿಗೆ ವಿಷಯ ತಿಳಿದಿಲ್ಲ

ಮಂಜುನಾಥ್‌ ರಾವ್‌ ತಮ್ಮ ಪತ್ನಿ ಪಲ್ಲವಿ ಮತ್ತು ಮಗನ ಜೊತೆಗೆ ಕಾಶ್ಮೀರಕ್ಕೆ ತೆರಳಿದ್ದರು. ಅವರ ತಾಯಿ ಮನಲ್ಲೆ ಇದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆ ಹಿನ್ನೆಲೆ ಮತ್ತು ಆಘಾತಕ್ಕೆ ಒಳಗಾಗಬಹುದು ಎಂಬ ಕಾರಣಕ್ಕೆ ಮಂಜುನಾಥ್‌ ಮೃತರಾದ ವಿಷಯವನ್ನು ಅವರಿಗೆ ತಿಳಿಸಿಲ್ಲ.

Kalleshwara-Enterprises.webp

ಮಂಜುನಾಥ್‌ ಅವರ ತಾಯಿ ನನಗೆ ದೊಡ್ಡಮ್ಮ. ಅವರಿಗೆ ವಿಷಯ ತಿಳಿಸಿಲ್ಲ. ಕಾಶ್ಮೀರದಲ್ಲಿ ದಾಳಿಯಾಗಿದೆ, ಗಾಯವಾಗಿದೆ ಎಂದಷ್ಟೆ ಹೇಳಿದ್ದೇವೆ. ಕಾಶ್ಮೀರದಲ್ಲಿ ಏನಾಗುತ್ತಿದೆ ಅನ್ನವುದು ಸಂಪರ್ಣ ಮಾಹಿತಿ ನಮಗು ಲಭಿಸಿಲ್ಲ.

– ದೀಪಾ, ಮಂಜುನಾಥ್‌ ಸಂಬಂಧಿ

Manjunath-house-at-vijaynagara-in-Shimoga

Manjunath-house-at-vijaynagara-in-Shimoga

ಸಂಬಂಧಿಗಳು, ಸ್ನೇಹಿತರ ಭೇಟಿ

ಮಂಜುನಾಥ್‌ ರಾವ್‌ ಹತ್ಯೆ ವಿಚಾರ ತಿಳಿದು ಕುಟುಂಬದವರು, ಸ್ನೇಹಿತರು ವಿಜಯನಗರ ಮನೆಗೆ ಭೇಟಿ ನೀಡುತ್ತಿದ್ದಾರೆ. ಕಾಶ್ಮೀರದಲ್ಲಿ ಪಲ್ಲವಿ ಅವರನ್ನು ಸಂಪರ್ಕಿಸಲು ಎಲ್ಲರು ಪ್ರಯತ್ನಿಸುತ್ತಿದ್ದಾರೆ. ಆದರೆ ಮೊಬೈಲ್‌ ಚಾರ್ಜ್‌ ಇಲ್ಲದ್ದರಿಂದ ಪಲ್ಲವಿ ಅವರ ಸಂಪರ್ಕ ಕಷ್ಟವಾಗಿದೆ.

ಇದೇ ಮೊದಲ ಬಾರಿ ಮಂಜುನಾಥ್‌ ಅವರ ಕುಟುಂಬ ಕಾಶ್ಮೀರಕ್ಕೆ ತೆರಳಿತ್ತು. ಬೆಳಗ್ಗೆ ಅವರ ಫೋಟೊಗಳನ್ನು ನೋಡಿದ್ದೆ. ಆದರೆ ಸಂಜೆ ವೇಳೆಗೆ ಹೀಗೆ ಅಗಿದೆ. ನಮ್ಮ ಕುಟುಂಬದವರು ನಿರಂತರವಾಗಿ ಸಂಪರ್ಕದಲ್ಲಿದ್ದಾರೆ.

– ಡಾ.ರವಿಕಿರಣ್‌, ಸಂಬಂಧಿ

pahalgam-attack-shimoga-manjunath-rao-dies-in-the-incident

ರಿಯಲ್‌ ಎಸ್ಟೇಟ್‌ ಉದ್ಯಮಿ ಮಂಜುನಾಥ್‌ ಅವರ ಮನೆ ಬಳಿ ಸಂಸದ ರಾಘವೇಂದ್ರ, ಶಾಸಕ ಎಸ್‌.ಎನ್.ಚನ್ನಬಸಪ್ಪ, ಮಾಜಿ ಶಾಸಕ ಪ್ರಸನ್ನ ಕುಮಾರ್‌ ಸೇರಿದಂತೆ ಹಲವರು ಭೇಟಿ ನೀಡಿದರು. ಕುಟುಂಬದವರ ಜೊತೆಗೆ ಚರ್ಚೆ ನಡೆಸಿದರು.

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್‌ ನಂಬರ್: 7411700200
Kalleshwara-Enterprises.webp

Leave a Comment