ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ: ಫೇಸ್‌ಬುಕ್‌ನಲ್ಲಿ ಯುವತಿಯೊಬ್ಬಳ ಫ್ರೆಂಡ್ (friend) ರಿಕ್ವೆಸ್ಟ್ ಒಪ್ಪಿಕೊಂಡು ಶಿವಮೊಗ್ಗದ ಉದ್ಯಮಿಯೊಬ್ಬರು 14.48 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ.
ಫೇಸ್‌ಬುಕ್‌ನಲ್ಲಿ ಅಂಜಲಿ ಶರ್ಮಾ ಎಂಬ ಹೆಸರಿನಲ್ಲಿ ಫ್ರೆಂಡ್ (friend) ರಿಕ್ವೆಸ್ಟ್ ಬಂದಿತ್ತು. ಅದಕ್ಕೆ ಶಿವಮೊಗ್ಗದ ಉದ್ಯಮಿ ಒಪ್ಪಿಗೆ ನೀಡಿದ್ದರು. ಆಕೆ ಉದ್ಯಮಿಗೆ ಮೆಸೇಜ್ ಮಾಡಿ, ಮುಂಬೈನಲ್ಲಿ ತಮ್ಮದು ಚಿನ್ನದ ಉದ್ಯಮವಿದೆ. ಹೂಡಿಕೆ ಮಾಡಿ ಅಧಿಕ ಲಾಭ ಗಳಿಸಬಹುದು ಎಂದು ತಿಳಿಸಿದ್ದಳು. ಅಲ್ಲದೆ ವಾಟ್ಸಪ್‌ನಲ್ಲಿ ಲಿಂಕ್ ಕೂಡ ರವಾನಿಸಿದ್ದಳು.
ಲಕ್ಷ ಲಕ್ಷ ರೂ. ಹೂಡಿಕೆ
ಆಕೆಯ ಮಾತು ನಂಬಿದ ಉದ್ಯಮಿ ಲಿಂಕ್ ಕ್ಲಿಕ್ ಮಾಡಿ, ಹೂಡಿಕೆ ಮಾಡಿದ್ದರು. ತನ್ನ ಪುತ್ರ ಮತ್ತು ಸ್ನೇಹಿತನ ಬ್ಯಾಂಕ್ ಖಾತೆಯಿಂದಲು ಹಣ ವರ್ಗಾಯಿಸಿದ್ದರು. ಒಟ್ಟು 14.48 ಲಕ್ಷ ರೂ. ಹೂಡಿಕೆ ಮಾಡಿದ್ದಾಗಿ ಆರೋಪಿಸಿದ್ದಾರೆ. ಬಳಿಕ ತಮ್ಮ ಹಣವನ್ನು ವಿತ್ ಡ್ರಾ ಮಾಡಲು ಯತ್ನಿಸಿದಾಗ 23 ಲಕ್ಷ ರೂ. ತೆರಿಗೆ ಪಾವತಿಸುವಂತೆ ಸೂಚಿಸಲಾಯಿತು.

ಅನುಮಾನಗೊಂಡು ವಿಚಾರಿಸಿದಾಗ ತಾನು ವಂಚನೆಗೊಳಗಾಗಿರುವುದು ಉದ್ಯಮಿಗೆ ಅರಿವಾಯಿತು. ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ರಾತ್ರಿ ನಾಯಿಗಳು ಬೊಗಳಿದವು ಅಂತಾ ಕಿಟಕಿಯಲ್ಲಿ ಇಣುಕಿದಾಗ ಕಾಣಿಸಿತು ಚಿರತೆ, ಸಿಸಿಟಿವಿಯಲ್ಲಿ ದೃಶ್ಯೆ ಸೆರೆ

LATEST NEWS
- ಕೂಡ್ಲಿಯಲ್ಲಿ ಸಾವಿರ ಸಾವಿರ ಜನರಿಂದ ಪುಣ್ಯ ಸ್ನಾನ, ಹೇಗಿದೆ ಈ ಬಾರಿ ಜಾತ್ರೆ?

- ಶಿವಮೊಗ್ಗದಲ್ಲಿ ಯುಗಾದಿ ಚಂದ್ರ ದರ್ಶನ, ಜನರಿಂದ ಪೂಜೆ, ಶುಭಾಶಯ ವಿನಿಮಯ

- ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್ | 20 ಮಾರ್ಚ್ 2026 | ಅಡಿಕೆ ಧಾರಣೆ

- ಕಾರು, ಬೈಕ್ ಡಿಕ್ಕಿ, ಯುವಕ ದಾರುಣ ಸಾವು, ಹೇಗಾಯ್ತು ಘಟನೆ?

- ಉಷಾ ನರ್ಸಿಂಗ್ ಹೋಂ ಸಿಗ್ನಲ್‌ನಲ್ಲಿನ ಅಪಘಾತ, ಸಿಸಿಟಿವಿ ದೃಶ್ಯ ಲಭ್ಯ, ಇಲ್ಲಿದೆ ಡಿಕ್ಕಿಯ ಕಂಪ್ಲೀಟ್ ಡಿಟೇಲ್ಸ್

About The Editor
ನಿತಿನ್ ಆರ್.ಕೈದೊಟ್ಲು
















