ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಜಿಲ್ಲೆಯ ವಿವಿಧೆಡೆ ಕಳೆದ ಎರಡು ದಿನದಿಂದ ಗುಡುಗು, ಭಾರಿ ಗಾಳಿ ಸಹಿತ ಮಳೆಯಾಗಿದೆ. ಜೋರು ಮಳೆಯಿಂದಾಗಿ (rainfall) ವಿವಿಧೆಡೆ ಆಸ್ತಿಪಾಸ್ತಿ ಹಾನಿಯಾಗಿದ ವರದಿಯಾಗಿದೆ.
ಭಾನುವಾರ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ಜೋರು ಮಳೆಯಾಗಿದೆ. ಭಾನುವಾರ ಸಂಜೆ ವೇಳೆಗೆ ಶಿವಮೊಗ್ಗ ನಗರದಲ್ಲಿ ದಟ್ಟ ಮೋಡ ಕವಿದು, ಮಳೆಯಾಯಿತು. ಅಲ್ಲಲ್ಲಿ ಜೋರು ಮಳೆಯಾಗಿದೆ. ಇದರಿಂದ ಚರಂಡಿಗಳು ಭರ್ತಿಯಾಗಿ ರಸ್ತೆ ಮೇಲೆ ನೀರು ನಿಂತಿತ್ತು. ಜಿಲ್ಲೆಯಲ್ಲಿಯು ವ್ಯಾಪಕ ಮಳೆಯಾಗಿದೆ.
ಧರೆಗುರುಳಿದ ಮರಗಳು, ಹಾರಿದ ಛಾವಣಿ
ಸಾಗರ ತಾಲೂಕಿನ ಮಾಸೂರಿನಲ್ಲಿ ಶನಿವಾರ ಸುರಿದ ಜೋರು ಗಾಳಿ, ಮಳೆಯಿಂದಾಗಿ ಮರಗಳು ಧರೆಗುರುಳಿವೆ. ಮನೆಯ ಚಾವಣಿ ಹಾರಿ ಹೋಗಿದೆ. ಮಾಸೂರು ಪೇಟೆಯ ಉಮೇಶ್ ಅವರ ಮನೆಯ ಚಾವಣಿ ಗಾಳಿಗೆ ಹಾರಿ ಹೋಗಿದೆ. ಅನೇಕ ಮನೆಗಳ ಮೇಲೆ ಮರ ಬಿದ್ದು ದೊಡ್ಡ ಅವಾಂತರ ಸೃಷ್ಟಿಯಾಗಿದೆ. ಮನೆಯೊಳಗೆ ಇದ್ದ ದಿನಬಳಕೆ ವಸ್ತುಗಳು ಹಾನಿಗೀಡಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಭಾನುವಾರ ಎಲ್ಲೆಲ್ಲಿ ಎಷ್ಟಾಗಿದೆ ಮಳೆ?
ಏಪ್ರಿಲ್ 27ರ ಬೆಳಗ್ಗೆ 8.30ರಿಂದ ಏ.28ರ ಬೆಳಗ್ಗೆ 8.30ರವರೆಗೆ ಶಿವಮೊಗ್ಗ ಜಿಲ್ಲೆಯ ವಿವಿಧೆಡೆ ವ್ಯಾಪಕ ಮಳೆಯಾಗಿದೆ (rainfall). ವಿವಿಧ ಮಳೆ ಮಾಪನ ಕೇಂದ್ರದಗಳಲ್ಲಿ ದಾಖಲಾದ ಮಳೆ ವಿವರ ಇಲ್ಲಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಸರಾಸರಿ 6.5 ಮಿ.ಮೀ ಮಳೆಯಾಗಿದೆ. ಭದ್ರಾವತಿ ತಾಲೂಕಿನಲ್ಲಿ 5.1 ಮಿ.ಮೀ, ಹೊಸನಗರದಲ್ಲಿ 8.2 ಮಿ.ಮೀ, ಸಾಗರದಲ್ಲಿ 9.2 ಮಿ.ಮೀ, ಶಿಕಾರಿಪುರದಲ್ಲಿ 9.4 ಮಿ.ಮೀ, ಶಿವಮೊಗ್ಗದಲ್ಲಿ 2.7 ಮಿ.ಮೀ, ಸೊರಬದಲ್ಲಿ 4.7 ಮಿ.ಮೀ, ತೀರ್ಥಹಳ್ಳಿಯಲ್ಲಿ 3.9 ಮಿ.ಮೀ ಮಳೆಯಾಗಿದೆ.
ಇದನ್ನೂ ಓದಿ » ಆಯನೂರಿನಲ್ಲಿ ಪತ್ರಿಕೆ ಹಂಚುವ ಹುಡುಗನ ಸಮಯ ಪ್ರಜ್ಞೆಗೆ ತಪ್ಪಿತು ದೊಡ್ಡ ಅನಾಹುತ, ಆಗಿದ್ದೇನು?
ಸೊರಬ ತಾಲೂಕು ಇಂಡುವಳ್ಳಿಯಲ್ಲಿ 44.5 ಮಿ.ಮೀ, ಶಿಕಾರಿಪುರದ ಮುಡುಬಸಿದ್ದಾಪುರದಲ್ಲಿ 41 ಮಿ.ಮೀ, ತೀರ್ಥಹಳ್ಳಿಯ ದೇಮ್ಲಾಪುರದಲ್ಲಿ 31 ಮಿ.ಮೀ, ಸಾಗರದ ತ್ಯಾಗರ್ತಿಯಲ್ಲಿ 28.5 ಮಿ.ಮೀ, ಭದ್ರಾವತಿಯ ಗುಡುಮಘಟ್ಟದಲ್ಲಿ 26.5 ಮಿ.ಮೀ, ಶಿಕಾರಿಪುರದ ಅಂಬಾರಗೊಪ್ಪದಲ್ಲಿ 26 ಮಿ.ಮೀ, ತೀರ್ಥಹಳ್ಳಿಯ ಹಾದಿಗಲ್ಲಿನಲ್ಲಿ 23 ಮಿ.ಮೀ, ಶಿಕಾರಿಪುರದ ಇನಾಂ ಅಗ್ರಹಾರ ಮುಚುಡಿಯಲ್ಲಿ 22 ಮಿ.ಮೀ, ಹಿರೇಜಂಬೂರಿನಲ್ಲಿ 22 ಮಿ.ಮೀ, ಸೊರಬದ ಶಿಗ್ಗಾದಲ್ಲಿ 21.5 ಮಿ.ಮೀ ಮಳೆಯಾಗಿದೆ.
ಇದನ್ನೂ ಓದಿ » ಜೋಗ ಪ್ರವಾಸಿಗರಿಗೆ ಗುಡ್ ನ್ಯೂಸ್, ಸಾರ್ವಜನಿಕ ಪ್ರವೇಶಕ್ಕೆ ಅವಕಾಶ, ಯಾವಾಗ ಶುರು?
ಹೊಸನಗರದ ಸೋನಲೆಯಲ್ಲಿ 20.5 ಮಿ.ಮೀ, ಶಿಕಾರಿಪುರದ ಗಾಮಾದಲ್ಲಿ 20.5 ಮಿ.ಮೀ, ಹರಿಗಿಯಲ್ಲಿ 20 ಮಿ.ಮೀ, ಜಕ್ಕನಹಳ್ಳಿಯಲ್ಲಿ 18 ಮಿ.ಮೀ ಮಳೆಯಾಗಿದೆ ಎಂದು ಕಂದಾಯ ಇಲಾಖೆಯ ವರದಿಯಲ್ಲಿ ತಿಳಿಸಲಾಗಿದೆ.
ರಾಜ್ಯದ ವಿವಿಧೆಡೆ ಇವತ್ತು ಕೂಡ ಗುಡುಗು ಸಹಿತ ಜೋರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

LATEST NEWS
- ಬೆಟ್ಟೆ, ರಾಶಿ ರೇಟ್ ಇವತ್ತು ಎಷ್ಟಿದೆ? ಸರಕು ದರ ಮತ್ತೆ ಹೆಚ್ಚಾಯ್ತಾ? – 3 ಮಾರ್ಚ್ 2026

- ಶಿವಮೊಗ್ಗದಲ್ಲಿ ರಂಗ ಹಬ್ಬ, ನಾಲ್ಕು ದಿನ ನಾಟಕೋತ್ಸವ, ಯಾವ್ಯಾವ ದಿನ ಯಾವ ನಾಟಕವಿದೆ?

- ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ವ್ಯಕ್ತಿಗೆ ಬಿಸಿ ಮುಟ್ಟಿಸಿದ ಅಕ್ಕ ಪಡೆ, ಆಗಿದ್ದೇನು?

- ದುರ್ಗಿಗುಡಿಯಲ್ಲಿ ವೈಭವದ ರಥೋತ್ಸವ, ಈ ಬಾರಿ ಉತ್ಸವ ಬೆಳಗ್ಗೆ ನಡೆದಿದ್ದೇಕೆ?

- ₹1,00,000 ಲಂಚದ ಹಣದೊಂದಿಗೆ ಲೋಕಾಯುಕ್ತರಿಗೆ ಸಿಕ್ಕಿಬಿದ್ದ ಅಧಿಕಾರಿ, ಮಧ್ಯವರ್ತಿ

About The Editor
ನಿತಿನ್ ಆರ್.ಕೈದೊಟ್ಲು






