ಶಿವಮೊಗ್ಗ ಲೈವ್
ಶಿವಮೊಗ್ಗ : ಕಾಂಗ್ರೆಸ್ ಮುಖಂಡ ಆರ್.ವಿಜಯಕುಮಾರ್ (ದನಿ) ಶಿವಮೊಗ್ಗ ಹಾಪ್ ಕಾಮ್ಸ್‌ನ ನೂತನ ಅಧ್ಯಕ್ಷರಾಗಿ (President) ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಾಪ್‌ಕಾಮ್ಸ್‌ನ ಅಧ್ಯಕ್ಷ ಸ್ಥಾನಕ್ಕೆ ಬುಧವಾರ ಚುನಾವಣೆ ನಿಗದಿಯಾಗಿತ್ತು. (ಈ ಸುದ್ದಿಯನ್ನು ಇನ್ನು 31 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)
ಇದನ್ನೂ ಓದಿ » ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರ ನೂತನ ಕಚೇರಿ ಆರಂಭ, ಎಲ್ಲಿದೆ ಹೊಸ ಆಫೀಸ್?
ವಿಜಯಕುಮಾರ್ ಹೊರತಾಗಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವರ ಅವಿರೋಧ ಆಯ್ಕೆಯನ್ನು ಘೋಷಣೆ ಮಾಡಲಾಯಿತು. ಹಾಪ್‌ಕಾಮ್ಸ್‌ನ 16 ನಿರ್ದೇಶಕರ ಪೈಕಿ ಮೂವರು ಗೈರಾಗಿದ್ದರು.
ನೀವು ಲೇಖನದ ಮಧ್ಯಭಾಗದಲ್ಲಿದ್ದೀರಿ. ಈ ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ
ನಿರ್ದೇಶಕರಾದ ಕೆ.ಜೆ.ನಾಗೇಶ್ ನಾಯ್ಡ್, ಡಿ.ಸಿ ನಿರಂಜನ್, ಮೋಹನ್ ಉಂಬೈಬೈಲ್, ಬಿ.ಡಿ. ಭೂಕಾಂತ್, ಟಿ.ಮುನಿಸ್ವಾಮಿ ಮುಂತಾದವರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು.


