NEWS HIGHLIGHTS
ಶಿವಮೊಗ್ಗ : ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ ಉದ್ಯಮಿ ಮಂಜುನಾಥ ರಾವ್ ಪಾರ್ಥೀವ ಶರೀರದ ಅಂತಿಮ ಯಾತ್ರೆ ಇಂದು ನಡೆಯಿತು. ಮಧ್ಯಾಹ್ನದ ವೇಳೆಗೆ ವಿಜಯನಗರದ ಮನೆಯಿಂದ ಆರಂಭವಾದ ಮೆರವಣಿಗೆ (Procession) ರೋಟರಿ ಚಿತಾಗಾರದವರೆಗೆ ನಡೆಯಿತು.
➤ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.ಇದನ್ನೂ ಓದಿ » ಕಾಶ್ಮೀರ ದಾಳಿ, ಶಿವಮೊಗ್ಗದಲ್ಲಿ ಮಂಜುನಾಥ ರಾವ್ ಅಂತಿಮ ದರ್ಶನ, ಯಾರೆಲ್ಲ ಭೇಟಿ ನೀಡಿದ್ದರು? ಇಲ್ಲಿವೆ ಫೋಟೊಗಳು
ಮಧ್ಯಾಹ್ನ 12.40ರ ಹೊತ್ತಿಗೆ ವಿಜಯನಗರ ಮನೆ ಮುಂಭಾಗದಿಂದ ಮಂಜುನಾಥ ರಾವ್ ಪಾರ್ಥೀವ ಶರೀರದ ಅಂತಿಮ ಯಾತ್ರೆ ಆರಂಭವಾಯಿತು. ತೆರೆದ ವಾಹನದಲ್ಲಿ ಪಾರ್ಥೀವ ಶರೀರವನ್ನು ಇರಿಸಿ ಮೆರವಣಿಗೆ (Procession) ನಡೆಸಲಾಯಿತು.
ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ
ವಿಜಯನಗರದಿಂದ ಆಯನೂರು ಗೇಟ್ ಸರ್ಕಲ್, ಐ.ಬಿ.ಸರ್ಕಲ್, ಕುವೆಂಪು ರಸ್ತೆ, ಜೈಲ್ ಸರ್ಕಲ್, ದುರ್ಗಿಗುಡಿ ಮುಖ್ಯರಸ್ತೆ, ಗೋಪಿ ವೃತ್ತ, ನೆಹರು ರಸ್ತೆ ಮೂಲಕ ಬಿ.ಹೆಚ್.ರಸ್ತೆ, ಶಂಕರಮಠ ಸರ್ಕಲ್‌ನಿಂದ ರೋಟರಿ ಚಿತಾಗಾರಕ್ಕೆ ಪಾರ್ಥೀವ ಶರೀರ ತಲುಪಿತು.
ಸಾರ್ವಜನಿಕರಿಂದ ಅಂತಿಮ ದರ್ಶನ
ಪಾರ್ಥೀವ ಶರೀರದ ಮೆರವಣಿಗೆ ಸಾಗಿದ ಮಾರ್ಗದುದ್ದಕ್ಕು ಜನರು ರಸ್ತೆಯ ಇಕ್ಕೆಲದಲ್ಲಿ ನಿಂತು ಅಂತಿಮ ದರ್ಶನ ಪಡೆದರು. ಹೂವು, ಹಾರ ಅರ್ಪಿಸಿ ನಮನ ಸಲ್ಲಿಸಿದರು. ಇನ್ನು, ಮಾರ್ಗದುದ್ದಕ್ಕು ಮಂಜುನಾಥ್ ರಾವ್ ಪರವಾಗಿ, ಪಾಕಿಸ್ತಾನ ಮತ್ತು ಉಗ್ರಗಾಮಿಗಳ ವಿರುದ್ಧ ಘೋಷಣೆ ಕೂಗಲಾಯಿತು.














