ಮಾಜಿ ಸೈನಿಕರೆ ಎಚ್ಚರ, ಸೈನಿಕ ಕಲ್ಯಾಣ, ಪುನರ್ವಸತಿ ಇಲಾಖೆಯಿಂದ ಪ್ರಕಟಣೆ, ಏನದು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ : ಇತ್ತೀಚಿನ ದಿನಗಳಲ್ಲಿ ಮಾಜಿ ಸೈನಿಕರು ಮತ್ತು ಅವರ ಅವಲಂಬಿತರಿಗೆ ಕೆಲ ಖಾಸಗಿ ವ್ಯಕ್ತಿಗಳು ಮತ್ತು ಕೆಲ ಸಂಘ-ಸಂಸ್ಥೆಗಳು ಆಮಿಷಗಳನ್ನೊಡ್ಡುತ್ತಿವೆ. ನಮ್ಮ ಸಂಘಕ್ಕೆ ನೋಂದಣಿಯಾದರೆ ನಿಮ್ಮ ಎಲ್ಲ ಕುಂದುಕೊರತೆಗಳನ್ನು ಬಗೆಹರಿಸುವುದಾಗಿ ಪೊಳ್ಳು ಭರವಸೆ ನೀಡುತ್ತಿವೆ. ಇಂತಹ ವ್ಯಕ್ತಿಗಳು ಹಾಗೂ ಸಂಘಟನೆಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕ ಡಾ. ಸಿ.ಎ.ಹಿರೇಮಠ ಎಚ್ಚರಿಸಿದ್ದಾರೆ (Warns).

ಇದನ್ನೂ ಓದಿ » ಶಿವಮೊಗ್ಗದಲ್ಲಿ ಸಿಡಿದೆದ್ದ ಜನ, ಪೆಹಾಲ್ಗಾಮ್‌ ಹಂತಕರ ವಿರುದ್ಧ ಆಕ್ರೋಶ, ಕ್ಯಾಂಡಲ್‌ ಬೆಳಗಿ ಶ್ರದ್ಧಾಂಜಲಿ

ಜಮೀನು ಮಂಜೂರು ಮಾಡಿಸುತ್ತೇವೆ ಎಂದು ನಂಬಿಸಿ ಚೀಟಿ ಮತ್ತು ಫೈನಾನ್ಸ್ ಗಳಲ್ಲಿ ಹಣ ಹೂಡುವಂತೆ ಒತ್ತಡ ಹೇರುವ ಪ್ರವೃತ್ತಿ ಹೆಚ್ಚುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯೂಟ್ಯೂಬ್, ಫೇಸ್‌ಬುಕ್ ಮತ್ತಿತರ ಸಾಮಾಜಿಕ ಜಾಲತಾಣದಲ್ಲಿ ನಿವೃತ್ತ ಸೈನಿಕರು ಹಾಗೂ ಅವರ ಕುಟುಂಬದವರನ್ನು ವಂಚಿಸುವ ಪ್ರಯತ್ನ ನಡೆಸಲಾಗುತ್ತಿದೆ. ಏನಾದರೂ ಅನುಮಾನಗಳಿದ್ದಲ್ಲಿ ಕಚೇರಿ ಸಂಪರ್ಕಿಸಬಹುದು ಎಂದು ಹಿರೇಮಠ ತಿಳಿಸಿದ್ದಾರೆ.

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment