ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್ಗೆ ಪ್ರವೇಶಾತಿ ಆರಂಭ
ಶಿವಮೊಗ್ಗ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರ ಗುಂಡಿಗೆ ಬಲಿಯಾದ ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ ರಾವ್ ನಿವಾಸಕ್ಕೆ ತುಮಕೂರು ಜಿಲ್ಲೆ ತಿಪಟೂರಿನ 103 ವರ್ಷದ ವೃದ್ಧೆ (Lady) ಶಿವಮ್ಮ, ಕುಟುಂಬದವರಿಗೆ ಸಾಂತ್ವನ ಹೇಳಿದರು.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಬೆಳಗಿವ ಜಾವ ಬಸ್ ಹತ್ತಿದ ಮಹಿಳೆ, ಸ್ವಲ್ಪ ದೂರ ಹೋದ್ಮೇಲೆ ಕಾದಿತ್ತು ಆಘಾತ
ಕಾಶ್ಮೀರದಲ್ಲಿ ಭಯೋತ್ಪಾದಕರು ನಡೆಸಿದ ಕೃತ್ಯದ ಬಗ್ಗೆ ಹಾಗೂ ಮಂಜುನಾಥ ರಾವ್ ಅವರ ಸಾವಿನ ಬಗ್ಗೆ ಟಿ.ವಿಯಲ್ಲಿ ನೋಡಿ ತಿಳಿದಿದ್ದೆ. ದೇಶದ ಸೈನಿಕರಿಗೆ ಬಲ ತುಂಬುವುದು, ಮೃತರ ಕುಟುಂಬಕ್ಕೆ ಸಾಂತ್ವನ ಹೇಳುವ ಉದ್ದೇಶದಿಂದ ಇಲ್ಲಿಗೆ ಬಂದಿರುವೆ ಎಂದು ಶಿವಮ್ಮ ಮಾಧ್ಯಮದವರಿಗೆ ತಿಳಿಸಿದರು.
ಪಾಕಿಸ್ತಾನಕ್ಕೆ ತಕ್ಕ ಉತ್ತರ ಕೊಡಬೇಕು. ನಮ್ಮ ಸೈನಿಕರಿಗೆ ಮಾದೇಶ್ವರ ಹಾಗೂ ಮಂಜುನಾಥ ಸ್ವಾಮಿ ಶಕ್ತಿ ನೀಡಲಿ ಎಂದು ಶಿವಮ್ಮ ಆಶಿಸಿದರು. ವೃದ್ಧೆ ಪುತ್ರನೊಂದಿಗೆ ಬಸ್‌ನಲ್ಲಿ ಶಿವಮೊಗ್ಗಕ್ಕೆ ಬಂದಿದ್ದರು.








