ಭದ್ರಾವತಿ: ತಾಲ್ಲೂಕಿನ ಕೂಡ್ಲಿಗೆರೆ ಗ್ರಾಮಕ್ಕೆ ಸಮೀಪದಲ್ಲಿರುವ, ಎಪಿಎಂಸಿ ಮಾಜಿ ಸದಸ್ಯೆ ಟಿ.ವಿ ಸುಜಾತಾ ಅವರ ತೋಟದ ಮನೆಯಲ್ಲಿ ಚಿರತೆಯೊಂದು (Leopard) ಪ್ರತ್ಯಕ್ಷವಾಗಿರುವ ದೃಶ್ಯ ಸಿ.ಸಿ.ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ » ಕಾಶ್ಮೀರ ದಾಳಿ, ಸಾಂತ್ವನ ಹೇಳಲು ತಿಪಟೂರಿನಿಂದ ಶಿವಮೊಗ್ಗಕ್ಕೆ ಬಂದ 103 ವರ್ಷದ ವೃದ್ಧೆ
ರಾತ್ರಿ 9.30ರ ಸಮಯದಲ್ಲಿ ಸಾಕುನಾಯಿಗಳು ಬೊಗಳಿವೆ. ಆಗ ಕಿಟಕಿಯಿಂದ ನೋಡಿದಾಗ, ಮನೆಯ ಜಗಲಿಯ ಮೇಲಿಂದ ಚಿರತೆ ಹಾದು ಹೋಗಿದೆ. ಇದನ್ನು ಕಂಡು ಮನೆಯವರು ಭಯಭೀತರಾಗಿದ್ದಾರೆ. ಸಿ.ಸಿ.ಟಿ.ವಿ ಕ್ಯಾಮೆರಾ ಪರಿಶೀಲಿಸಿದಾಗ ಚಿರತೆಯು ನಾಯಿಗಳ ಬೇಟೆಗೆ ಮೂರ್ನಾಲ್ಕು ಬಾರಿ ಮನೆ ಸುತ್ತ ಓಡಾಡಿರುವ ದೃಶ್ಯ ಕಂಡು ಬಂದಿದೆ.
ಏಪ್ರಿಲ್ 15ರಂದೂ ಅದು ಬಂದು ಹೋಗಿದ್ದು, ಎರಡು ನಾಯಿಗಳು ಮತ್ತು ಒಂದು ಬೆಕ್ಕು ನಾಪತ್ತೆಯಾಗಿವೆ. ನಾಯಿಯೊಂದನ್ನು ಹೊತ್ತೊಯ್ಯುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.



ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ. ವಾಟ್ಸಪ್ ನಂಬರ್: 7411700200
