ಕುವೆಂಪು ವಿವಿಯಲ್ಲಿ ಮೇ 3ರಿಂದ ರಾಷ್ಟ್ರೀಯ ಭಾವೈಕ್ಯತಾ ಶಿಬಿರ, ಯಾರೆಲ್ಲ ಪಾಲ್ಗೊಳ್ತಾರೆ? ಏನೆಲ್ಲ ಇರುತ್ತೆ?

ಶಿವಮೊಗ್ಗ
LIVE

ಕಡಿಮೆ ಬಡ್ಡಿಯಲ್ಲಿ ಗೃಹ ಸಾಲ (HOME LOAN)

ನಿಮ್ಮ ಸ್ವಂತ ಮನೆಯ ಕನಸು ಈಗ ನನಸು!
ಮನೆ ಕಟ್ಟಲು ಅಥವಾ ಸೈಟ್ ಖರೀದಿಸಲು ಸಾಲ ಸೌಲಭ್ಯ.

✅ ಅತೀ ಕಡಿಮೆ ಬಡ್ಡಿ ದರ
✅ ತ್ವರಿತ ಸಾಲ ಮಂಜೂರಾತಿ
✅ ಸುಲಭ ಮರುಪಾವತಿ ಕಂತುಗಳು

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ:

99721 94422
*ಷರತ್ತುಗಳು ಅನ್ವಯಿಸುತ್ತವೆ

ಶಂಕರಘಟ್ಟ: ಕುವೆಂಪು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆಯ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ರಾಷ್ಟ್ರೀಯ ಭಾವೈಕ್ಯತಾ ಶಿಬಿರವು (Camp) ಮೇ 3ರಿಂದ 9ರ ವರೆಗೆ ಶಂಕರಘಟ್ಟದ ಜ್ಞಾನ ಸಹ್ಯಾದ್ರಿ ಆವರಣದಲ್ಲಿನಡೆಯಲಿದೆ.

ಶಿವಮೊಗ್ಗ ಲೈವ್‌ನ ಪ್ರತಿ ಅಪ್‌ಡೇಟ್‌ ನೀವೇ ಮೊದಲು ಪಡೆಯಲು ಕೆಳಗಿನ ಗ್ರೂಪ್‌ಗಳನ್ನು ಜಾಯಿನ್ ಆಗಿ:

ಇದನ್ನೂ ಓದಿ » ಜೋಗ ಜಲಪಾತ, ಮೊದಲ ದಿನವೇ ಜಲಾಧಾರೆ ಕಣ್ತುಂಬಿಕೊಂಡ ನೂರಾರು ಜನ

ವೈವಿಧ್ಯಮಯ ಸಂಸ್ಕೃತಿ ಕ್ರಿಯಾಶೀಲತೆಯನ್ನು ಬಿಂಬಿಸಲಿರುವ ಶಿಬಿರದಲ್ಲಿ ಕರ್ನಾಟಕ ಅಲ್ಲದೆ ಪಾಂಡಿಚೇರಿ, ತಮಿಳುನಾಡು, ಕೇರಳ, ಮಹಾರಾಷ್ಟ್ರ, ಆಂಧ್ರ ಪ್ರದೇಶದ ವಿಶ್ವವಿದ್ಯಾಲಯಗಳ 150 ಎನ್.ಎಸ್.ಎಸ್ ಸ್ವಯಂ ಸೇವಕರು, ಘಟಕದ ಕಾರ್ಯಕ್ರಮಾಧಿಕಾರಿಗಳು ಭಾಗವಹಿಸುವರು. ‘ವಿಕಸಿತ ಭಾರತಕ್ಕಾಗಿ ಯುವ ಜನತೆ’ ಎನ್ನುವ ವಿಶೇಷ ಕಲ್ಪನೆಯಲ್ಲಿ ಶಿಬಿರ (Camp) ರೂಪಿಸಲಾಗಿದೆ.

ಶಿಬಿರವನ್ನು ಶಾಸಕ ಡಾ. ಧನಂಜಯ್ ಸರ್ಜಿ ಉದ್ಘಾಟಿಸುವರು. ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಅಧ್ಯಕ್ಷತೆ ವಹಿಸುವರು.

Arya-PU-College-Shimoga.

ಏಳು ದಿನಗಳ ಈ ಶಿಬಿರದಲ್ಲಿ ವಿವಿಧ ವಿಷಯಗಳ ಮೇಲೆ ವಿಶೇಷ ಉಪನ್ಯಾಸ ನಡೆಯಲಿದೆ. ರೆಡ್‌ಕ್ರಾಸ್‌ನ ಡಾ. ವಿ.ಎಲ್.ಎಸ್.ಕುಮಾರ್, ದೀಕ್ಷಾ ನಾಯಕ್, ಡಾ.ಶ್ರೀಪತಿ, ಶರ್ಮಿಳಾ ರಾಮಕುಮಾ‌ರ್, ಆಮ್ಮ ರಾಮಚಂದ್ರ ಮೈಸೂರು ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸುವರು. ಸಮಾರೋಪ ಭಾಷಣವನ್ನು ಗಾಂಧಿವಾದಿ ಪ್ರೊ. ಜಿ.ಬಿ.ಶಿವರಾಜು ನೆರವೇರಿಸುವರು ಎಂದು ಕುವೆಂಪು ವಿವಿ ಎನ್‌ಎಸ್ ಎಸ್ ಕಾರ್ಯಕ್ರಮ ಸಂಯೋಜನಾಧಿಕಾರಿ ಡಾ. ಶುಭಾ ಮರವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment